ಚೆನ್ನೈ ಮೃಗಾಲಯದಿಂದ ಓಡಿಹೋದ ಹುಲಿ!
ಚೆನ್ನೈ, ನ. 15 : ತಮಿಳುನಾಡಿನ ವಂಡಲೂರು ಮೃಗಾಲಯದಿಂದ ಹುಲಿಯೊಂದು ತಪ್ಪಿಸಿಕೊಂಡಿದ್ದು, ಮೃಗಾಲಯದ ಸುತ್ತಮುತ್ತಲಿನ ಜನರು ಆತಂಕಗೊಂಡಿದ್ದಾರೆ. ಮೃಗಾಲಯದಲ್ಲಿದ್ದ ಐದು ಹುಲಿಗಳ ಪೈಕಿ ಒಂದು ಇಂದು ತಪ್ಪಿಸಿಕೊಂಡಿದ್ದು, ಅರಣ್ಯ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ಹುಲಿಗಾಗಿ ಹುಡುಕಾಟ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ವಂಡಲೂರು ಮೃಗಾಲಯದಲ್ಲಿ ಹುಲಿಗಳಿದ್ದ ಸ್ಥಳದಲ್ಲಿನ ಏಳು ಅಡಿ ಗೋಡೆ ಶನಿವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಒಂದು ಹುಲಿ ಅಲ್ಲಿಂದ ತಪ್ಪಿಸಿಕೊಂಡಿದೆ.

ಗೋಡೆ ಕುಸಿದ ಸುಮಾರು ಅರ್ಧ ಗಂಟೆ ನಂತರ ನಾಲ್ಕು ಹುಲಿಗಳು ಅವುಗಳ ಸ್ಥಳದಲ್ಲಿ ಪತ್ತೆಯಾಗಿದ್ದು ಒಂದು ಹುಲಿ ತಪ್ಪಿಸಿಕೊಂಡಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ. ತಪ್ಪಿಸಿಕೊಂಡ ಹುಲಿ ಮೃಗಾಲಯದ ಇತರ ಪ್ರಾಣಿಗಳ ಮೇಲೆ ದಾಳಿ ಮಾಡದಂತೆ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. [ಚಿಕ್ಕಮಗಳೂರು : ಹುಲಿ ದಾಳಿಗೆ ಮಹಿಳೆ ಬಲಿ]

ಗೋಡೆ ಕುಸಿದು ಬಿದ್ದ ಸ್ಥಳದಲ್ಲಿ ತಂತಿಯ ಬೇಲಿಯನ್ನು ಮೃಗಾಲಯದ ಸಿಬ್ಬಂದಿ ಅಳವಡಿಸಿದ್ದು, ಉಳಿದ ನಾಲ್ಕು ಹುಲಿಗಳ ಮೇಲೆ ಕಣ್ಗಾವಲಿಟ್ಟಿದ್ದಾರೆ. ಮೃಗಾಲಯಕ್ಕೆ ಹೊಂದಿಕೊಂಡಿರುವ ಅರಣ್ಯ ಇಲಾಖೆ ಕಚೇರಿಯ ಸಿಬ್ಬಂದಿ ಮತ್ತು ಪೊಲೀಸರು ಹುಲಿಗಾಗಿ ಹುಡುಕಾಟ ನಡೆಸಿದ್ದಾರೆ. [ದೆಹಲಿ ಝೂನಲ್ಲಿ ಶಾಲಾಬಾಲಕನನ್ನು ಕೊಂದ ಬಿಳಿಹುಲಿ]













Click it and Unblock the Notifications