ಇದು ಅಭ್ಯರ್ಥಿಗಳ ಚುನಾವಣೆ ಅಲ್ಲ, ಕರ್ನಾಟಕ ಅಭಿವೃದ್ಧಿಯ ಚುನಾವಣೆ - ಜೆ.ಪಿ‌.ನಡ್ಡಾ

ಚಿಕ್ಕಮಗಳೂರು, ಏಪ್ರಿಲ್‌ 28: ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತಗೆದುಕೊಂಡರೇ ಒಳ್ಳೆ ಫಲಿತಾಂಶ ಬರಲಿದೆ. ಈ ಚುನಾವಣೆ ಶೋಭಾ ಕರಂದ್ಲಾಜೆ, ದೀಪಕ್ ದೊಡ್ಡಯ್ಯ ಚುನಾವಣೆಯಲ್ಲ. ಕರ್ನಾಟಕ ಅಭಿವೃದ್ಧಿಯ ಚುನಾವಣೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಶುಕ್ರವಾರ ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಳಸ ಪಟ್ಟಣದಲ್ಲಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ದೀಪಕ್ ದೊಡ್ಡಯ್ಯ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆ ಕರ್ನಾಟಕ ಮುಂದಿನ ಭವಿಷ್ಯದ ಚುನಾವಣೆ. ಸರಿಯಾದ ಬಟನ್ ಒತ್ತಿದರೇ ಸರಿಯಾದ ಸರ್ಕಾರ ಬರುತ್ತದೆ. ಇಲ್ಲದಿದ್ದರೇ ಭ್ರಷ್ಟಾಚಾರದ ಸರ್ಕಾರ ಬರುತ್ತದೆ. ಆದ್ದರಿಂದ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

BJP National President JP Nadda Election Campaign In Chikkamagaluru

ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಿಎಫ್‌ಐ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದರು. ಸಿದ್ದರಾಮಯ್ಯ ಅವರು ಅವರ ಪಿಎಫ್‌ಐ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ಸು ಪಡೆದರು ಎಂದರು.

2008ರಲ್ಲಿ ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ, ಅರ್ಕಾವತಿ ಹಗರಣ, ಪ್ಲೇವೋವರ್ ಸ್ಕ್ಯಾಮ್‌, ಬಿಬಿಎಂಪಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಗರಣ ನಡೆದವು. ಸಿದ್ದರಾಮಯ್ಯ ಅವಧಿಯಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರ ನಡೆದಿದ್ದರೂ ಮತ್ತೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

BJP National President JP Nadda Election Campaign In Chikkamagaluru

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾನು ತಪ್ಪು ಮಾಡಿಲ್ಲ, ಸತ್ಯವಾಗಿದ್ದೇನೆ ಎಂದು ಹೇಳಲಿ. ಅವರ ಮೇಲೆ ಪ್ರಕರಣಗಳಿಲ್ಲವೇ, ಜಾಮೀನಿನ ಮೇಲೆ ಹೊರಗೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದರೂ. ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣ ನಿರ್ಮಾಣ ನಿಲ್ಲಿಸಲು ಮುಂದಾಗಿದ್ದರು ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಲಿಂಗಾಯತರಿಗೆ ಶೇ 2ರಷ್ಟು ಮೀಸಲಾತಿ ನೀಡಿದ್ದೇವೆ. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮೀಸಲಾತಿಯನ್ನು ಹಿಂಪಡೆಯುತ್ತೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಲಿಂಗಾಯತರ ಬಗ್ಗೆ ಚಿಂತೆಯಾಗಿದೆ. ನಿಜಲಿಂಗಪ್ಪ, ವೀರೆಂದು ಪಾಟೀಲ್‌ಗೆ ಕಾಂಗ್ರೆಸ್ ಏನು ಮಾಡಿದೆ ಗೊತ್ತಿಲ್ಲ, ಆದರೆ, ಸಿದ್ದರಾಮಯ್ಯ ಕಾಲದಲ್ಲಿ ರಾಜ್ಯದಲ್ಲಿ ದಂಗೆಯಾಗಿದೆ ಎಂದು ದೂರಿದರು.

ಯಡಿಯೂರಪ್ಪ ಅವರು ಪಿಎಫ್ ಸಂಘಟನೆಯ ಮೇಲೆ 125 ಪ್ರಕರಣ ಹಾಕಿಸಿದ್ದರು. ಆದರೆ ಸಿದ್ದರಾಮಯ್ಯ ಪ್ರಕರಣಗಳನ್ನು ಹಿಂಪಡೆದರು. ಇದಕ್ಕೆಲ್ಲ ಸಿದ್ದರಾಮಯ್ಯ ಅವರು ಉತ್ತರ ನೀಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲವನ್ನೂ ವಾಪಸ್ ಪಡೆಯುತ್ತಾರೆ ಎಂದು ಕಾಂಗ್ರೆಸ್‌ ವಿರುದ್ಧ ಗುಡುಗಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+