'ಚಿನ್ನಮ್ಮ' ಶಶಿಕಲಾ ಕನಸು ಭಗ್ನ, ಕಳಚಲಿದೆ ಅಧಿನಾಯಕಿ ಪಟ್ಟ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 08: ತಮಿಳರ ಪಾಲಿನ 'ಚಿನ್ನಮ್ಮ' ವಿಕೆ ಶಶಿಕಲಾ ನಟರಾಜನ್ ಅವರು ಸಿಎಂ ಆಗುವ ಕನಸು ಭಗ್ನಗೊಳ್ಳುವ ಸಾಧ್ಯತೆ ಹೆಚ್ಚಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವರ ನೇಮಕಾತಿ ಅನೂರ್ಜಿತಗೊಳ್ಳಲಿದೆ ಎಂಬ ಮಾಹಿತಿ ಚುನಾವಣಾ ಆಯೋಗದಿಂದ ಬುಧವಾರ(ಫೆಬ್ರವರಿ 08) ಬಂದಿದೆ.

ಈ ಮೂಲಕ ತಮಿಳುನಾಡಿನಲ್ಲಿ ಸಂವಿಧಾನ ಬಿಕ್ಕಟ್ಟು ತಲೆ ದೋರುವ ಸಾಧ್ಯತೆ ಕಂಡು ಬಂದಿದೆ. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಎಐಎಡಿಎಂಕೆ ಪಕ್ಷದ ಅಧಿನಾಯಕಿಯಾಗಿ ಆಯ್ಕೆಯಾದ ಶಶಿಕಲಾ ನಟರಾಜನ್ ಅವರನ್ನು ಇತ್ತೀಚೆಗೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಇನ್ನೇನು ಸಿಎಂ ಪಟ್ಟಕ್ಕೇರುತ್ತಾರೆ ಎನ್ನುವಷ್ಟರಲ್ಲಿ ದಿಢೀರ್ ಬೆಳವಣಿಗೆಗಳು ಸಂಭವಿಸಿಸುತ್ತಿದ್ದು, ಎಲ್ಲವೂ ಶಶಿಕಲಾಗೆ ಮುಳುವಾಗುತ್ತಿದೆ.

Sasikala set to lose top post in AIADMK: EC sources

ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರು ಮೊದಲಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಮಯ ನೀಡಲು ಸಾಧ್ಯವಿಲ್ಲ, ಈ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಬೇಕಿದೆ ಎಂದರು. ನಂತರ ಕಳೆದ ರಾತ್ರಿ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಅವರು ಜಯಾ ಅವರ ಸಮಾಧಿ ಮುಂದೆ ಧ್ಯಾನಸ್ಥರಾಗಿ ಕುಳಿತ್ತೆದ್ದ ಬಳಿಕ, ನಾನು ರಾಜೀನಾಮೆ ಹಿಂಪಡೆಯುತ್ತೇನೆ ಎಂದು ಶಶಿಕಲಾ ವಿರುದ್ಧ ನಿಂತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Election Commission is likely to revoke the interim general secretary post held by Sasikala. She was elected as the interim general secretary of the AIADMK by the party in December. However the ECI is likely to revoke this post as there is no such provision in the party's constitution
Please Wait while comments are loading...