ಶೃಂಗೇರಿ; ಸಾಮೂಹಿಕ ಅತ್ಯಾಚಾರ, 17 ಜನರ ವಿರುದ್ಧ ಎಫ್‌ಐಆರ್
ಚಿಕ್ಕಮಗಳೂರು, ಜನವರಿ 31; 15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಶೃಂಗೇರಿಯಲ್ಲಿ ನಡೆದಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, 17 ಜನರು ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಅತ್ಯಾಚಾರಕ್ಕೆ ಬಾಲಕಿ ಚಿಕ್ಕಮ್ಮ ಗೀತಾ ಸಹ ಸಹಕಾರ ನೀಡಿದ್ದಾರೆ ಎಂಬ ಆರೋಪವಿದ್ದು, ಅವರ ಮೇಲೆ ಸಹ ಎಫ್‌ಐಆರ್ ದಾಖಲಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಸುಬ್ರಮಣ್ಯ ಎಂಬುವವರು ಈ ಕುರಿತು ದೂರು ನೀಡಿದ್ದರು. ಘಟನೆ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಮೂಲದ ಬಾಲಕಿ ತಾಯಿ ನಿಧನದ ಬಳಿಕ ಚಿಕ್ಕಮ್ಮ ಗೀತಾ ಅವರ ಜೊತೆ ಇದ್ದರು. 2020ರ ಸೆಪ್ಟೆಂಬರ್‌ನಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.

ಬಾಲಕಿ ಮನೆಯಲ್ಲಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು, ಅದನ್ನು ವಿಡಿಯೋ ಮಾಡಿಕೊಂಡಿದ್ದ. ಬಳಿಕ ವಿಡಿಯೋ ತೋರಿಸಿ ಆಕೆಗೆ ಬ್ಲಾಕ್ ಮೇಲ್ ಮಾಡಿದ್ದು, ಸ್ನೇಹಿತರೂ ಸಹ ಆಕೆಯ ಮೇಲೆ ಅತ್ಯಾಚಾರ ನಡೆಸಲು ವ್ಯಕ್ತಿ ಪ್ರೇರೆಪಣೆ ನೀಡಿದ್ದ.
ಬಾಲಕಿಯನ್ನು ರಕ್ಷಣೆ ಮಾಡಿ ಸಾಂತ್ವಾನ ಕೇಂದ್ರಕ್ಕೆ ಕಳಿಸಲಾಗಿದೆ. ಪ್ರಕರಣದಲ್ಲಿ ಹಲವು ರೀತಿಯ ಗೊಂದಲಗಳಿದ್ದು, ತನಿಖೆ ಬಳಿಕ ಎಲ್ಲವೂ ತಿಳಿಯಲಿದೆ. ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದ್ದು, ಪೊಲೀಸರು 17 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.
ಅತ್ಯಾಚಾರ ನಡೆಸಿದ 15 ಜನರ ಹೆಸರು ಬಾಲಕಿಗೆ ತಿಳಿದಿದೆ. ಬಾಲಕಿಯ ಚಿಕ್ಕಮ್ಮ ಸಹ ಇದಕ್ಕೆ ಸಹಕಾರ ನೀಡಿರುವ ಆರೋಪ ಕೇಳಿ ಬಂದಿದೆ. ಬಾಲಕಿಯನ್ನು ಚಿಕ್ಕಮಗಳೂರಿನ ಸ್ವಾಧಾರ ಕೇಂದ್ರಕ್ಕೆ ಕಳುಹಿಸಲಾಗಿದೆ.












Click it and Unblock the Notifications