ಶಿಡ್ಲಘಟ್ಟದಲ್ಲಿ ಅತ್ಯಾಧುನಿಕ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ:ಸಿಎಂ.ಬಸವರಾಜ ಬೊಮ್ಮಾಯಿ
ಚಿಕ್ಕಬಳ್ಳಾಪುರ, ಮಾರ್ಚ್ 12: ಶಿಡ್ಲಘಟ್ಟದಲ್ಲಿ ಅತ್ಯಾಧುನಿಕ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಎಂದು ಸಿಎಂ.ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಕಂದಾಯ ಇಲಾಖೆಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ವತಿಯಿಂದ ಗುಂಗೀರ್ಲಹಳ್ಳಿಯಲ್ಲಿ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಕಲ್ಬುರ್ಗಿ ಹಾಗೂ ಹಾವೇರಿ ಜಿಲ್ಲೆಯಲ್ಲಿ 30 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣ ಮಾಡುವ ಯೋಜನೆಗೆ ಶಿಡ್ಲಘಟ್ಟವನ್ನು ಸೇರ್ಪಡೆ ಮಾದಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರೇಷ್ಮೆ ಉತ್ಪಾದನೆಯನ್ನು ವೃದ್ಧಿಸಲು ದ್ವಿತಳಿ ಬಿತ್ತನೆ ಗೂಡಿಗೆ ಸಹಾಯಧನ 10,000 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದು. ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ 3000 ಕೋಟಿ ಅನುದಾನವನ್ನು ಏರಿಸಲಾಗಿದೆ ಎಂದರು.
ಭೂ ಮಾಫಿಯಾ ಮೇಲೆ ಕಠಿಣ ಕ್ರಮ
ಈ ಭಾಗದ ರೈತರ ಬೆವರಿನ ಹನಿಗೆ ಎತ್ತಿನಹೊಳೆ ನೀರು ತಂದು ಭೂಮಿತಾಯಿಗೆ ಹಸಿರ ಸೀರೆ ಉಡಿಸುವ ಮಹತ್ವಾಕಾಂಕ್ಷೆಯ ಇದೆ. ಸರ್ಕಾರದ ಸೌಲಭ್ಯಗಳು ಜನರ ಜನರ ಬಳಿಗೆ ತರುವ ಉದ್ದೇಶವಿದೆ. ಅಂತೆಯೇ ಜನರಿಗೆ ತೊಂದರೆ ನೀಡುವಂತಹ ಮಾಫಿಯಾಗಳು ಅದರಲ್ಲೂ ಭೂ ಮಾಫಿಯಾದ ಮೇಲೆ ಸರ್ಕಾರ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಜನರ ಸರ್ಕಾರ ಕಟಿಬದ್ಧವಾಗಿದೆ ಕೆಲಸ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ರೈತರಿಗಾಗಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ :
ಹಾಲು ಉತ್ಪಾದನೆ ಮೂಲಕ ಆರ್ಥಿಕ ಚಟುವಟಿಕೆಗೆ ಇಂಬು ನೀಡಲಾಗುತ್ತಿದೆ ರೈತರಿಂದ ರೈತರಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಕೆಎಂಎಫ್ ನಲ್ಲಿ 23 ಸಾವಿರ ಕೋಟಿ ವ್ಯವಹಾರ ಒಂದು ತಿಂಗಳಿಗೆ ಆಗುತ್ತದೆ ರೈತರಿಗಾಗಿ ರೈತರ ಬ್ಯಾಂಕ್ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪಿಸಲು 100 ಕೋಟಿಗಳ ಅನುದಾನವನ್ನು ನೀಡುವ ಮೂಲಕ ರೈತರಿಗಾಗಿ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ದೇಶದಲ್ಲೇ ಪ್ರಥಮ ಬಾರಿ ಹಾಲು ಉತ್ಪಾದಕರ ಸ್ಥಾಪಿಸಲು ಹಣವನ್ನು ಒದಗಿಸಿದೆ. ಇದು ರೈತಪರ ಬಡವರಪರ ಸರ್ಕಾರ ಎಂದರು.











Click it and Unblock the Notifications