ಸೂಪರ್ ಸ್ಟಾರ್ 'ರಜನಿ' ನಿರ್ಮಾಪಕರ 'ಡಾರ್ಲಿಂಗ್' ಏಕೆ?

Posted By:
Subscribe to Oneindia Kannada

ಚೆನ್ನೈ, ಡಿಸೆಂಬರ್ 04: ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಮೇರು ನಟ ಎಂದು ಕರೆಯುವುದು ಹೊಗಳಿಕೆಯ ಮಾತಲ್ಲ. ಅದು ಅವರ ನಡವಳಿಕೆಯಿಂದ ಬಂದ ಬಳುವಳಿ. ನಿರ್ಮಾಪಕರನ್ನು 'ಅನ್ನದಾತ' ಎಂದು ಕರೆಯುವುದು ಉತ್ಪ್ರೇಕ್ಷೆಯಲ್ಲ, ನಿಜ ಎಂಬುದನ್ನು ಮತ್ತೊಮ್ಮೆ ರಜನಿ ಸಾಬೀತು ಮಾಡಿದ್ದಾರೆ. ರಜನಿ ಗಾಯಗೊಂಡ ಸುದ್ದಿ ತಿಳಿದಿರಬಹುದು. ಆದರೆ, ವಿಶ್ರಾಂತಿ ಪಡೆಯದೆ ತಕ್ಷಣವೇ ರಜನಿ ಶೂಟಿಂಗ್ ಗೆ ಮರಳಿದ್ದಾರೆ.

ನಿರ್ದೇಶಕ ಶಂಕರ್ ಅವರ 2.0 (ರೋಬೊ ಭಾಗ 2) ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನಿ ಅವರು ಆಯತಪ್ಪಿ ಬಿದ್ದು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೂಕ್ತ ಚಿಕಿತ್ಸೆ ಪಡೆದುಕೊಂಡ ನಂತರ ನಡೀರಿ ಶೂಟಿಂಗ್ ಮಾಡೋಣ ಎಂದು ರಜನಿ ಹೇಳಿದಾಗ ಎಲ್ಲರೂ ಅಚ್ಚರಿಯಿಂದ ರಜನಿ ಅವರನ್ನು ನೋಡುತ್ತಿದ್ದರಷ್ಟೇ ಹೊರತೂ ಮಾತನಾಡಲು ಬಾಯಿ ಹೊರಡಲಿಲ್ಲ.

Rajinikanth shows why he is a superstar, resumes shoot minutes after injury Anusha Ravi

ರಜನಿ ಹೇಳಿಕ ಲೆಕ್ಕಾಚಾರದ ಬದುಕು: ನನ್ನೊಬ್ಬ ನಿಂದ ಒಂದು ದಿನ ಅಥವಾ ಒಂದು ಗಂಟೆ ಶೂಟಿಂಗ್ ನಿಂತರೇ ಅದು ನಿರ್ಮಾಪಕರಿಗಷ್ಟೇ ಅಲ್ಲ ಸಾವಿರಾರು ಜನಕ್ಕೆ ತೊಂದರೆಯಾಗಬಾರದು ಎಂದ ರಜನಿ ನಿಗದಿಯಾದಂತೆ ನೈಟ್ ಶೆಡ್ಯೂಲ್ ಮುಗಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಸೂಪರ್ ಸ್ಟಾರ್ ರಜನಿ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಭಾರಿ ಕಾಳಜಿಯಿಂದ ಗಮನಿಸುತ್ತಿರುವುದರಿಂದ ರಜನಿ ಗಾಯಗೊಂಡ ಸುದ್ದಿ ಬಹುಬೇಗ ಎಲ್ಲೆಡೆ ಹರಡಿತ್ತು. ಆದರೆ, ರಜನಿ ಅವರ ತಂಡ, ರಜನಿ ಅವರು ಶೂಟಿಂಗ್ ಗೆ ಮರಳಿರುವ ಸುದ್ದಿ ನೀಡಿ, ಆತಂಕ ನಿವಾರಿಸಿದರು.

ಅಕ್ಷಯ್ ಕುಮಾರ್, ಅಮಿ ಜಾಕ್ಸನ್ ಕೂಡಾ ಮುಖ್ಯಪಾತ್ರಗಳಲ್ಲಿರುವ ಈ ಚಿತ್ರ ದೀಪಾವಳಿ 2017ರ ವೇಳೆಗೆ ತೆರೆ ಕಾಣುವ ಸಾಧ್ಯತೆಯಿದೆ. ಸುಭಾಸ್ಕರನ್ ಅಲ್ಲಿರಾಜ ಹಾಗೂ ಲಂಡನ್ ಮೂಲದ ಲೈಕಾ ಪ್ರೊಡಕ್ಷನವರು ಈ ಚಿತ್ರಕ್ಕೆ ಹಣ ತೊಡಗಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Superstar Rajinikanth gave his fans the shivers as news of him being injured on the sets of 2.0 spread like wildfire. The superstar that he is, returned to the sets minutes after he was injured and resumed the night schedule shoot.
Please Wait while comments are loading...