ರಜನಿ ಸಾರ್ ಬಿಜೆಪಿ ಯಾವಾಗ ಸೇರ್ತೀರಿ? ನೋ ಕಾಮೆಂಟ್ಸ್!

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಮೇ 17 : ಸಾರ್ ಸಾರ್ ಸಾರ್ ರಾಜಕೀಯಕ್ಕೆ ಯಾವಾಗ ಬರ್ತೀರಾ? ಬಿಜೆಪಿ ಪಕ್ಷ ಸೇರ್ತೀರಾ ಅಥವಾ ನೀವೇ ಹೊಸ ಪಕ್ಷ ಹುಟ್ಟುಹಾಕ್ತೀರಾ?

ನೋ ಕಾಮೆಂಟ್ಸ್!

ಏನಿದರ ಅರ್ಥ? ಐದರ್ ಬರ್ತೀನಿ ಅಂತ ಹೇಳ್ಬೇಕು, ಆರ್ ಬರಲ್ಲ ಅಂತಾನಾದ್ರೂ ಹೇಳ್ಬೇಕು! ನೋ ಕಾಮೆಂಟ್ಸ್ ಅಂದ್ರೆ ಸಹಸ್ರಾರು ಕೋಟಿ ಅಭಿಮಾನಿಗಳು ಏನೆಂದು ತಿಳಿದುಕೊಳ್ಳಬೇಕು, ರಾಜಕೀಯ ಪಂಡಿತರು, ಮಾಧ್ಯಮದವರು ಏನೆಂದು ವಿಶ್ಲೇಷಣೆ ಮಾಡಬೇಕು?[ಬೆಂಗಳೂರಿನ ಮರಾಠಿಗ ರಜನಿಗೆ ರಾಜಕೀಯದಲ್ಲಿ ಸೋಲು ಗ್ಯಾರಂಟಿ: ಸ್ವಾಮಿ]

ಹೀಗೆಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಕಾಮೆಂಟ್ ಮಾಡಿ, ಸ್ಟೈಲ್ ಕಿಂಗ್ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಹೃದಯ ಬಡಿತದ ತಾಳ ತಪ್ಪುವಂತೆ ಮಾಡಿದ್ದಾರೆ. ರಾಜಕೀಯ ಸೇರುವ ಸಂಗತಿಯನ್ನು ಅವರು ಸಾರಾಸಗಟಾಗಿ ಅಲ್ಲಗಳೆಯುತ್ತಲೂ ಇಲ್ಲ, ಒಪ್ಪಿಕೊಳ್ಳುತ್ತಲೂ ಇಲ್ಲ.

ಕಳೆದ 27 ವರ್ಷಗಳಿಂದ ರಜನಿಕಾಂತ್ ರಾಜಕೀಯ ಸೇರುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಹಿಂದೊಮ್ಮೆ ಅವರು ರಾಜಕೀಯ ಪಕ್ಷದ ವಿರುದ್ಧವಾಗಿ ಮಾತನಾಡಿದ್ದರು. ಆಗ ಜಯಲಲಿತಾ ಸರಕಾರ ಹೇಳಹೆಸರಿಲ್ಲದಂತೆ ಸೋತುಹೋಗಿತ್ತು. ಆದರೆ, ಹಾಗೆ ಮಾತಾಡಿದ್ದು ನನಗೆ ಇಂದೂ ವಿಷಾದವಿದೆ ಎಂದು ರಜನಿ ಈಗಲೂ ವಿಷಾದ ವ್ಯಕ್ತಪಡಿಸುತ್ತಾರೆ.[ಹಾಜಿ ಮಸ್ತಾನ್ ಕುರಿತು ಚಿತ್ರ : ರಜನಿಗೇ ಬೆದರಿಕೆ ಪತ್ರ]

ಚೆನ್ನೈನ ಕೋಡಂಬಾಕ್ಕಂನಲ್ಲಿರುವ ರಾಘವೇಂದ್ರ ಹಾಲ್ ನಲ್ಲಿ ಬುಧವಾರ ಅವರು ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದಾಗ ಕೂಡ ಇದೇ ಪ್ರಶ್ನೆ ಎದುರಾಗಿದೆ. ಬಿಜೆಪಿಯನ್ನು ನೀವು ಸೇರುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ 'ನೋ ಕಾಮೆಂಟ್ಸ್' ಅಂತ ಮಾತ್ರ ಉತ್ತರಿಸಿದ್ದಾರೆ ರಜನಿ. ನೋ ಕಾಮೆಂಟ್ಸ್ ಅನ್ನು ಸ್ವಲ್ಪ ಬಿಡಿಸಿ ಹೇಳಿ ರಜನಿಕಾಂತ್!

ಹಣ ಮಾಡುವವರಿಗೆ ನನ್ನ ಬಳಿ ಅವಕಾಶವಿಲ್ಲ

ಹಣ ಮಾಡುವವರಿಗೆ ನನ್ನ ಬಳಿ ಅವಕಾಶವಿಲ್ಲ

ಅವರು ರಾಜಕೀಯ ಸೇರುವ ಬಗ್ಗೆ ಇಷ್ಟೆಲ್ಲಾ ಚರ್ಚೆಗಳಾಗಲು ಕಾರಣ ಮೇ 15ರಂದು ಮಾತನಾಡಿದಾಗ ರಾಜಕೀಯಕ್ಕೆ ಸಂಬಂಧಿಸಿದಂತೆ ಅವರು ಸೂಚನೆ ಕೊಟ್ಟಿದ್ದರು. "ಒಂದು ವೇಳೆ ನಾನು ರಾಜಕೀಯಕ್ಕೆ ಬಂದರೂ, ನನ್ನ ಬಳಗದಲ್ಲಿ ಹಣ ಮಾಡುವವರಿಗೆ ಅಜೀಬಾತ್ ಅವಕಾಶ ನೀಡುವುದಿಲ್ಲ. ಮಾಡಿದರೂ ಸ್ವಚ್ಛ ರಾಜಕಾರಣ ಮಾಡುತ್ತೇನೆ" ಎಂದು ಖಡಾಖಂಡಿತವಾಗಿ ಸಾರಿದ್ದರು.[ಸುದ್ದಿಸ್ವಾರಸ್ಯ : ರಜನಿ ಭಾರತದ ಮುಂದಿನ ರಾಷ್ಟ್ರಪತಿ?]

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ

ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ

"ರಾಜಕೀಯ ಸೇರುವ ಬಗ್ಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ಹೇಳಿ ಸಣ್ಣಗೆ ಹುಳ ಬಿಟ್ಟಿದ್ದಾರೆ ರಜನಿಕಾಂತ್. ಹಾಗಿದ್ರೆ, ಆ ಸರಿಯಾದ ಸಮಯ ಬರುವುದು ಯಾವಾಗ, ಸರಿಯಾದ ನಿರ್ಧಾರ ತಳೆಯುವುದು ಯಾವಾಗ ಎಂಬುದು ಆ ಬ್ರಹ್ಮನಿಗೂ ಗೊತ್ತಿಲ್ಲ. ಒಟ್ಟಿನಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯದಂತೆ, ನಿರಾಶೆಯಿಂದ ಭ್ರಮನಿರಸನರಾಗದಂಥ ಸಂದರ್ಭ ತಂದಿಟ್ಟಿದ್ದಾರೆ.[ನಟ ರಜನಿಕಾಂತ್-ಫ್ಯಾನ್ಸ್ ಮೆಗಾ ಮೀಟಿಂಗ್ ರದ್ದು]

ರಜನಿ ರಾಜಕೀಯಕ್ಕೆ ಬರುವುದು ಜೋಕ್

ರಜನಿ ರಾಜಕೀಯಕ್ಕೆ ಬರುವುದು ಜೋಕ್

"ರಜನಿಕಾಂತ್ ಅವರಿಗೆ ಯಾವುದೇ ತತ್ವಸಿದ್ಧಾಂತಗಳಿಲ್ಲ. ಅವರನ್ನು ಹಿಂಬಾಲಿಸುವುದೆಂದರೆ ಧರ್ಮಗುರುವನ್ನು ಹಿಂಬಾಲಿಸಿದಂತೆ. ಇದು ಒಳ್ಳೆಯದಲ್ಲ. ತಮಿಳುನಾಡಿನಲ್ಲಿ ಅವರು ರಾಜಕಾರಣಿಯಾಗುವುದು ಅತ್ಲಾಗಿರಲಿ, ಅವರು ತಮಿಳರೇ ಅಲ್ಲ. ಅವರು ಬೆಂಗಳೂರಿನ ಮರಾಠಿಗರು. ರಾಜಕೀಯಕ್ಕೆ ಬಂದರೆ ಸೋಲು ಗ್ಯಾರಂಟಿ" ಎಂದು ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ರಜನಿ ಒಂದು ಮಾತು ಹೇಳಿದ್ರೆ

ರಜನಿ ಒಂದು ಮಾತು ಹೇಳಿದ್ರೆ

ಅವರು ತಮಿಳರೇ ಇರಲಿ, ಮರಾಠಿಗನೇ ಇರಲಿ, ಕನ್ನಡಿಗ ಅಂತಾದರೂ ಪರಿಗಣಿಸಲಿ, ರಜನಿ ರಜನಿಯೇ. ರಜನಿಕಾಂತ್ ಒಂದು ಮಾತು ಆಡಿದರೆ ತಮಿಳುನಾಡಿನಲ್ಲಿ ಚಂಡಮಾರುತ ಬೀಸುತ್ತದೆ, ರಾಜಕೀಯ ಚಿತ್ರಣವೇ ಬದಲಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಕೂಡ ಲೋಕಸಭೆಗೆ ಮುಂಚೆ ಅವರ ಬೆಂಬಲ ಯಾಚಿಸಿದ್ದರು. ಬಿಜೆಪಿ ಸೇರಬೇಕೆಂದು ಕೇಳಿಕೊಂಡಿದ್ದರು.

ಮಿಲಿಯನ್ ಡಾಲರ್ ಪ್ರಶ್ನೆ

ಮಿಲಿಯನ್ ಡಾಲರ್ ಪ್ರಶ್ನೆ

ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ನೋಡಿರುವ, ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಏರುಪೇರುಗಳನ್ನು ಕಂಡಿರುವ ರಜನಿಗೆ ಈಗ 66 ವಯಸ್ಸು. ಅವರು ರಾಜಕೀಯವೆಂಬ ಕೊಚ್ಚೆಯಲ್ಲಿ ಎಂದೂ ಕಾಲಿಟ್ಟವರಲ್ಲ. ಹೀಗಿರುವಾಗ, ರಾಜಕೀಯ ಸೇರುತ್ತಾರಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಬೆಂಗಳೂರಿನಲ್ಲಿರುವ ಅವರ ಆಪ್ತ ಸ್ನೇಹಿತ ರಾವ್ ಬಹಾದ್ದೂರ್ ಪ್ರಕಾರ, ರಜನಿ ರಾಜಕೀಯಕ್ಕೆ ಬಂದೇ ಬರುತ್ತಾರೆ. ಬಹುಶಃ ಅದು ನಿಜವಾಗುವ ದಿನ ಹತ್ತಿರವಿದೆಯಾ? [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Superstar Rajinikanth neither refused nor confirmed his willingness to join the BJP if he entered electoral politics. Leaving his decision open-ended, Rajinikanth told the media that he had 'no comments' to make when asked if he would consider joining the BJP.
Please Wait while comments are loading...