ಆರ್ ಕೆ ನಗರ ಕ್ಷೇತ್ರ ಚುನಾವಣೆ, ರಜನಿ ಬೆಂಬಲ ಯಾರಿಗೆ?
ಸಂಗೀತಗಾರ ಗಂಗೈ ಅಮರನ್ ಅವರು ಇತ್ತೀಚೆಗೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಬಳಿಕ ಅನೇಕ ಊಹಾಪೋಹಗಳು ಎದ್ದಿತ್ತು. ಇದಕ್ಕೆಲ್ಲ ರಜನಿಕಾಂತ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಚೆನ್ನೈ, ಮಾರ್ಚ್ 23: ಆರ್ ಕೆ ನಗರ ಮರು ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರು, ಯಾರಿಗೆ ಬೆಂಬಲಿಸುತ್ತಾರೆ? ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.
ಬಿಜೆಪಿ ಅಭ್ಯರ್ಥಿ ಸಂಗೀತಗಾರ ಗಂಗೈ ಅಮರನ್ ಅವರು ಇತ್ತೀಚೆಗೆ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಬಳಿಕ ಅನೇಕ ಊಹಾಪೋಹಗಳು ಎದ್ದಿತ್ತು. ಇದಕ್ಕೆಲ್ಲ ರಜನಿಕಾಂತ್ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಾನು ಯಾವ ಅಭ್ಯರ್ಥಿ ಅಥವಾ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂದು ರಜನಿಕಾಂತ್ ಅವರು ಟ್ವೀಟ್ ಮಾಡಿದ್ದಾರೆ.
ಸಂಗೀತಗಾರ ಇಳಯರಾಜ ಅವರ ಸೋದರ ಗಂಗೈ ಅಮರನ್ ಅವರು ಬಿಜೆಪಿ ಟಿಕೆಟ್ ಪಡೆದು ಆರ್ ಕೆ ನಗರದಿಂದ ಕಣಕ್ಕಿಳಿದಿದ್ದಾರೆ. ಸಿನಿಮಾ ರಂಗದ ಹಲವಾರು ಸೆಲೆಬ್ರಿಟಿಗಳನ್ನು ಭೇಟಿ ಮಾಡಿ, ಬೆಂಬಲ ಕೋರಿದ್ದಾರೆ. ಅದೇ ರೀತಿ ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮನೆಗೂ ತೆರಳಿದ್ದರು.
My support is for no one in the coming elections.
— Rajinikanth (@superstarrajini) March 23, 2017
ಆದರೆ, ಇತ್ತೀಚೆಗೆ ರಾಜಕೀಯಕ್ಕೆ ಹತ್ತಿರವಾದರೂ ದೂರ ಉಳಿದಿರುವ ರಜನಿ ಅವರು, ಆರ್ ಕೆ ನಗರ ಕ್ಷೇತ್ರದಲ್ಲಿ ಯಾವುದೇ ಪ್ರಚಾರ ಕೈಗೊಳ್ಳುವುದಿಲ್ಲ, ಯಾರನ್ನು ಬೆಂಬಲಿಸುತ್ತಿಲ್ಲ ಎಂದಿದ್ದಾರೆ.

ಫೋಟೋ ಹಂಚಿಕೊಂಡಿದ್ದ ಗಂಗೈ ಅಮರನ್
ಗಂಗೈ ಅಮರನ್ ಹಾಗೂ ರಜನಿಕಾಂತ್ ಜತೆಗಿರುವ ಫೋಟೊ ವೈರಲ್ ಆಗಿತ್ತು. ರಜನಿ ಅವರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ರಜನಿಕಾಂತ್ ಅವರು ಯಾವುದೇ ಪಕ್ಷ ಹಾಗೂ ಒಂದು ಸಮುದಾಯದ ಪರ ಹೇಳಿಕೆ ನೀಡಿದ್ದಾರೆ ಎಂದರೆ ಅಲ್ಲಿಗೆ ಮುಗಿಯಿತು. ಅವರ ಬೆಂಬಲದ ಅಭ್ಯರ್ಥಿ ಗೆಲ್ಲುವುದು ಖಚಿತ ಎಂಬ ಮಾತಿದೆ. ಈ ಹಿಂದೆ ಅವರ ಒಂದು ಡೈಲಾಗ್ ನಿಂದ ಜಯಲಲಿತಾ ಅವರು ಚುನಾವಣೆಯಲ್ಲಿ ಸೋತಿದ್ದರು.
|
ಸಂಗೀತಗಾರ ಗಂಗೈ ಅಮರನ್
ಇಳಯರಾಜ ಅವರ ಕಿರಿಯ ಸೋದರ ಗಣೇಶ್ ಕುಮಾರ್ ಗಂಗೈ ಅಮರನ್ ಅವರು ಗಾಯಕ, ಸಾಹಿತಿ, ಚಿತ್ರಕಥೆಗಾರ, ನಿರ್ದೇಶಕ, ಸಂಗೀತ ನಿರ್ದೇಶಕ, ನಟನಾಗಿ ತಮಿಳುನಾಡು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗಂಗೈ ಅಮರನ್ ಅವರ ಪುತ್ರ ವೆಂಕಟ್ ಪ್ರಭು ನಿರ್ದೇಶಕರಾಗಿದ್ದರೆ ಮತ್ತೊಬ್ಬ ಮಗ ಪ್ರೇಮ್ಜಿ ಅಮರನ್ ನಟ, ಸಂಗೀತಗಾರರಾಗಿದ್ದಾರೆ.ಸಿನಿಮಾರಂಗದವರಿಗೆ ಗಂಗೈ ಅವರ ಪರಿಚಯ ಚೆನ್ನಾಗಿದೆ.

ರಜನಿ ರಾಜಕೀಯ ಎಂಟ್ರಿ ಬೇಡ
ಎಐಎಡಿಎಂಕೆ ಪಕ್ಷದ ಆಂತರಿಕ ಬಿಕ್ಕಟ್ಟು, ತಮಿಳುನಾಡಿನಲ್ಲಿ ಉಂಟಾಗಿರುವ ರಾಜಕೀಯ ಗೊಂದಲದ ಲಾಭ ಪಡೆಯಲು ಬಿಜೆಪಿ ತಂತ್ರ ರೂಪಿಸಿದೆ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ನಾಲ್ಕು ವರ್ಷ ಬಾಕಿ ಇದೆ. ಈ ಸುದ್ದಿ ಬಗ್ಗೆ ತಿಳಿದ ಅಮಿತಾಬ್ ಅವರು ರಜನಿ ಕಾಂತ್ ಗೆ ಸಲಹೆ ನೀಡಿ, ಯಾವುದೇ ರಾಜಕೀಯ ಸಂಘಟನೆ ಜತೆಗೆ ಗುರುತಿಸಿಕೊಳ್ಳಬೇಡಿ ಎಂದಿದ್ದಾರೆ. ರಾಜಕೀಯ ಪ್ರವೇಶ ಎಂಟ್ರಿ ಬೇಡ, ಪಕ್ಷ ಕಟ್ಟಿ, ಜನರ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಹೇಳಿದ್ದಾರೆ.

ರಜನಿ ಮನೆಗೆ ಬಂದಿದ್ದ ಮೋದಿ
ರಜನಿ ಅವರ ಗೆಳೆಯರಾದ ಅಂಬರೀಷ್, ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಸೇರಿದಂತೆ ಅನೇಕ ಆಪ್ತರು ರಾಜಕೀಯದಲ್ಲಿದ್ದರೂ ರಜನಿ ಮಾತ್ರ ಆದಷ್ಟು ರಾಜಕೀಯ ಪಕ್ಷಗಳಿಂದ ದೂರವೇ ಉಳಿದಿದ್ದಾರೆ. ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ನೀಡಿದ್ದರು. ಅಲ್ಲಿಂದ ಮೊದಲುಗೊಂಡು ಇಂದಿನ ತನಕ ಬಿಜೆಪಿ ರಜನಿಕಾಂತ್ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸಾಹ ತೋರಿದೆ.

ಹೊಸ ಪಕ್ಷದ ಉದಯ?
ಲೋಕಸಭೆ ಚುನಾವಣೆ 2014 ರಲ್ಲಿ ಡಿಎಂಕೆ ಹೀನಾಯ ಸೋಲು ಕಂಡಿತ್ತು. ಜಯಲಲಿತಾ ನೇತೃತ್ವದ ಎಐಎಡಿಎಂಕೆ 39 ಸೀಟುಗಳ 37 ಸೀಟು ಗೆದ್ದುವಿಜಯ ದಾಖಲಿಸಿತ್ತು. ಮೋದಿ ಪರ ರಜನಿ ಹೇಳಿಕೆ ನೀಡಿದ್ದರು. ಈ ನಡುವೆ 2016ರ ವಿಧಾನಸಭೆ ಚುನಾವಣೆ ವೇಳೆ ರಜನಿಕಾಂತ್ ಅವರು ಹೊಸ ಪಕ್ಷ ಕಟ್ಟುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ತಟಸ್ಥವಾಗಿ ಉಳಿದರು. ಎಐಎಡಿಎಂಕೆ 136 ಸೀಟು ಗೆದ್ದು ಅಧಿಕಾರ ಸ್ಥಾಪಿಸಿತು. ಈಗ ರಾಜಕೀಯ ಅಸ್ಥಿರತೆ ಉಂಟಾಗಿದ್ದು, ರಜನಿ ಹೊಸ ಪಕ್ಷದ ಸುದ್ದಿ ಹುಟ್ಟಿಕೊಂಡಿದೆ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications