ತಮಿಳರ 'ಅಮ್ಮ' ಜಯಾಗೆ ಜಲಸಂಬಂಧಿ ಸಮಸ್ಯೆ, ಟ್ವೀಟ್ ಜೋಕ್ಸ್

ಚೆನ್ನೈ, ಸೆ. 23 : ತಮಿಳುನಾಡಿನ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಜಯಲಲಿತಾ ಅವರು ಜಲ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಗುರುವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನೀರು ಸಿಗದೆ ಜಯಾ ಅವರ ದೇಹ ಡಿಹೈಡ್ರೇಷನ್ ಗೆ ಒಳಗಾಗಿದೆ ಎಂದು ಅಪೊಲೊ ಆಸ್ಪತ್ರೆ ವೈದ್ಯರು ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಆದರೆ, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಈ ಬಗ್ಗೆ ಹಾಸ್ಯಮಯ ಟ್ವೀಟ್ ಹರಿದಾಡುತ್ತಿವೆ.[ಆಸ್ಪತ್ರೆ ಸೇರಿದ ಜಯಲಲಿತಾ]

ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ನಿತ್ರಾಣರಾಗಿದ್ದ ಜಯಲಲಿತಾ ಅವರಿಗೆ ಜ್ವರ ಕೂಡಾ ಕಾಡುತ್ತಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆ ದಾಖಲಿಸಲಾಗಿದೆ. [ತಮಿಳರ 'ಅಮ್ಮ' ಜಯಲಲಿತಾರಿಗೆ ಏನು ಕಾಯಿಲೆ?]

ಜಯಾ ಅವರ ಆರೋಗ್ಯ ಸುಧಾರಿಸಿದ್ದು, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ಅಪೊಲೋ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ['ನೀರು ಬಿಡುವುದು ಭಾರಿ ಕಷ್ಟ' ದೆಹಲಿಯಲ್ಲಿ ಸಿದ್ದರಾಮಯ್ಯ ಹೇಳಿಕೆ]

ಈಗ ಜಯಾಗೆ ನೀರು ಬೇಕು ಎಂದು ತಮಿಳುನಾಡು ಕೇಳುತ್ತದೆಯೆ?


ಅಪೋಲೋ ಆಸ್ಪತ್ರೆ ಪ್ರಕಟಣೆ


ಇದೊಂದೆ ಸಾಕ್ಷಿ ಸಾಕು, ಹೆಚ್ಚಿನ ನೀರು ಬೇಕು ಎಂದು ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಕೇಳಬಹುದು.


ಇಡೀ ಭಾರತವೇ ಕೇಳುತ್ತಿದೆ. ಜಯಾ ಅವರಿಗೆ ಏನಾಗಿದೆ? ಡೆಂಗ್ಯೂ ಏನಾದರೂ ಬಂದಿದೆಯೇ? ಆರ್ ಟಿಐ ಅರ್ಜಿ ಹಾಕಿ


(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+