ಬೆಂಗಳೂರಿನ ಮರಾಠಿಗ ರಜನಿಗೆ ರಾಜಕೀಯದಲ್ಲಿ ಸೋಲು ಗ್ಯಾರಂಟಿ: ಸ್ವಾಮಿ

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಮೇ 15: ರಜನಿಕಾಂತ್ ತಮಿಳು ಮೂಲದವನಲ್ಲ, ಬೆಂಗಳೂರು ಮೂಲದ ಮರಾಠಿಗ, ರಾಜಕೀಯವಾಗಿ ಯಾವುದೇ ಸಿದ್ಧಾಂತವನ್ನು ಪಾಲಿಸದ ಗೊಂದಲದ ಗೂಡಾಗಿರುವ ರಜನಿಗೆ ರಾಜಕೀಯದಲ್ಲಿ ಸೋಲು ಖಚಿತ ಎಂದು ಸುಬ್ರಮಣಿಯನ್ ಸ್ವಾಮಿ ಗೇಲಿ ಮಾಡಿದ್ದಾರೆ.

ಹಲವಾರು ವರ್ಷಗಳ ನಂತರ ಅಭಿಮಾನಿಗಳನ್ನು ಭೇಟಿ ಮಾಡಿದ ರಜನಿಕಾಂತ್ ಅವರು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಮತ್ತೆ ಹರಡಿದೆ.[ಆರ್ ಕೆ ನಗರ ಕ್ಷೇತ್ರ ಚುನಾವಣೆ, ರಜನಿ ಬೆಂಬಲ ಯಾರಿಗೆ?]

Rajini will fail, he is a Marathi from Bengaluru: Swamy

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು, ರಜನಿಕಾಂತ್ ಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ. ಸರಿಯಾಗಿ ಯಾವುದೇ ಸಿದ್ಧಾಂತ ಪಾಲಿಸುತ್ತಿಲ್ಲ. ಮೇಲಾಗಿ ಆತ ಮೂಲ ತಮಿಳಿಗನಲ್ಲ, ಬೆಂಗಳೂರು ಮೂಲದ ಮರಾಠಿಗ ಎಂದು ಸ್ವಾಮಿ ಹೇಳಿದ್ದಾರೆ.

ದೇವರ ಇಚ್ಛೆ ಇದ್ದರೆ ರಾಜಕೀಯಕ್ಕೆ ಬರುವುದಾಗಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವ ರಜನಿ ಮಾತುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಸ್ವಾಮಿ ಹೇಳಿದ್ದಾರೆ.

ನನ್ನ ಸಲಹೆ ಕೇಳಿದರೆ, ರಜನಿ ಅವರು ರಾಜಕೀಯದಿಂದ ದೂರ ಇರುವುದೇ ಉತ್ತಮ. ಸಿನಿಮಾ ಮಂದಿ ಹೇಳಿಕೆ ನೀಡುವುದಲ್ಲಿ ಎತ್ತ್ತಿದ ಕೈ, ಏಕೆಂದರೆ ಅವರ ಡೈಲಾಗ್ಸ್ ಬೇರೆಯವರು ಬರೆದಿರುತ್ತಾರೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Member of Parliament in Rajya Sabha, Dr Subramanian Swamy attacked Superstar Rajinikanth calling his 'hints on politics a joke'. The BJP MP claimed that Rajinikanth has no clear cut ideology. "He is not even a Tamilian. He is a Marathi from Bengaluru," Subramanian Swamy mocked Rajinikanth.
Please Wait while comments are loading...