ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂವರಿಗೆ ಮಂಗನ ಕಾಯಿಲೆ ಸೋಂಕು
ಚಿಕ್ಕಮಗಳೂರು, ಫೆಬ್ರವರಿ 10: ಚಿಕ್ಕಮಗಳೂರಿನಲ್ಲಿ ಮತ್ತೆ ಮಂಗನ ಕಾಯಿಲೆ ಭೀತಿ ಎದುರಾಗಿದ್ದು, ಮೂವರು ಕಾರ್ಮಿಕರಿಗೆ ಮಂಗನಕಾಯಿಲೆ ಸೋಂಕು ತಗುಲಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಇಲ್ಲಿ ಕೆಲಸ ಮಾಡುವ ಮೂವರು ಮಧ್ಯ ಪ್ರದೇಶದ ಕಾರ್ಮಿಕರಿಗೆ ತಗುಲಿದ ಮಂಗನ ಕಾಯಿಲೆ ಸೋಂಕು ತಗುಲಿದೆ. ಜ್ವರ ಅಂತಾ ಆಸ್ಪತ್ರೆಗೆ ಬಂದಾಗ ಮಂಗನ ಕಾಯಿಲೆ ಇರುವ ಬಗ್ಗೆ ಮಾಹಿತಿ ಗೊತ್ತಾಗಿದೆ.
ಈ ಕಾರ್ಮಿಕರಿಂದ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದ್ದು, ಸ್ಥಳಕ್ಕೆ ವಿಚಕ್ಷಣ ಡಾಕ್ಟರ್ ಸುಭಾಷ್ ನೇತೃತ್ವದ ತಂಡ ದೌಡಾಯಿಸಿ, ಕಾರ್ಮಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಇನ್ನು ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ಕಾಯಿಲೆ ಹರಡದಂತೆ ಕ್ರಮ ಕೈಗೊಳ್ಳಲಾಗಿದ್ದು, ಮಂಗನಕಾಯಿಲೆ ಹರಡಿದ ಸ್ಥಳ ಹಾಟ್ ಸ್ಪಾಟ್ ಎಂದು ಪರಿಗಣನೆ ಮಾಡಲಾಗಿದೆ.

ಕಾಯಿಲೆ ಪತ್ತೆಯಾದ ಸ್ಥಳದ 5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ನಿರೋಧಕ ಲಸಿಕೆ ಹಾಕುತ್ತಿದ್ದು, 6 ರಿಂದ 65 ವರ್ಷದ ವಯೋಮಾನದವರಿಗೆ ಮಂಗನಕಾಯಿಲೆ ನಿರೋಧಕ ಲಸಿಕೆ ಕೊಡಲಾಗುತ್ತಿದೆ.












Click it and Unblock the Notifications