ವೇಶ್ಯಾವಾಟಿಕೆ ನಡೆಸುತ್ತಿದ್ದ ನಟಿ ಸಂಗೀತಾ ಬಾಲನ್ ಜೈಲುಪಾಲು

ಚೆನ್ನೈ, ಜೂನ್ 04: ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಸಂಗೀತಾ ಬಾಲನ್ ಹಾಗೂ ಅವರ ಜತೆಗಾರ ಸತೀಶ್ ಎಂಬುವವರನ್ನು ಜೈಲಿಗೆ ಕಳಿಸಲಾಗಿದೆ.

ಚೆನೈನ ರೆಸಾರ್ಟ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಸಂಗೀತಾ ಬಾಲನ್ ಅವರನ್ನು ಶನಿವಾರದಂದು ಬಂಧಿಸಲಾಗಿತ್ತು.

ಸಂಗೀತಾ ಅವರ ಜೊತೆಯಲ್ಲಿ ಸತೀಶ್ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ವಿದೇಶೀಯರನ್ನು ಬಳಸಿಕೊಂಡು ಯುವತಿಯರನ್ನು ಸೆಳೆಯುತ್ತಿದ್ದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ನೀಡುವ ಆಶ್ವಾಸನೆ ನೀಡುತ್ತಿದ್ದರು.

Tamil actor Sangeetha Balan sent to jail for running prostitution racket

ಸಿನಿಮಾರಂಗದಲ್ಲಿ ಅವಕಾಶ ಸಿಗದಿದ್ದರೆ, ಒಳ್ಳೆ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡುತ್ತಿದ್ದರು. ಈ ರೀತಿಯಾಗಿ ಯುವತಿಯರನ್ನು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿದ್ದರು ಎಂದು ಎಗ್ಮೋರ್ ಪೊಲೀಸರು ಹೇಳಿದ್ದಾರೆ.

ಬಂಧಿತ ಸಂಗೀತಾ ಬಾಲನ್ ಮತ್ತು ಸತೀಶ್ ಎಂಬುವವರನ್ನು ಎಗ್ಮೋರ್ ನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನಂತರ ಜೈಲಿಗೆ ಕಳುಹಿಸಲಾಗಿದೆ. ಸಂಗೀತಾ ಬಾಲನ್ ತಮಿಳು ಕಿರುತೆರೆಯಲ್ಲಿ ಸಾಕಷ್ಟು ಪ್ರಸಿದ್ದಿ ಹೊಂದಿದ್ದರು.

1996ರಲ್ಲಿ ಕರುಪ್ಪು ರೋಜಾ ಸಿನಿಮಾದೊಂದಿಗೆ ತಮಿಳು ಚಲನರಂಗಕ್ಕೆ ಕಾಲಿಟ್ಟ ಸಂಗೀತಾ ಬಾಲನ್ ನಂತರ ನಂತರ ವಾನಿ ರಾಣಿ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿದರು. ಚೆಲ್ಲಾಮ ಅವಳ್ ಮತ್ತು ವಲ್ಲಿ ಮುಂತಾದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+