ಚೆನ್ನೈನಲ್ಲಿ ಲಘು ಭೂಕಂಪ: 4.9 ತೀವ್ರತೆ ದಾಖಲು
ಚೆನ್ನೈ, ಫೆಬ್ರವರಿ 12: ಬಂಗಾಳಕೊಲ್ಲಿಯಲ್ಲಿ ಲಘು ಭೂಕಂಪ ಸಂಭವಿಸಿದ್ದ ಕಾರಣ ಚೆನ್ನೈ ಮಹಾನಗರದಲ್ಲೂ ಮಂಗಳವಾರ ಭೂಕಂಪದ ಅನುಭವವಾಗಿದೆ.
ಚೆನ್ನೈ ಕಡಲ ತೀರದಿಂದ ಸುಮಾರು 609 ಕಿ.ಮೀ ದೂರದಲ್ಲಿ 10 ಕಿ.ಮೀ ಸಮುದ್ರದ ಆಳದಲ್ಲಿ ಬೆಳಗಿನ ಜಾವ 1.30ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನ ತೀವ್ರತೆ 4.9ರಷ್ಟು ದಾಖಲಾಗಿದೆ.

ಭೂಕಂಪನದ ಅನುಭವಾಗುತ್ತಿದ್ದಂತೆಯೇ ಚೆನ್ನೈ ಜನ ಇಡೀ ರಾತ್ರಿ ಭಯದಲ್ಲೇ ಕಳೆಯುವಂತಾಗಿತ್ತು. ರಾತ್ರಿ ಇಡೀ ಜನ ಮತ್ತೆ ಕಂಪನವಾಗುವ ಭಯದಿಂದಲೇ ಸಮಯ ಕಳೆದರು. ಕೆಲವು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications