ಜಯಲಲಿತಾ ಕ್ಷೇತ್ರದ ಚುನಾವಣೆ: ಪನ್ನೀರ್ ಸೆಲ್ವಂ ಪ್ರತ್ಯೇಕ ರಣತಂತ್ರ

By: ಒನ್ ಇಂಡಿಯಾ ಸುದ್ದಿ
Subscribe to Oneindia Kannada

ಚೆನ್ನೈ, ಮಾರ್ಚ್ 16: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಪ್ರತಿನಿಧಿಸಿದ್ದ ಕ್ಷೇತ್ರವಾದ ರಾಧಾಕೃಷ್ಣ ನಗರ (ಆರ್ ಕೆ ನಗರ) ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷದ ಸ್ಥಾಯಿ ಸಮಿತಿಗಳ ಮುಖ್ಯಸ್ಥರಾಗಿದ್ದ ಇ. ಮಧುಸೂಧನ್ ಅವರನ್ನು ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಹಾಗೂ ಜಯಲಲಿತಾ ಅವರ ವಿಧೇಯರಾಗಿದ್ದ ಪನ್ನೀರ್ ಸೆಲ್ವಂ ನಿರ್ಧರಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರ ತಿಳಿಸಿದರು. ಏಪ್ರಿಲ್ 12ರಂದು ನಡೆಯಲಿರುವ ಈ ಉಪಚುನಾವಣೆ ಈಗಾಗಲೇ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

RK Nagar By-Polls: Panneerselvam fields Madhusudhanan

ಎಐಎಡಿಎಂಕೆ ಪರವಾಗಿ ಈಗಾಗಲೇ ಶಶಿಕಲಾ ಬಣವು, ಜಯಲಲಿತಾ ಸೋದರ ಸಂಬಂಧಿಯಾದ ಟಿಟಿವಿ ದಿನಕರನ್ ಅವರನ್ನು ಕಣಕ್ಕಿಳಿಸಿದೆ.

ಮತ್ತೊಂದೆಡೆ, ಶಶಿಕಲಾ ಅವರಿಗೆ ಸಡ್ಡು ಹೊಡೆದಿರುವ ಜಯಲಲಿತಾ ಅವರ ಮತ್ತೊಬ್ಬ ಸಂಬಂಧಿ ದೀಪಾ ಜಯ ಕುಮಾರ್ ಕೂಡ ಕಣಕ್ಕಿಳಿದಿದ್ದಾರೆ. ಈಗ, ಪನ್ನೀರ್ ಸೆಲ್ವಂ ಅವರೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿರುವುದರಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಈ ಹಿಂದೆ, 1991ರಲ್ಲಿ ಮಧುಸೂಧನ್ ಅವರು ಇದೇ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲದೆ, ಜಯಲಲಿತಾ ಸಂಪುಟದಲ್ಲಿ ಸಚಿವರಾಗಿ ಸಾಕಷ್ಟು ಅನುಭವ ಪಡೆದಿದ್ದಾರೆ.

ಆದರೆ, ಇತ್ತೀಚೆಗೆ, ಜಯಲಲಿತಾ ನಿಧನದ ನಂತರ, ನಡೆದ ರಾಜಕೀಯ ವಿದ್ಯಮಾನಗಳಲ್ಲಿ ಮಧುಸೂಧನ್ ಅವರನ್ನು ಎಐಎಡಿಎಂಕೆ ಪಕ್ಷದಲ್ಲಿ ಹೊಂದಿದ್ದ ಸ್ಥಾನಗಳಿಂದ ಕಿತ್ತೊಗೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Tamil Nadu Chief Minister O Panneerselvam, who also leads the rebel faction of the AIADMK, said on Thursday that E Madhusudhanan will contest from Radhakrishnan Nagar in the upcoming by-polls.
Please Wait while comments are loading...