Today's Chanakya Exit Poll: ತಮಿಳುನಾಡಿನಲ್ಲಿ ಅಧಿಕಾರ ಪಲ್ಲಟ

ತಮಿಳುನಾಡಿನ ಜನ ಬದಲಾವಣೆಗಾಗಿ ಮತದಾನ ಮಾಡಿದ್ದಾರೆ, ರಾಜ್ಯದಲ್ಲಿ ಆಡಳಿತ ಪಲ್ಲಟವಾಗಲಿದೆ ಎನ್ನುತ್ತಿದೆ ಟುಡೇಸ್ ಚಾಣಕ್ಯ ಮಾಡಿರುವ ಮತದಾನೋತ್ತರ ಸಮೀಕ್ಷೆ.

ಆಡಳಿತಾರೂಡ ಎಐಎಡಿಎಂಕೆ ಪಕ್ಷಕ್ಕೆ ಹೀನಾಯ ಸೋಲಾಗಿ ಪ್ರಸ್ತುತ ವಿಪಕ್ಷ ಡಿಎಂಕೆ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಸಮೀಕ್ಷಾ ವರದಿ ನೀಡಿದೆ ಟುಡೇಸ್ ಚಾಣಕ್ಯ.

ಸಮೀಕ್ಷೆಯ ವರದಿಯಂತೆ ಎಐಎಡಿಎಂಕೆ ಮತ್ತು ಬಿಜೆಪಿಗೆ ಒಟ್ಟು ಸೇರಿ 57 ಸ್ಥಾನಗಳಷ್ಟೆ ದೊರಕಲಿದೆ. ಅದೇ ಡಿಎಂಕೆ ಹಾಗೂ ಕಾಂಗ್ರೆಸ್‌ 175 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದೆ ಸಮೀಕ್ಷೆ. ಈ ಸಂಖ್ಯೆಗಳಲ್ಲಿ 11 ಸ್ಥಾನಗಳ ವ್ಯತ್ಯಾಸವಾಗಬಹುದು ಎಂದಿದೆ ಟುಡೇಸ್ ಚಾಣಕ್ಯ. ಕಮಲ್ ಹಾಸನ್ ಪಕ್ಷ ಹಾಗೂ ಇತರೆ ಪಕ್ಷಗಳು 2 ರಿಂದ ನಾಲ್ಕು ಸ್ಥಾನಗಳಲ್ಲಿಯಷ್ಟೆ ಗೆಲುವು ಸಾಧಿಸಲಿವೆ.

Tamil Nadu Assembly Elections Todays Chanakya Exit polls Results 2021

ಎಐಎಡಿಎಂಕೆ ಪಕ್ಷಗಳು 37% ಮತಗಳಿಸಿದರೆ, ಡಿಎಂಕೆ ಪಕ್ಷವು 51% ಮತಗಳಿಸಲಿದೆ, ಇತರೆ ಪಕ್ಷಗಳು 21% ಮತಗಳಿಸಲಿವೆ. ಒಟ್ಟಾರೆ ಸ್ಟಾಲಿನ್ ಸಿಎಂ ಆಗುವುದು ಪಕ್ಕಾ ಎಂದಿದೆ ಸಮೀಕ್ಷೆ. ಈ ಬಾರಿ ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 25 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಡಿಎಂಕೆ ಭಾರಿ ಅಂತರದಿಂದ ಗೆಲುವು ಸಾಧಿಸುತ್ತಿರುವುದರಿಂದ ಕಾಂಗ್ರೆಸ್‌ ಸಹ 20 ಸ್ಥಾನಗಳಲ್ಲಿ ಜಯಗಳಿಸಬಹುದೆಂದು ಅಂದಾಜಿಸಬಹುದಾಗಿದೆ.

ಕಳೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷವು 136 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಡಿಎಂಕೆ ಪಕ್ಷವು 89 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಎಐಡಿಎಂಕೆ ಮುಖ್ಯಸ್ಥೆ ಜಯಲಲಿತಾ ನಿಧನ, ಶಶಿಕಲಾ ರಾಜಕೀಯ ಸನ್ಯಾಸ ಹಾಗೂ ಇತರೆ ಕಾರಣಗಳಿಂದ ದೊಡ್ಡ ಆಡಳಿತವಿರೋಧಿ ಅಲೆ ಕಾಣಿಸಿಕೊಂಡಿತು. ಹಾಗಾಗಿ ಈ ಬಾರಿರ ತಮಿಳುನಾಡಿನಲ್ಲಿ ಆಡಳಿತಾರೂಢ ಎಐಡಿಎಂಕೆಗೆ ಸೋಲು ಪಕ್ಕಾ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+