chikkamagaluru: ಹಸುಗೆ ಗುದ್ದಿ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಹರಿದ ಗ್ಯಾಸ್ ಲಾರಿ, ದೇಹ ಛಿದ್ರ-ಛಿದ್ರ!

ಚಿಕ್ಕಮಗಳೂರು ನವೆಂಬರ್ 4: ರಸ್ತೆ ಮಧ್ಯೆ ಮಲಗಿದ್ದ ಹಸುವಿಗೆ ಡಿಕ್ಕಿಯೊಡೆದು ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಗ್ಯಾಸ್ ಲಾರಿ ಹರಿದ ಪರಿಣಾಮ ಬೈಕ್ ಸವಾರನ ದೇಹ ಛಿದ್ರ-ಛಿದ್ರವಾಗಿ ರಸ್ತೆ ಮಧ್ಯೆ ಹರಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಕೆ.ಎಸ್.ಆರ್.ಟಿ.ಸಿ. ಡಿಪೋ ಬಳಿ ನಡೆದಿದೆ.

ಮೃತನನ್ನ ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಲ್ಕೆರೆ ಗ್ರಾಮದ 43 ವರ್ಷದ ವಿಶ್ವೇಂದ್ರ ಎಂದು ಗುರುತಿಸಲಾಗಿದೆ. ಮೂಡಿಗೆರೆಯಲ್ಲಿ ಹಾದುಹೋಗುವ ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 173ರಲ್ಲಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಮಧ್ಯೆ ಮಲಗಿದ್ದ ಹಸು ಕಾಣದೆ ಬೈಕಿನಲ್ಲಿದ್ದ ಬೈಕ್ ಸವಾರ ಹಸುವಿಗೆ ಡಿಕ್ಕಿಯೊಡೆದು ಕೆಳಗೆ ಬಿದ್ದಿದ್ದಾನೆ. ಹಿಂದೆಯಿಂದ ಬರುತ್ತಿದ್ದ ಗ್ಯಾಸ್ ಲಾರಿ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಹರಿದಿದೆ.

gas-lorry-ran-over-a-bike-rider

ಗ್ಯಾಸ್ ಲಾರಿ ಹರಿದ ಪರಿಣಾಮ ಬೈಕ್ ಸವಾರನ ದೇಹ ರಸ್ತೆ ಮಧ್ಯೆ ಛಿದ್ರ-ಛಿದ್ರವಾಗಿದೆ. ಎಷ್ಟರ ಮಟ್ಟಿಗೆ ಅಂದ್ರೆ ಆತನ ಮೃತದೇಹವನ್ನ ಆಸ್ಪತ್ರೆಗೆ ಸಾಗಿಸಲಾಗದಷ್ಟು ಮಟ್ಟಕ್ಕೆ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಬಂದ ಆಂಬುಲೆನ್ಸ್ ಚಾಲಕ ಮೃತದೇಹದ ತುಂಡುಗಳನ್ನ ಆಯ್ದು...ಆಯ್ದು.... ಸ್ಟ್ರಚ್ಚರ್ ಮೇಲೆ ಹಾಕಿಕೊಳ್ಳುವಷ್ಟು ದೇಹ ಛಿದ್ರವಾಗಿತ್ತು.

ಬೈಕಿನ ಹಿಂದೆ ಕೂತಿದ್ದ ಮಹಿಳೆ ಲಕ್ಷ್ಮಿ ಎಂಬುವರು ಕಾಲು ಕೂಡ ಕಟ್ ಆಗಿದೆ. ಅವರಿಗೆ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಹ್ಯಾಂಡ್ ಪೋಸ್ಟ್‍ನಿಂದ ಕೊಟ್ಟಿಗೆಹಾರದವರೆಗಿನ 22 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಮಧ್ಯೆ ಹಗಲಿರುಳು ರಾಸುಗಳು ರಸ್ತೆ ಮಧ್ಯೆ ಇರೋದ್ರಿಂದ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ.

ಹಸುಗಳಿಗೆ ಗುದ್ದಿ, ಹಸುಗಳಿಂದ ತಪ್ಪಿಸಿಕೊಳ್ಳಲು ಹೋಗಿ ಅಪಘಾತಗಳು ಆಗಿವೆ. ಕೈ-ಕಾಲು ಮುರಿದುಕೊಂಡವರು ಇದ್ದಾರೆ. ಈ ಬಗ್ಗೆ ಬೀಡಾಡಿ ಹಸುಗಳ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ. ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+