ಸೌತೆಕಾಯಿ ಗಾತ್ರದ ಚಿನ್ನದ ಸರ ಧರಿಸಿ ಜಾತ್ರೆಯಲ್ಲಿ ಮಿಂಚಿದ ಸಹೋದರರು

ಚಿಕ್ಕಬಳ್ಳಾಪುರ, ಏಪ್ರಿಲ್ 27: 'ಎಲ್ಲಾರೂ ಜಾತ್ರೆಯಲ್ಲಿ ತೇರನ್ನೆ ನೋಡುವಾಗ ಅವನು ನನ್ನೇ ನೋಡಬೇಕು' ಎಂಬುದು ಜಯಂತ್ ಕಾಯ್ಕಿಣಿ ಅವರು ಬರೆದ ಸಾಲು, ಈ ಸಾಲುಗಳು ಅಲ್ಪ ಬದಲಾವಣೆಯೊಂದಿದೆ ಚಿಕ್ಕಬಳ್ಳಾಪುರದ ಮಂಚನಬೆಲೆ ಗ್ರಾಮದಲ್ಲಿ ನಿಜವಾಗಿವೆ.

ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲೆ ಮಂಚನಬೆಲೆ ಗ್ರಾಮದಲ್ಲಿ ಊರ ಜಾತ್ರೆ, ಜಾತ್ರೆಗೆ ಬಂದಿದ್ದವರೆಲ್ಲ ಯುವ ಸಹೋದರರಿಬ್ಬರ ಕಡೆ ನೋಡಿದ್ದೇ ನೋಡಿದ್ದು, ಅವರ ಬಗ್ಗೆ ಮಾತು ಆಡಿದ್ದೇ-ಆಡಿದ್ದು. ಅದಕ್ಕೆ ಕಾರಣ ಆ ಇಬ್ಬರು ಸಹೋದರರು ಮೈಮೇಲಿ ಹೇರಿಕೊಂಡಿದ್ದ ಚಿನ್ನ.

ಲೋಕಸಭಾ ಚುನಾವಣೆ ವಿಶೇಷ ಪುಟ

ಹೌದು, ಮಂಚನಬೆಲೆ ಜಾತ್ರೆಗೆಂದು ಬೆಂಗಳೂರಿನಿಂದ ಹೋಗಿದ್ದ ಸಹೋದರರಿಬ್ಬರು ಕೆಜಿಗಟ್ಟಲೆ ಚಿನ್ನ ಮೈಮೇಲಿ ಹೇರಿಕೊಂಡು ಜಾತ್ರೆಯಲ್ಲಿ ಓಡಾಡಿದರು. ಜಾತ್ರೆಗೆ ಬಂದವರಿಗೆಲ್ಲಾ ಅವರ ಮೇಲೆ ಕಣ್ಣು, ಕೆಲವರಂತೂ ಸಹೋದರರನ್ನು ನಿಲ್ಲಿಸಿಕೊಂಡು ಸೆಲ್ಫಿ ಸಹ ತೆಗೆಸಿಕೊಂಡರು.

ಜಾತ್ರೆಗೆ ಬಂದಿದ್ದ ಮಹಿಳೆಯರಂತೂ ಬಾಯಿಯ ಮೇಲೆ ಬೆರಳಿಟ್ಟುಕೊಂಡು ಸಹೋದರರು ಧರಿಸಿದ್ದ ಚಿನ್ನದ ಸರವನ್ನು ಬೆರಗು ಗಣ್ಣಿನಿಂದ ನೋಡಿದರಂತೆ.

ಆವಲಹಳ್ಳಿಯ ಮಹೇಶ್, ರಮೇಶ್ ಸಹೋದರರು

ಆವಲಹಳ್ಳಿಯ ಮಹೇಶ್, ರಮೇಶ್ ಸಹೋದರರು

ಆವಲಹಳ್ಳಿಯ ಮಹೇಶ್ ಮತ್ತು ರಮೇಶ್ ಸಹೋದರರು ಭಾರಿ ಗಾತ್ರದ ಚಿನ್ನದ ಸರಗಳನ್ನು ಕೊರಳಿಗೆ ನೇತು ಹಾಕಿಕೊಂಡು ಜಾತ್ರೆಗೆ ಬಂದಿದ್ದರು, ಚಿನ್ನದ ಸರ ಮಾರು ದೂರಕ್ಕೆ ಕಾಣುವಂತೆ ಶರ್ಟ್‌ನ ಮೇಲಿನ ಎರಡು ಗುಂಡಿ ತೆಗೆದು ಜಾತ್ರೆಯಲ್ಲಿ ಓಡಾಡಿದ್ದೇ ಓಡಾಡಿದ್ದು.

ಮಹೇಶ್ ಧರಿಸಿದ್ದ ಸರ ಪ್ರಮುಖ ಆಕರ್ಷಣೆ

ಮಹೇಶ್ ಧರಿಸಿದ್ದ ಸರ ಪ್ರಮುಖ ಆಕರ್ಷಣೆ

ಅದರಲ್ಲಿಯೂ ಮಹೇಶ್ ಅವರು ಧರಿಸಿದ್ದ ಸರವಂತೂ ಎಳೆ ಸೌತೇಕಾಯಿ ಗಾತ್ರದಲ್ಲಿತ್ತು, ಅದೊಂದೆ ಮುಕ್ಕಾಲು ಕೆ.ಜಿಗೂ ಹೆಚ್ಚಿನ ತೂಕದ ಚಿನ್ನದ ಸರವೆಂದು ನೋಡುತ್ತಲೇ ಹೇಳಬಹುದಾಗಿತ್ತು, ರಮೇಶ್ ಅವರು ಧರಿಸಿದ್ದ ಸರ ಮಹೇಶ್ ಅವರ ಸರದಷ್ಟು ಗಾತ್ರದಲ್ಲಿ ದೊಡ್ಡದಾಗಿರದಿದ್ದರೂ ಅದೂ ಸಹ ನೋಡುಗರ ಗಮನ ಸೆಳೆಯುತ್ತಿತ್ತು.

ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟ ಜನರು

ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟ ಜನರು

ಸಂಬಂಧಿಯ ಮನೆಗೆ ಬಂದಿದ್ದ ಅವರು ಜಾತ್ರೆಯಲ್ಲಿ ಫುಲ್ ಫೇಮಸ್‌ ಆಗಿ ಹೋದರು, ಹಲವು ಮಂದಿ ಈ ಇಬ್ಬರು ಸಹೋದರರ ಜೊತೆ, ವಿಶೇಷವಾಗಿ ಮಹೇಶ್ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ಫೇಮಸ್ ಆದ ಚಿನ್ನದ ಸಹೋದರರು

ಫೇಮಸ್ ಆದ ಚಿನ್ನದ ಸಹೋದರರು

ಈ ಸಹೋದರರ ಅಪ್ಪ ಅದೇನು ಉದ್ಯೋಗ ಮಾಡುತ್ತಾರೋ ಎಂದು ವರದಿಗಾರರು ಹುಡುಕಾಡುತ್ತಿದ್ದಾರೆ. ಈ ಇಬ್ಬರ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆವಲಹಳ್ಳಿಯ ಚಿನ್ನದ ಸಹೋದರರು ಎಂದೇ ಸಾಮಾಜಿಕ ಜಾಲತಾಣದಲ್ಲಿ ಇವರು ಫೇಮಸ್‌ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+