ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ರೆಸಾರ್ಟ್‌ಗೆ ಬೀಗ ಜಡಿದ ಚಿಕ್ಕಮಗಳೂರು ನಗರ ಪ್ರಾಧಿಕಾರ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್‌ 24: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಕ್ರಮವಾಗಿ ರೆಸಾರ್ಟ್ ಆರಂಭಿಸಿದ್ದವರಿಗೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಬಿಸಿ ಮುಟ್ಟಿಸಿದೆ.

ವ್ಯವಸಾಯದ ಭೂಮಿಯಾಗಿ ಗ್ರೀನ್ ಜೋನ್‌ನಲ್ಲಿದ್ದ ಭೂಮಿ ಕನ್ವರ್ಷನ್ ಕೂಡ ಆಗಿರದ ಜಾಗದಲ್ಲಿ ಅಕ್ರಮವಾಗಿ ಒಳಗಿಂದೊಳಗೆ ವ್ಯವಹಾರ ನಡೆಸುತ್ತಿದ್ದ ರೆಸಾರ್ಟ್‌ಗಳಿಗೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರಗಳು ಬೀಗ ಹಾಕಿದ್ದಾರೆ. ಈ ಹಿಂದೆ ಕೂಡ ಈ ರೆಸಾರ್ಟ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು.

ನಿಲ್ಲದ ಮಳೆಯ ಅವಾಂತರ: ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರುನಿಲ್ಲದ ಮಳೆಯ ಅವಾಂತರ: ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು

ಚಿಕ್ಕಮಗಳೂರು ನಗರದ ಅಲ್ಲಂಪುರ ಬಳಿಯ ಸರ್ವೇ ನಂಬರ್ 16/160ರ ಜಾಗದಲ್ಲಿ ಸವೆನ್-ಹೆವನ್ ಎಂಬ ಹೆಸರಿನಲ್ಲಿ ರೆಸಾರ್ಟ್ ನಿರ್ಮಾಣವಾಗಿತ್ತು. ಇದು ಅಕ್ರಮ ರೆಸಾರ್ಟ್ ಎಂದು ಇಂದು ತಹಶೀಲ್ದಾರ್, ಪೊಲೀಸ್ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ದಾಳಿ ಮಾಡಿ ರೆಸಾರ್ಟ್ ಅನ್ನು ಸೀಜ್ ಮಾಡಿದ್ದಾರೆ.

Illegal Resort Seized By Chikkamagalur City Authority

ಈ ವೇಳೆ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್, "ಒಂದು ವರ್ಷದ ಹಿಂದೆಯೇ ಈ ರೆಸಾರ್ಟ್‌ನ ಕೆಲಸ ನಡೆಯುವಾಗ ದಾಳಿ ಮಾಡಿ ಸೀಜ್ ಮಾಡಿದ್ದೇವು. ಅಂದು ಯಾವ ಕೆಲಸವನ್ನೂ ಮಾಡಲ್ಲ ಎಂದು ಹೇಳಿದ್ದರು. ಅವರೇ ಒಪ್ಪಿಕೊಂಡ ಮೇಲೂ ರಾತ್ರೋರಾತ್ರಿ ಒಳಗಿಂದೊಳಗೆ ಕೆಲಸ ಮಾಡಿದ್ದಾರೆ. ಸೀಜ್ ಮಾಡಿದ್ದರೂ ಕೂಡ ಹಿಂದಿನ ಗೇಟ್ ಓಪನ್ ಮಾಡಿಕೊಂಡು ರೂಂಗಳನ್ನ ಕೊಡುವ ಕೆಲಸ ಮಾಡಿದ್ದಾರೆ," ಎಂದರು.

English summary
Illegal resort seized by Chikkamagalur City Authority.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X