ಫೆಬ್ರವರಿ 25 ರಂದು ತಮಿಳುನಾಡಿನಲ್ಲಿ ಬಸ್ ಮುಷ್ಕರ:ಶೇ.80ರಷ್ಟು ಸರ್ಕಾರಿ ಬಸ್‌ಗಳ ಸಂಚಾರವಿಲ್ಲ

ಚೆನ್ನೈ,ಫೆಬ್ರವರಿ 24: 9 ಸಾರಿಗೆ ಸಂಘಟನೆಗಳು ವೇತನ ವಿಚಾರವಾಗಿ ಫೆಬ್ರವರಿ 25 ರಂದು ಬಸ್ ಮುಷ್ಕರ ಹಮ್ಮಿಕೊಂಡಿದೆ.

ಇದು ಅನಿರ್ಧಿಷ್ಟಾವಧಿ ಮುಷ್ಕರವಾಗಿಲಿವೆ ಎಂದು ಸಂಘಟನೆಗಳು ತಿಳಿಸಿವೆ, ಇದರಿಂದ ಶೇ.80ರಷ್ಟು ಸರ್ಕಾರಿ ಬಸ್‌ಗಳ ಸಂಚಾರದ ಮೇಲೂ ಪರಿಣಾಮ ಬೀರಲಿದೆ.

ತಮಿಳುನಾಡಿನಲ್ಲಿ 21 ಸಾವಿರ ಸರ್ಕಾರಿ ಬಸ್‌ಗಳಿವೆ. 9 ಸಾರಿಗೆ ಸಂಘಟನೆಗಳು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿವೆ. ಲೇಬರ್ ಪ್ರೊಗ್ರೆಸೀವ್ ಫೆಡರೇಷನ್, ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಹಿಂದ್ ಮಜ್ದೂರ್ ಸಭಾ ಹಾಗೂ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಬೆಂಬಲ ನೀಡಿದೆ.

Tamil Nadu Bus Strike Tomorrow: 80 Per Cent Government Bus Services To Be Affected

ಈ ಒಂಬತ್ತು ಸಂಘಟನೆಗಳಲ್ಲಿರುವ ಸುಮಾರು ಒಂದು ಲಕ್ಷಕ್ಕೂ ಅಧಿಕ ಸಿಬ್ಬಂದಿ ನಾಳೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ.ಒಕ್ಕೂಟದ ಬೇಡಿಕೆಗಳಲ್ಲಿ ವೇತನ ಪರಿಷ್ಕರಣೆ, ನಿವೃತ್ತ ಕಾರ್ಮಿಕರ ಬಾಕಿ ಹಣ ಪಾವತಿಸುವುದು ಕೂಡ ಸೇರಿದೆ.

ಸರ್ಕಾರಿ ಬಸ್‌ಗಳು ಪ್ರತಿನಿತ್ಯ 80 ಲಕ್ಷ ಕಿ.ಮೀ ಕವರ್ ಮಾಡುತ್ತವೆ. ನಿತ್ಯ 10 ರಿಂದ 16 ಕೋಟಿ ರೂ ನಷ್ಟ ಅನುಭವಿಸುತ್ತಿದೆ.13ನೇ ವೇತನ ಒಪ್ಪಂದ 2019ರ ಸೆಪ್ಟೆಂಬರ್‌ಗೆ ಕೊನೆಗೊಂಡಿದೆ.

ಕಿ.ಮೀಗೆ 40 ರೂ. ವೆಚ್ಚವಾಗುತ್ತದೆ, ಆದರೆ ಪ್ರಯಾಣಿಕರಿಂದ ಕೇವಲ 20 ರೂ ಸಂದಾಯವಾಗುತ್ತಿದೆ, ಉಳಿದ 20 ರೂನಷ್ಟು ನಷ್ಟ ಅನುಭವಿಸಬೇಕಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+