Get Updates
Get notified of breaking news, exclusive insights, and must-see stories!

ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ ಅವರ ಆಸ್ತಿ ಎಷ್ಟು?

Recommended Video

      Lok Sabha Elections 2019 : ಚಿಕ್ಕಬಳ್ಳಾಪುರದ ಬಿಜೆಪಿ ಅಭ್ಯರ್ಥಿ ಬಿ ಎನ್ ಬಚ್ಚೇಗೌಡ ಒಟ್ಟು ಆಸ್ತಿ ಎಷ್ಟಿದೆ?

      ಬೆಂಗಳೂರು, ಮಾರ್ಚ್‌ 29: ಬಿಜೆಪಿ ಮುಖಂಡ, ಮಾಜಿ ಕಾರ್ಮಿಕ ಸಚಿವ ಬಚ್ಚೇಗೌಡ ಅವರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

      ಈಗಾಗಲೇ ನಾಮಪತ್ರ ಸಲ್ಲಿಸಿರುವ ಅವರು ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ, ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿರುವ ಅವರು, ಈ ಬಾರಿ ಗೆಲ್ಲಲೇಬೇಕೆಂಬ ಪಣ ತೊಟ್ಟಿದ್ದಾರೆ.

      ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

      ಬಚ್ಚೇಗೌಡ ಅವರು ಬಹು ದಶಕಗಳಿಂದ ಹೊಸಕೋಟೆಯಲ್ಲಿ ಗಟ್ಟಿ ರಾಜಕೀಯ ಮಾಡಿಕೊಂಡು ಬಂದಿರುವವರು. ಪಾಳ್ಯೆಗಾರರ ವಂಶಕ್ಕೆ ಸೇರಿದ ಬಚ್ಚೇಗೌಡರ ಆಸ್ತಿ ಕಡಿಮೆ ಏನಿಲ್ಲ.

      ಬಚ್ಚೇಗೌಡರು ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯಂತೆ ಅವರಿಗೆ ಈ ಆರ್ಥಿಕ ವರ್ಷದಲ್ಲಿ 1.37 ಕೋಟಿ ಆದಾಯ ಬಂದಿದೆ, ಪತ್ನಿ ಉಮಾಗೌಡ ಅವರಿಗೆ 21.17 ಲಕ್ಷ ಆದಾಯ ಬಂದಿದೆ. ಅಷ್ಟಕ್ಕೆ ಅವರು ಆದಾಯ ತೆರಿಗೆ ಪಾವತಿಸಿದ್ದಾರೆ.

      ಬಚ್ಚೇಗೌಡ ಅವರ ಬಳಿ 10 ಲಕ್ಷ ನಗದಿದೆ, ಪತ್ನಿ ಉಮಾಗೌಡ ಅವರ ಬಳಿ 5 ಲಕ್ಷ ನಗದಿದೆ. ಬ್ಯಾಂಕ್ ಖಾತೆಯಲ್ಲಿ 11.14 ಲಕ್ಷ ಹಣ ಇದೆ, ಪತ್ನಿ ಅವರ ಖಾತೆಯಲ್ಲಿ 10.50 ಲಕ್ಷ ಹಣವಿದೆ. ಷೇರುಗಳಲ್ಲಿ 10.08 ಲಕ್ಷ ಹೂಡಿಕೆ ಮಾಡಿದ್ದಾರೆ, ಪತ್ನಿ ಹೆಸರಲ್ಲಿ 2.52 ಕೋಟಿ ಮೌಲ್ಯದ ಷೇರುಗಳು ಇವೆ.

      ಬಚ್ಚೇಗೌಡ ಅವರ ಬಳಿ ಇರುವ ಕಾರುಗಳೆಷ್ಟು?

      ಬಚ್ಚೇಗೌಡ ಅವರ ಬಳಿ ಇರುವ ಕಾರುಗಳೆಷ್ಟು?

      ಬಚ್ಚೇಗೌಡ ಅವರು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಯಾವುದೇ ಸಾಲ ನೀಡಿಲ್ಲ, ಆದರೆ ಪತ್ನಿ ಉಮಾಗೌಡ ಅವರು, ವಿವಿಧ ಸಂಸ್ಥೆಗಳಿಗೆ 4.34 ಕೋಟಿ ಸಾಲ ನೀಡಿದ್ದಾರೆ. ಬಚ್ಚೇಗೌಡ ಹಾಗೂ ಪತ್ನಿ ಇಬ್ಬರ ಹೆಸರಿನಲ್ಲೂ ಯಾವುದೇ ಮೋಟಾರು ವಾಹನ ಇಲ್ಲ. ಬಚ್ಚೇಗೌಡ ಅವರ ಬಳಿ 30 ಲಕ್ಷ ಮೌಲ್ಯದ ಆಭರಣ ಇದ್ದರೆ, ಪತ್ನಿ ಅವರ ಬಳಿ 90 ಲಕ್ಷ ಮೌಲ್ಯದ ಚಿನ್ನಾಭರಣ ಇದೆ.

      ಕೃಷಿ ಭೂಮಿ ಎಷ್ಟಿದೆ? ಮೌಲ್ಯವೆಷ್ಟು?

      ಕೃಷಿ ಭೂಮಿ ಎಷ್ಟಿದೆ? ಮೌಲ್ಯವೆಷ್ಟು?

      ಬಚ್ಚೇಗೌಡ ಅವರ ಹೆಸರಿನಲ್ಲಿ 60.40 ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ 47 ಎಕರೆ ಪಿತ್ರಾರ್ಜಿತ ಭೂಮಿಯಾಗಿದೆ. ಇವುಗಳ ಇಂದಿನ ಮಾರುಕಟ್ಟೆ ಮೌಲ್ಯ 56 ಕೋಟಿ ರೂಪಾಯಿಗಳು. ಪತ್ನಿ ಉಮಾಗೌಡ ಅವರ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ. ಬಚ್ಚೇಗೌಡ ಅವರ ಹೆಸರಿನಲ್ಲಿ ಯಾವುದೇ ಕೃಷಿಯೇತರ ಜಮೀನು ಇಲ್ಲ, ಪತ್ನಿ ಅವರ ಹೆಸರಿನಲ್ಲಿ 8 ಕೋಟಿ ಮೌಲ್ಯದ ಕೃಷಿಯೇತರ ಜಮೀನು ಇದೆ.

      ವಾಣಿಜ್ಯ ಕಟ್ಟಡಗಳು ಎಷ್ಟಿವೆ?

      ವಾಣಿಜ್ಯ ಕಟ್ಟಡಗಳು ಎಷ್ಟಿವೆ?

      ಬಚ್ಚೇಗೌಡ ಅವರ ಹೆಸರಲ್ಲಿ ಯಾವುದೇ ವಾಣಿಜ್ಯ ಕಟ್ಟಡಗಳು ಇಲ್ಲ, ಪತ್ನಿ ಹೆಸರಲ್ಲಿ 10 ಕೋಟಿ ಮೌಲ್ಯದ ವಾಣಿಜ್ಯ ಕಟ್ಟಡವನ್ನು ಲಾಲ್‌ಬಾಗ್‌ನಲ್ಲಿದೆ. ಬಚ್ಚೇಗೌಡ ಅವರ ಹೆಸರಲ್ಲಿ 83 ಕೋಟಿ ಮೌಲ್ಯದ ವಸತಿ ಕಟ್ಟಡಗಳಿವೆ. ಪತ್ನಿ ಹೆಸರಲ್ಲಿ 24 ಕೋಟಿಯ ವಸತಿ ಕಟ್ಟಡಗಳಿವೆ. ಬಚ್ಚೇಗೌಡ ಹಾಗೂ ಪತ್ನಿ ಅವರಿಗೆ ಯಾವುದೇ ಸಾಲದ ಹೊರೆಗಳು ಇಲ್ಲ.

      ಬಚ್ಚೇಗೌಡ ಅವರ ಒಟ್ಟು ಆಸ್ತಿ ಎಷ್ಟು?

      ಬಚ್ಚೇಗೌಡ ಅವರ ಒಟ್ಟು ಆಸ್ತಿ ಎಷ್ಟು?

      ಬಚ್ಚೇಗೌಡ ಅವರ ಬಳಿ 60.60 ಲಕ್ಷ ಮೌಲ್ಯದ ಚರಾಸ್ತಿ ಇದೆ, ಪತ್ನಿ ಅವರ ಬಳಿ 7.74 ಕೋಟಿ ಮೌಲ್ಯದ ಚರಾಸ್ತಿ ಇದೆ. ಬಚ್ಚೇಗೌಡ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿಯ ಒಟ್ಟು ಮೌಲ್ಯ 83 ಕೋಟಿ, ಪತ್ನಿ ಅವರ ಹೆಸರಿನಲ್ಲಿರುವ ಸ್ಥಿರಾಸ್ತಿ ಮೌಲ್ಯ 24 ಕೋಟಿ. ಬಚ್ಚೇಗೌಡ ಅವರ ಒಟ್ಟು ಆಸ್ತಿ ಮೌಲ್ಯ 84.60 ಕೋಟಿ, ಪತ್ನಿ ಉಮಾಗೌಡ ಅವರ ಒಟ್ಟು ಆಸ್ತಿ ಮೌಲ್ಯ 31.98 ಕೋಟಿ.

      ಬಚ್ಚೇಗೌಡ ಅವರ ಶಿಕ್ಷಣ, ಆದಾಯದ ಮೂಲ

      ಬಚ್ಚೇಗೌಡ ಅವರ ಶಿಕ್ಷಣ, ಆದಾಯದ ಮೂಲ

      ಬಚ್ಚೇಗೌಡ ಅವರು ಬಿ.ಎಎಸ್‌ಸಿ ಮತ್ತು ಬಿಎಲ್‌ ಅನ್ನು ಮುಗಿಸಿದ್ದಾರೆ. ಅವರು ಸಾರ್ವಜನಿಕ ಸೇವೆ ನಿರತರಾಗಿದ್ದು, ಇನ್ನಾವುದೇ ನೌಕರಿಯನ್ನು ಮಾಡುತ್ತಿಲ್ಲ. ಅವರಿಗೆ ಬಾಡಿಗೆ ಮತ್ತು ಇತರ ವ್ಯವಹಾರಗಳು ಆದಾಯದ ಮೂಲ. ಬಚ್ಚೇಗೌಡ ಅವರ ಮೇಲೆ ಕ್ರಿಮಿನಲ್ ಪ್ರಕರಣಗಳಿಲ್ಲ, ಪತ್ನಿ ಉಮಾಗೌಡ ಅವರು ಗೃಹಿಣಿ ಯಾಗಿದ್ದಾರೆ, ಅವರಿಗೆ ಬಾಡಿಗೆ ಮೂಲಕ ಆದಾಯ ಬರುತ್ತಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+