ಎಐಎಡಿಎಂಕೆ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಎಡಪ್ಪಾಡಿಯಿಂದ ಸಿಎಂ ಸ್ಪರ್ಧೆ
ಚೆನ್ನೈ ಮಾರ್ಚ್ 5: ತಮಿಳುನಾಡು ವಿಧಾನಸಭೆ ಚುನಾವಣೆ 2021ಗಾಗಿ ಆಡಳಿತಾರೂಢ ಎಐಎಡಿಎಂಕೆ ಇಂದು(ಮಾರ್ಚ್ 5) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
ಎಐಎಡಿಎಂಕೆ ಮೊದಲ ಪಟ್ಟಿಯಲ್ಲಿ 6 ಮಂದಿ ಹೆಸರಿದ್ದು, ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ. ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರು ಥೇಣಿ ಜಿಲ್ಲೆಯ ಬೋದಿನಾಯಕನೂರ್ ವಿಧಾನಸಭಾ ಕ್ಷೇತ್ರದ ಸ್ಪರ್ಧಿಯಾಗಿದ್ದಾರೆ.
ಮಿಕ್ಕಂತೆ ಹಿರಿಯ ಮುಖಂಡರಾದ ಮೀನುಗಾರಿಕೆ ಸಚಿವ ಡಿ ಜಯಕುಮಾರ್, ಕಾನೂನು ಸಚಿವ ಸಿ ವಿ ಷಣ್ಮುಗಂ ಅವರು ರಾಯಪುರಂ ಹಾಗೂ ವಿಲ್ಲುಪುರಂನಿಂದ ಕಣಕ್ಕಿಳಿಯುತ್ತಿದ್ದಾರೆ.
ಶಾಸಕ ಎಸ್ ಪಿ ಷಣ್ಮುಗನಾಥನ್ ಹಾಗೂ ಎಸ್ ಥೇನ್ಮೋಳಿ ಅವರು ಶ್ರೀವೈಕುಂಠಂ ಹಾಗೂ ನೀಲಕೊಟ್ಟೈ(ಮೀಸಲು) ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

234 ಸದಸ್ಯ ಬಲದ ತಮಿಳುನಾಡಿನ ವಿಧಾನಸಭೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications