ಅಪ್ರಾಪ್ತ ಬಾಲಕಿ ಮೇಲೆ 17 ಜನರಿಂದ 5 ತಿಂಗಳು ಅತ್ಯಾಚಾರ; 8 ಜನರ ಬಂಧನ

ಚಿಕ್ಕಮಗಳೂರು, ಫೆಬ್ರವರಿ 3: 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 17 ಜನ ಕಾಮುಕರು ನಿರಂತರ 5 ತಿಂಗಳುಗಳ ಕಾಲ ಅತ್ಯಾಚಾರ ಎಸಗಿದ್ದು, ಈ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಚಿಕ್ಕಮ್ಮ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ.

ಬಾಲಕಿಯ ಮೇಲೆ ಅತ್ಯಾಚಾರ ಮಾಡಿದವರಿಗೆ ಸಹಕರಿಸಿದ ಚಿಕ್ಕಮ್ಮ ಸೇರಿ ಒಟ್ಟು 17 ಜನ ಆರೋಪಿಗಳ ಪೈಕಿ ಈಗಾಗಲೇ 8 ಜನರನ್ನು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪ್ರಾಪ್ತ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಿರುವ ಅವಳ ಚಿಕ್ಕಮ್ಮ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದೇವೆ. ಬಾಲಕಿಯನ್ನು ಲೈಂಗಿಕವಾಗಿ ಶೋಷಿಸಿದ ಉಳಿದ ಒಂಬತ್ತು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

Chikkamagaluru : 17 People Sexually Exploit Minor Girl For 5 Months In Sringeri; 8 Including Aunt Held

ಅತ್ಯಾಚಾರ ಆರೋಪಿಗಳನ್ನು ಸಣ್ಣ ಅಭಿ, ಗಿರೀಶ್ ಆನೆಗುಂದ, ವಿಕಾಸ್, ಮಣಿಕಾಂತ್, ಸಂಪತ್, ಅಶ್ವತ್ ಗೌಡ, ರಾಜೇಶ್, ಅಮಿತ್, ಸಂತೋಷ್, ನಿರಂಜನ್, ನಯನಗೌಡ, ಅಭಿಗೌಡ ಮತ್ತು ಯೋಗೀಶ್ ಎಂದು ಗುರುತಿಸಲಾಗಿದೆ.

ಈ ಕುರಿತು ಶೃಂಗೇರಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, 15 ಆರೋಪಿಗಳಲ್ಲದೆ ಇತರರು ಸಹ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ಎಲ್ಲಾ ಅರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಹೆಣೆದಿದ್ದಾರೆ.

ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ತಾಯಿಯನ್ನು ಕಳೆದುಕೊಂಡಿದ್ದ ಬಾಲಕಿಯನ್ನು 7ನೇ ತರಗತಿ ಮುಗಿಸುವವರೆಗೂ ಹಾವೇರಿಯಲ್ಲಿ ಅವರ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. ಬಾಲಕಿ ತಂದೆ ಮತ್ತೊಂದು ಮದುವೆಯಾದ ನಂತರ ಬಾಲಕಿಯನ್ನು ತಾಯಿಯ ಸಂಬಂಧಿ ಚಿಕ್ಕಮ್ಮ ಶೃಂಗೇರಿಗೆ ಕರೆತಂದಿದ್ದರು. ಇಲ್ಲಿ ಚಿಕ್ಕಮ್ಮ ಮತ್ತು ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದಳು ಎಂದು ಚಿಕ್ಕಮಗಳೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸುಬ್ರಮಣ್ಯ ಜಿ. ಹೇಳಿದರು.

ಪೊಲೀಸರ ಪ್ರಕಾರ, ಅತ್ಯಾಚಾರ ಅರೋಪಿಗಳು ಬಾಲಕಿಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿದ್ದಾರೆ. ನಂತರ ಕಾಮುಕರ ಕೃತ್ಯ ಚಿಕ್ಕಮ್ಮನ ಗಮನಕ್ಕೆ ಬಂದಿದ್ದರೂ, ಪೊಲೀಸ್ ದೂರು ನೀಡದೆ ಅತ್ಯಾಚಾರಿಗಳಿಗೆ ಸಹಕರಿಸಿದ್ದಾರೆ. ಈ ಸಂಬಂಧ ಬಾಲಕಿ ಚಿಕ್ಕಮ್ಮ ಹಾಗೂ 15 ಜನ ಅತ್ಯಾಚಾರಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+