ಚಿಕ್ಕಮಗಳೂರಿನಲ್ಲಿ ವಿದೇಶದಿಂದ ವಾಪಸಾಗಿದ್ದ ವೃದ್ಧೆ ಸಾವು; ಸ್ಥಳೀಯರಲ್ಲಿ ಆತಂಕ
ಚಿಕ್ಕಮಗಳೂರು, ಮಾರ್ಚ್ 27: ಆಸ್ಟ್ರೇಲಿಯಾದಿಂದ ಚಿಕ್ಕಮಗಳೂರಿಗೆ ವಾಪಸ್ಸಾಗಿದ್ದ ವೃದ್ಧೆಯೊಬ್ಬರು ನಿನ್ನೆ ಸಂಜೆ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತಗೊಂಡಿವೆ.
ಕೊರೊನಾ ಭೀತಿ ಆವರಿಸಿರುವ ಬೆನ್ನಲ್ಲೇ ವಿದೇಶದಿಂದ ವಾಪಸ್ಸಾಗಿದ್ದ 65 ವರ್ಷದ ವೃದ್ಧೆ ಸಾವನ್ನಪ್ಪಿರುವುದು ಆತಂಕವನ್ನೂ ಹೆಚ್ಚಿಸಿದೆ. ವಿದೇಶದಿಂದ ಬಂದು ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಈ ದಂಪತಿ ಮನೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.

ಇದೀಗ ವೃದ್ಧೆ ಸಾವನ್ನಪ್ಪಿದ್ದು, ವೈದ್ಯರ ಸಲಹೆ ಮೇರೆಗೆ ಗಂಟಲು ದ್ರವ ಹಾಗೂ ರಕ್ತ ಪರೀಕ್ಷೆಗೆ ಮಾದರಿಯನ್ನು ಕಳುಹಿಸಲಾಗಿದೆ. ಸಾವಿನ ನಿಖರ ವರದಿಗಾಗಿ ಜಿಲ್ಲಾಡಳಿತ ನಿರೀಕ್ಷಿಸುತ್ತಿದೆ. ಮನೆಯಲ್ಲಿರುವ ವೃದ್ಧನ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ವೃದ್ಧೆಯ ಸಾವಿನಿಂದಾಗಿ ಸ್ಥಳೀಯರೂ ಆತಂಕಕ್ಕೊಳಗಾಗಿದ್ದಾರೆ.












Click it and Unblock the Notifications