ಚೆನ್ನೈನಲ್ಲಿ ಶಂಕಿತ ಐಸಿಸ್ ಉಗ್ರನ ಬಂಧನ
ಚೆನ್ನೈ, ಜುಲೈ 04 : ರಾಜಸ್ತಾನ ಭಯೋತ್ಪಾದನಾ ನಿಗ್ರಹದಳ ಅಧಿಕಾರಿಗಳು, ತಮಿಳುನಾಡು ಪೊಲೀಸರ ಸಹಕಾರದೊಂದಿಗೆ ನಡೆಸಿದ ಕಾರ್ಯಾಚರಣೆಯಲ್ಲಿ ಶಂಕಿತ ಐಸಿಸ್ ಉಗ್ರನನ್ನು ಮಂಗಳವಾರ ಚೆನ್ನೈನಲ್ಲಿ ಬಂಧಿಸಿದ್ದಾರೆ.
30 ವರ್ಷದ ಹರೂನ್ ಎನ್ನುವ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ಐಸಿಸ್ ಉಗ್ರರಿಗೆ ಹಣ ವರ್ಗಾವಣೆ ಮಾಡುತ್ತಿದ್ದ ಎನ್ನಲಾಗಿದೆ. ವಿಚರಣೆಗಾಗಿ ಹರೂನ್ ನನ್ನು ಪೊಲೀಸರು ಜೈಪುರಕ್ಕೆ ಕರೆದೊಯ್ದರು.

ಚೆನ್ನೈನಲ್ಲಿ ಬಂಧಿತನಾಗಿರುವ ವ್ಯಕ್ತಿ ಐಸಿಸ್ ಉಗ್ರರಿಗೆ ಹಣ ವರ್ಗಾವಣೆ ಮಾಡುತ್ತಿದ್ದ. ಐಸಿಸ್ ಪರವಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಕಲೆ ಹಾಕಿದ ರಾಜಸ್ತಾನ ಎಸ್ ಒಜಿ ಪೊಲೀಸ್ ಕಾರ್ಯಾಚರಣೆ ಕೈಗೊಂಡಿತ್ತು.












Click it and Unblock the Notifications