ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆ ನಂತರ ಸಾವಿಗೀಡಾದ ಮಹಿಳೆ

ಚೆನ್ನೈ, ಸೆಪ್ಟೆಂಬರ್ 23: ತೆಳ್ಳಗಾಗುವ ಉದ್ದೇಶದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಇಲ್ಲಿಗೆ ಸಮೀಪವಿರುವ ತಿರುವಣ್ಣಾಮಲೈನ ಗೃಹಿಣಿಯೊಬ್ಬರು ಸಾವಿಗೀಡಾಗಿರುವ ಘಟನೆ ನಡೆದಿದೆ.

ವಲಾರಮತಿ (45) ಮೃತ ದುರ್ದೈವಿ. ಇವರು ಅಲಗೇಸನ್ ಎಂಬುವರ ಪತ್ನಿಯಾಗಿದ್ದರು. ತಿರುವಣ್ಣಾಮಲೈನಲ್ಲಿರುವ ನಿವಾಸದಲ್ಲಿ ಅವರು ವಾಸವಾಗಿದ್ದರು.

ದೀರ್ಘಕಾಲದಿಂದಲೂ ಬೊಜ್ಜು ಹಾಗೂ ದಢೂತಿ ದೇಹದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಸುಮಾರು 150 ಕೆಜಿ ತೂಕವಿದ್ದರು. ಹೀಗಾಗಿ, ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದರು.

Woman undergoes weight loss surgery, dies in Tamilnadu

ಅವರ ಸಹೋದರಿಯರಿಗೂ ಇದೇ ರೀತಿಯ ಸಮಸ್ಯೆ ಕಾಡುತ್ತಿತ್ತು. ಅವರೂ ಬೊಜ್ಜು ಕರಗಿಸುವ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೇಹದ ತೂಕ ಇಳಿಸಿಕೊಂಡಿದ್ದರು.

ಇದರಿಂದ ಸ್ಫೂರ್ತಿಗೊಂಡಿದ್ದ ವಲಾರಮತಿ ಸಹ ಇದೇ ರೀತಿ ತಾವೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಶಸ್ತ್ರಚಿಕಿತ್ಸೆ ಮುಗಿದ ಕೆಲವೇ ಗಂಟೆಗಳಲ್ಲಿ ಅವರು ನಿಧನರಾಗಿದ್ದಾರೆ.

ಇದರಿಂದ, ಆಘಾತಕ್ಕೊಳಗಾಗಿರುವ ಅವರ ಕುಟುಂಬ ಪೊಲೀಸರಿಗೆ ದೂರು ನೀಡಿದ್ದಾರೆಂದು 'ಟೈಮ್ಸ್ ಆಫ್ ಇಂಡಿಯಾ' ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+