ರಜನಿಗೆ ಕ್ಯಾಮೆರಾ ಎಲ್ಲಿದೆ ಎಂದು ಗೊತ್ತಿದೆ: ಕಮಲ್ ಹಾಸನ್
ಚೆನ್ನೈ, ಮೇ 26 : ರಾಜಕಾರಣ ಪ್ರವೇಶದ ಬಗ್ಗೆ ರಜನೀಕಾಂತ್ ನೀಡಿದ ಹೇಳಿಕೆಗೆ ನಟ ಕಮಲ್ ಹಾಸನ್ ಪ್ರತಿಕ್ರಿಯೆ ಚರ್ಚೆಗೆ ನಾಂದಿ ಹಾಡುವಂತಿದೆ. ಅಂದಹಾಗೆ ಕಮಲ್ ಹೇಳಿದ್ದೇನು ಗೊತ್ತೆ? ಕ್ಯಾಮೆರಾಗಳು ಎಲ್ಲಿವೆ ಅನ್ನೋದು ರಜನೀಕಾಂತ್ ಗೆ ಖಂಡಿತವಾಗ್ಯೂ ಗೊತ್ತಿದೆ ಎಂದು ಉತ್ತರಿಸಿದ್ದಾರೆ.
ರಾಜಕಾರಣದ ಬಗ್ಗೆ ರಜನಿ ನೀಡಿದ ಹೇಳಿಕೆಗೆ ನೀವೇನಂತೀರಿ ಎಂದು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ತಾವೇ ನಿರೂಪಕ ಆಗಿರುವ ರಿಯಾಲಿಟಿ ಷೋವೊಂದರ ಬಗ್ಗೆ ಮಾಹಿತಿ ನೀಡಲು ಮಾಧ್ಯಮದವರ ಜತೆ ಮಾತನಾಡಿದ್ದಾರೆ. ರಜನಿಯನ್ನು ರಾಜಕೀಯವಾಗಿ ಬೆಂಬಲಿಸುತ್ತೀರಾ ಎಂಬ ಪ್ರಶ್ನೆಗೆ, ಕ್ಯಾಮೆರಾದ ಮುಂದೆ ನಿರ್ಧಾರವನ್ನು ಬಹಿರಂಗಪಡಿಸಲ್ಲ ಎಂದಿದ್ದಾರೆ.[ರಜನಿಕಾಂತ್ ರಾಜಕೀಯಕ್ಕೆ ಏಕೆ ಧುಮುಕಬೇಕು : 5 ಕಾರಣ]

ಟ್ವಿಟ್ಟರ್ ಮೂಲಕ ನೀಡುವ ಹೇಳಿಕೆಗಳ ಮೂಲಕ ಕಮಲ್ ಸುದ್ದಿಯಾಗುತ್ತಿದ್ದಾರೆ. ಜಲ್ಲಿಕಟ್ಟು ಕ್ರೀಡೆಗೆ ಬೆಬಲ ಸೂಚಿಸಿದ್ದ ಅವರು, ನಿಷೇಧದ ವಿಚಾರದಲ್ಲಿ ತಮಿಳುನಾಡಿನಲ್ಲಿ ಹಿಂಸಾಚಾರ ನಡೆದಾಗ ಕಮಲ್ ಪತ್ರಿಕಾಗೋಷ್ಠಿ ಮಾಡಿದ್ದರು. ಅವರ ನಡೆಯನ್ನು ರಾಜಕೀಯ ಪ್ರೇರಿತ ಎಂಬ ಟೀಕೆ ವ್ಯಕ್ತವಾಗಿತ್ತು.[ನಾನು ಅಪ್ಪಟ್ಟ ತಮಿಳಿಗ : ಸ್ವಾಮಿಗೆ ತಿರುಗೇಟು ಕೊಟ್ಟ ರಜನಿ]
ಇದೆಲ್ಲ ಇರಲಿ, ರಜನಿಗೆ ಕ್ಯಾಮೆರಾ ಎಲ್ಲಿದೆ ಅನ್ನೋದು ಗೊತ್ತಿದೆ ಎಂಬ ಮಾತಿನ ಅರ್ಥ ಏನು? ಹೌದು, ರಜನಿ ಕ್ಯಾಮೆರಾ ಎದುರು ನಿಂತಾಗ ಇಂಥ ಮಾತುಗಳನ್ನಾಡುತ್ತಾರೆ ಎಂದಂತೆ ಇದೆ. ಎಲ್ಲವೂ ಕ್ಯಾಮೆರಾಗೋಸ್ಕರ ಅಷ್ಟೇ ಎಂದು ಲೈಟಾಗಿ ರಜನಿ ಕಾಲೆಳೆದಿದ್ದಾರೆ ಕಮಲ್.












Click it and Unblock the Notifications