Get Updates
Get notified of breaking news, exclusive insights, and must-see stories!

Chikkaballapur Lok Sabha Election 2024: ಚಿಕ್ಕಬಳ್ಳಾಪುರದ ಸೂಕ್ಷ್ಮ ಮತಗಟ್ಟೆಗಳಲ್ಲಿ ನಿಷೇಧಾಜ್ಞೆ ಜಾರಿ!

ಚಿಕ್ಕಬಳ್ಳಾಪುರ ಏಪ್ರಿಲ್ 26: ತೀವ್ರ ಹಣ ಹಣಿಗೆ ಸಾಕ್ಷಿಯಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆಯ ಮತದಾನವು ಬೆಳಗ್ಗೆ ಏಳರಿಂದಲೇ ಬಿರುಸು ಪಡೆದುಕೊಂಡಿದ್ದು ಹಲವು ಮತಗಟ್ಟೆಗಳ ಬಳಿ ಮತದಾರರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸಲು ಮುಂದಾಗಿರುವ ದೃಶ್ಯ ಕಂಡು ಬರುತ್ತಿದೆ.

ರಾಜ್ಯಮಟ್ಟದಲ್ಲಿ ಸದ್ದು ಮಾಡಿರುವ ಲೋಕಸಭಾ ಚುನಾವಣಾ ಕ್ಷೇತ್ರಗಳಲ್ಲಿ ಚಿಕ್ಕಬಳ್ಳಾಪುರ ಒಂದಾಗಿದ್ದು ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2326 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಎಲ್ಲ ಕಡೆಯು ಸುಗಮವಾಗಿ ಮತದಾನ ನಡೆಯುತ್ತಿದೆ.

Chikkaballapur Prohibition in sensitive polling stations

ಚಿಕ್ಕಬಳ್ಳಾಪುರ ಲೋಕಸಭಾ ಕಣದಲ್ಲಿರುವ 29 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತದಾನ ಇಂದು ಬೆಳಗ್ಗೆ ಏಳರಿಂದ ಸಂಜೆ ಆರರವರೆಗೆ ಮತದಾನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆಗಳ ಬೆಂಕಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳ ತೋರಿಸಿ ತಮ್ಮ ಹಕ್ಕನ್ನು ಚಲಾಯಿಸಬಹುದು.

ಪಾರದರ್ಶಕ ಮತದಾನಕ್ಕಾಗಿ ಈಗಾಗಲೇ ಕ್ಷೇತ್ರದಾದ್ಯಂತ ನಿಷೇಧಾಗ್ನಿ ಜಾರಿ ಮಾಡಲಾಗಿದೆ ಮತದಾನದಂದು ಯಾವುದೇ ಅಭ್ಯರ್ಥಿಯು ಮತಗಟ್ಟೆ ವ್ಯಾಪ್ತಿಯ 100 ಮೀಟರ್ ಅಂತರದೊಳಗೆ ಪ್ರಚಾರ ಮಾಡುವಂತಿಲ್ಲ ಹಾಗೆಯೇ ಮತಗಟ್ಟೆ ಬಳಿ ಮೊಬೈಲ್ ಸೇರಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡು ಹೋಗುವಂತಿಲ್ಲ ಎಂದು ಆಯೋಗ ಸೂಚಿಸಿದೆ.

ಮುಂದುವರಿದ ಪ್ರಯಾಣಿಕರ ಪರದಾಟ :-

ಜಿಲ್ಲಾಡಳಿತವು ಚುನಾವಣಾ ಸಿಬ್ಬಂದಿಯನ್ನು ಆಯಾ ಮತಗಟ್ಟೆಗೆ ಕರೆದುಕೊಂಡು ಹೋಗಲು ರಾಜ್ಯ ಸಾರಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ಆಯಾ ಮಸ್ಟರಿಂಗ್ ಕೇಂದ್ರಗಳಲ್ಲಿ ಉಳಿದುಕೊಂಡಿದ್ದು, ಮಧ್ಯಾಹ್ನ 3:00 ನಂತರ ಸಿಬ್ಬಂದಿಯೊಂದಿಗೆ ಮತಗಟ್ಟೆಗಳಿಗೆ ತೆರಳಿದವು.

Chikkaballapur Prohibition in sensitive polling stations

ಈ ನಡುವೆ ಬಸ್ಸುಗಳ ಕೊರತೆಗೆ ಪ್ರಯಾಣಿಕರು ತೊಂದರೆ ಅನುಭವಿಸಿದರು ನಿಲ್ದಾಣದಲ್ಲಿ ಸಂಸ್ಥೆಯ ಮೇಲ್ವಿಚಾರಕರು ಜನರಿಗೆ ಸಾರಿಗೆ ವ್ಯೆಯ ಮಾರ್ಗ ಬದಲಾವಣೆಯ ಬಗ್ಗೆ ತಿಳಿಸುತ್ತಿದ್ದರಾದರು, ಸಮಸ್ಯೆ ಶುಕ್ರವಾರವು ಸಹ ಮುಂದುವರಿದಿದ್ದು ಬೆಂಗಳೂರು ಸೇರಿದಂತೆ ಇನ್ನಿತರೇ ಕೆಲಸ ಕಾರ್ಯಗಳ ನಿಮಿತ್ತ ಹೊರ ಪ್ರದೇಶಗಳಿಂದ ತಮ್ಮ ಗ್ರಾಮಗಳತ್ತ ಬಂದ ಮತದಾರರಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೇ ಪರದಾಡುವ ಸನ್ನಿವೇಶ ಕಂಡು ಬರುತ್ತಿದೆ.

ನಂದಿ ಗಿರಿಧಾಮಕ್ಕೆ ನೋ ಎಂಟ್ರಿ :-

ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲಿ ಎಂಬ ಕಾರಣದಿಂದಾಗಿ ಜಿಲ್ಲಾಡಳಿತವು ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮತ ಚಲಾಯಿಸುವ ಸಲುವಾಗಿ ಈಗಾಗಲೇ ತರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ ಆದರೆ ಸರ್ಕಾರಿ ರಜೆಯನ್ನ ಬಹುತೇಕ ಜನರು ದುರುಪಯೋಗಪಡಿಸಿಕೊಂಡು ಪ್ರವಾಸಿ ತಾಣಗಳಿಗೆ ತೆರಳಿ ಖುಷಿಪಡುತ್ತಾರೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ದಿಟ್ಟವಾದ ಕ್ರಮವನ್ನು ತೆಗೆದುಕೊಂಡಿದೆ ಎಂಬುದು ಹಲವು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಸಖಿ ಮತಗಟ್ಟೆಗಳು :-

ಮತದಾರರನ್ನು ಆಕರ್ಷಿಸುವ ಸಲುವಾಗಿ ಮತಗಟ್ಟೆಯ ಮುಖ್ಯದ್ವಾರಕ್ಕೆ ಬಣ್ಣ ಬಣ್ಣದ ಬಲೂನ್, ಬಾವುಟ, ತಳಿರು ತೋರಣ ಕಟ್ಟಿ ರತ್ನಗಂಬಳಿ ಹಾಕಲಾಗಿದೆ. ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುಡಿಯುವ ನೀರು ನೆರಳು ಚೌಚಗೃಹ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಪ್ರತಿ ಮತಗಟ್ಟೆಯಲ್ಲಿ ಕಲ್ಪಿಸಲಾಗಿದೆ. ಸೆಳೆಯುವ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ 5 ಮತಗಟ್ಟೆಗಳನ್ನ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ಥಾಪಿಸಲಾಗಿದೆ.

ವಿಶೇಷ ಮತಗಟ್ಟೆಗಳು:-

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ 2326 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಶೇಕಡ 50 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ವಿಶೇಷವಾಗಿ 40 ಮಹಿಳಾ ಮತಗಟ್ಟೆಗಳು, 8 ಅಂಗವಿಕಲರ ಮತಗಟ್ಟೆಗಳು, 8 ಯುವ ಮತಗಟ್ಟೆಗಳು, ಹಾಗೂ 8 ಯತ್ನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ಮತಗಟ್ಟೆಗಳಿಗೆ ಸಕಲ ಸೌಕರ್ಯ ಒದಗಿಸಲಾಗಿದೆ ಅಂಗವಿಕಲರಿಗೆ ಗಾಲಿ ಕುರ್ಚಿ, ರ್ಯಾಂಪ್ ವ್ಯವಸ್ಥೆ ಇರುತ್ತದೆ. ಮತದಾರರಿಗೆ ವೋಟರ್ಸ್ ಸ್ಲೀಪ್ ಗಳನ್ನು ಬಿ ಎಲ್ ಓ ಗಳ ಮೂಲಕ ಈಗಾಗಲೇ ತಲುಪಿಸಿದ್ದು, ಮತದಾರರು ಈ ಸ್ಲಿಪ್ ಗಳನ್ನು ತೋರಿಸುವ ಮೂಲಕ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಯ ಕೆಲಸವನ್ನು ಮತ್ತಷ್ಟು ಸುಗಮಗೊಳಿಸುತ್ತಿದ್ದು, ಮತದಾನ ಪ್ರಕ್ರಿಯೆಯೂ ವೇಗವಾಗಿ ನಡೆಯುತ್ತಿದೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತದಾರರ ಅಂಕಿ ಅಂಶ :- ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಗೌರಿಬಿದನೂರಿನಲ್ಲಿ 259 ಮತಗಟ್ಟೆಗಳು, ಬಾಗೇಪಲ್ಲಿಯಲ್ಲಿ 267 ಮತಗಟ್ಟೆಗಳು, ಚಿಕ್ಕಬಳ್ಳಾಪುರದಲ್ಲಿ 252 ಮತಗಟ್ಟೆಗಳು, ಯಲಹಂಕದಲ್ಲಿ 411 ಮತಗಟ್ಟೆಗಳು, ಹೊಸಕೋಟೆಯಲ್ಲಿ 293 ಮತಗಟ್ಟೆಗಳು, ದೇವನಹಳ್ಳಿಯಲ್ಲಿ 292 ಮತಗಟ್ಟೆಗಳು, ದೊಡ್ಡಬಳ್ಳಾಪುರದಲ್ಲಿ 276 ಮತಗಟ್ಟೆಗಳು, ನೆಲಮಂಗಲದಲ್ಲಿ 276 ಮತಗಟ್ಟೆಗಳು, ಒಟ್ಟು 2326 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಮತದಾರರ ಅಂಕಿ ಅಂಶ :-

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2,10,885 ಮತದಾರರಿದ್ದು, ಇದರಲ್ಲಿ 1,03,316 ಪುರುಷ ಮತದಾರರು ಹಾಗೂ 1,07,236 ಮಹಿಳಾ ಮತದಾರರಿದ್ದು ಇತರರು ಹದಿನೈದು ಮತದಾರರು ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ.

ಯಲಹಂಕದಲ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4,58,617 ಮತದಾರರಿದ್ದು, ಪುರುಷರು 2,32,343 ಹಾಗೂ ಮಹಿಳೆಯರು 2,26,196 ಮತದಾರರು ಹಾಗೂ ಇತರರು 78 ಜನ ನೋಂದಣಿ ಮಾಡಿಕೊಂಡಿದ್ದಾರೆ.

ಗೌರಿಬಿದನೂರು ವಿಧಾನಸಭಾ ವ್ಯಾಪ್ತಿಯಲ್ಲಿ 2,10,885 ಮತದಾರರು ಇದ್ದು, ಪುರುಷರು 1,03,832 ಹಾಗೂ ಮಹಿಳೆಯರು 1,07,050 ಹಾಗೂ ಇತರರು 3 ನೊಂದಾಯಿಸಿಕೊಂಡಿದ್ದಾರೆ.

ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ :- ಒಟ್ಟು ಮತದಾರರು 2,02,830 ಮತದಾರರಿದ್ದು, ಇದರಲ್ಲಿ ಪುರುಷರು 1,00,200 ಹಾಗೂ ಮಹಿಳೆಯರು 1,02,603 ಹಾಗೂ ಇತರರು 27 ಮತದಾನ ಮಾಡಲಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ :- ಒಟ್ಟು ಮತದಾರರ ಸಂಖ್ಯೆ :- 2,39,157 ಮತದಾರರಿದ್ದು, ಪುರುಷರು 1,18,662 ಹಾಗೂ ಮಹಿಳೆಯರು 1,20,474 ಇತರರು 21 ಜನ ನೋಂದಾಯಿಸಿಕೊಂಡಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ :- 2,16,704 ಮತದಾರರಿದ್ದು ಪುರುಷರು 1,07,245, ಮಹಿಳೆಯರು 1,09,443 ಹಾಗೂ 16 ಇತರರು ಮತದಾನಕ್ಕೆ ಅರ್ಹರಾಗಿದ್ದಾರೆ.

ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ :-

ಒಟ್ಟು 2,20,268 ಮತದಾರರನ್ನು ಒಳಗೊಂಡಿದ್ದು ಪುರುಷರು 1,08,921 ಹಾಗೂ ಮಹಿಳೆಯರು 1,11,346 ಮತದಾರರು ಹಾಗೂ ಇತರರು ಒಬ್ಬರು ಮತದಾನಕ್ಕೆ ಅರ್ಹರಾಗಿದ್ದಾರೆ.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ:-

ಒಟ್ಟು 2,22,319 ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 1,09,256 ಹಾಗೂ ಮಹಿಳಾ ಮತದಾರರು 1,12,958 ಮತದಾರರು ಹಾಗೂ 105 ಇತರರು ಮತದಾನಕ್ಕೆ ನೋಂದಾಯಿಸಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+