ಮೋದಿ ನೀವು ಸಾಧಿಸಿಬಿಟ್ಟಿರಿ, ಶುಭಾಶಯ ಎಂದ ರಜನಿಕಾಂತ್

ಚೆನ್ನೈ, ಮೇ 23: ಲೋಕಸಭೆ ಚುನಾವಣೆ 2019ರ ಫಲಿತಾಂಶ ಕಂಡು ಸೂಪರ್ ಸ್ಟಾರ್ ರಜನಿಕಾಂತ್ ಅವರು ಸಂತಸಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ.

ಲೋಕಸಭೆ ಚುನಾವಣೆ 2019ರ ಫಲಿತಾಂಶ ಇದೀಗ ಜನತೆಯ ಕಣ್ಮುಂದಿದೆ. ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಮೇ 23ರಂದು ಮತದಾರರು ನೀಡಿರುವ ತೀರ್ಪು ಇಲ್ಲಿದೆ.

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ 10 ಲಕ್ಷಕ್ಕೂ ಅಧಿಕ ಮತಗಟ್ಟೆ ಬಳಸಲಾಗಿತ್ತು. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಮೇ 23ರಂದು ಫಲಿತಾಂಶ ನೀಡಲಾಗುತ್ತಿದೆ. 2014ರಲ್ಲಿ ಬಿಜೆಪಿ 282 ಹಾಗೂ ಎನ್ಡಿಎ 336 ಸ್ಥಾನಗಳನ್ನು ಗೆದ್ದು ಅಧಿಕಾರ ಸ್ಥಾಪಿಸಿತ್ತು. ಕಾಂಗ್ರೆಸ್ 44 ಹಾಗೂ ಯುಪಿಎ 60 ಸೀಟುಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

Rajinikanth congratulates Narendra Modi on Lok sabha Elections victory

ಈಗ 542ಗಳಪೈಕಿ ಎನ್ಡಿಎ+ 354; ಯುಪಿಎ: 88, ಇತರೆ 100 ಗಳಿಸಿದ್ದು, ಮೋದಿ ಅವರೇ ನೀವು ಸಾಧಿಸಿಬಿಟ್ಟಿರಿ, ನಿಮಗೆ ದೇವರು ಒಳ್ಳೆಯದನ್ನು ಮಾಡಲಿ, ಶುಭ ಹಾರೈಕೆ ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+