ಕೋಣದ ಹಾವಳಿಗೆ ತರೀಕೆರೆ ಜನರು ಹೈರಾಣ
ಚಿಕ್ಕಮಗಳೂರು, ಫೆಬ್ರುವರಿ 02: ಕೋಣವೊಂದು ಸಿಕ್ಕ ಸಿಕ್ಕ ಬೈಕ್ ಹಾಗೂ ಕಾರುಗಳು ಸೇರಿದಂತೆ ಜನರ ಮೇಲೆ ಎರಗಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನ ರಾಜ್ ನರ್ಸಿಂಗ್ ಹೋಂ ಎದುರು ನಡೆದಿದೆ.
ಇದ್ದಕ್ಕಿದ್ದಂತೆ ಕಟ್ಟಿದ್ದ ಹಗ್ಗವನ್ನು ಕಿತ್ತುಕೊಂಡು ರಸ್ತೆಗೆ ಬಂದ ಕೋಣ ರಾಷ್ಟ್ರೀಯ ಹೆದ್ದಾರಿ 208 ರಲ್ಲಿ ಸಾಗುತ್ತಿದ್ದ ಬೈಕ್ ಗಳಿಗೆ ಗುದ್ದಿದೆ. ಇದರಿಂದ ಸುಮಾರು 15 ಬೈಕ್ ಗಳು ಜಖಂಗೊಂಡಿವೆ.
ಇನ್ನು ಬೈಕ್ ನಲ್ಲಿ ಸಾಗುತ್ತಿದ್ದ ಓರ್ವ ದಂಪತಿಗಳ ಬೈಕ್ ಗೂ ಕೋಣ ಗುದ್ದಿದ ಪರಿಣಾಮ ದಂಪತಿಗಳಿಬ್ಬರು ಗಾಯಗೊಂಡಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರ್ ಗಳಿಗೂ ಕೋಣ ಗುದ್ದಿದ್ದು, ವಾಹನ ಸವಾರರು ಸುಮಾರು ಅರ್ಧಗಂಟೆಗಳ ಕಾಲ ಪರಿತಪಿಸುವಂತಾಯಿತು.

ಇನ್ನು ಬೈಕ್ ಗಳಿಗೆ ಹಾನಿ ಮಾಡುವ ಸಂದರ್ಭದಲ್ಲಿ ಕೋಣವನ್ನು ಓಡಿಸಲು ಹೋದಾಗ ಸಾರ್ವಜನಿಕರ ಮೇಲೂ ಕೋಣ ಎರಗಿದ್ದು, ಕೆಲಕಾಲ ಆತಂಕ ಉಂಟಾಗಿತ್ತು. ಇನ್ನು ಅರ್ಧಗಂಟೆಗಳ ನಂತರ ಸ್ಥಳೀಯರು ಹರಸಾಹಸ ಪಟ್ಟು ಕೋಣವನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.












Click it and Unblock the Notifications