ಚಿಕ್ಕಮಗಳೂರು; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ

ಚಿಕ್ಕಮಗಳೂರು, ಮೇ 31: ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಚಿಕ್ಕಮಗಳೂರಿನಲ್ಲಿ ನಾಲ್ಕು ಪಟ್ಟಣ ಪಂಚಾಯಿತಿ, ಒಂದು ಪುರಸಭೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. 44 ವಾರ್ಡ್ ಪಟ್ಟಣ ಪಂಚಾಯಿತಿ, 23 ವಾರ್ಡ್ ಪುರಸಭೆಯ ಅಭ್ಯರ್ಥಿಗಳ ಭವಿಷ್ಯವೂ ಈ ಮೂಲಕ ನಿರ್ಧಾರಗೊಳ್ಳಲಿದೆ.

ಬೆಳಿಗ್ಗೆ 8 ಗಂಟೆಗೆ ಮತ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕಿಯೆ ಆರಂಭವಾಗಿದ್ದು, ಮತಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮೂಡಿಗೆರೆ ಪಟ್ಟಣ ಪಂಚಾಯಿತಿ 11 ವಾರ್ಡ್ ಗಳಲ್ಲಿ ಬಿಜೆಪಿಗೆ 6, ಕಾಂಗ್ರೆಸ್ ಗೆ 4 ಹಾಗೂ ಜೆಡಿಎಸ್ ಗೆ 1 ಸ್ಥಾನ ದೊರಕುವ ಮೂಲಕ ಬಿಜೆಪಿ ತೆಕ್ಕೆಗೆ ಅಧಿಕಾರ ಸಿಕ್ಕಿದೆ. ಕೊಪ್ಪ ಪಟ್ಟಣ ಪಂಚಾಯಿತಿ 11 ವಾರ್ಡ್ ಗಳಲ್ಲಿ ಬಿಜೆಪಿ - 6, ಕಾಂಗ್ರೆಸ್ - 4, ಜೆಡಿಎಸ್ -೦ ಹಾಗೂ ಪಕ್ಷೇತರ - 1 ಮತಗಳು ದೊರೆತಿದ್ದು, ಬಿಜೆಪಿ ಅಗ್ರಸ್ಥಾನದಲ್ಲಿದೆ. ಎನ್.ಆರ್.ಪುರ ಪಟ್ಟಣ ಪಂಚಾಯಿತಿ 11 ವಾರ್ಡ್ ಗಳಲ್ಲಿ ಬಿಜೆಪಿ ಗೆ 2 ಹಾಗೂ ಕಾಂಗ್ರೆಸ್ ಗೆ 9 ಸ್ಥಾನಗಳು ದೊರಕಿದ್ದು, ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ದೊರೆತಿದೆ. ಶೃಂಗೇರಿ ಪಟ್ಟಣ ಪಂಚಾಯಿತಿ 11ರಲ್ಲಿ ಬಿಜೆಪಿಗೆ 7, ಕಾಂಗ್ರೆಸ್ ಗೆ 3, ಜೆಡಿಎಸ್ ೦ ಹಾಗೂ ಪಕ್ಷೇತರಕ್ಕೆ ಒಂದು ಮತ ದೊರೆತಿದೆ.

chikkamagaluru local body election result

ಈ ಮೂಲಕ ಬಿಜೆಪಿ ಇಲ್ಲೂ ಮೇಲುಗೈ ಸಾಧಿಸಿದೆ. ಕಡೂರು ಪುರಸಭೆ 23 ವಾರ್ಡ್ ಗಳಲ್ಲಿ ಬಿಜೆಪಿಗೆ 6, ಕಾಂಗ್ರೆಸ್ - 7, ಜೆಡಿಎಸ್ - 6 ಪಕ್ಷೇತರ - 4 ಮತಗಳಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರ ನಡೆಸುವ ಸಾಧ್ಯತೆ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+