• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಯಾ ನಿಧನದ ನಂತರ ಮೋದಿಯೇ ನಮಗೆ ತಂದೆ: ಎಐಎಡಿಎಂಕೆ ಸಚಿವ

|
   ಎಲ್ಲರಲ್ಲೂ ಅಚ್ಚರಿ ತಂದಿದೆ ಸಚಿವರ ಈ ಹೇಳಿಕೆ..!

   ಚೆನ್ನೈ, ಮಾರ್ಚ್ 9: ತಮಿಳುನಾಡಿನ ಆಡಳಿತ ಎಐಎಡಿಎಂಕೆ ಪಕ್ಷಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ತಂದೆಯಂತೆ. ಸಚಿವ ಕೆ ಟಿ ಆರ್ ಬಾಲಾಜಿ ಈ ಮಾತನ್ನು ಹೇಳಿದ್ದಾರೆ.

   ತಮಿಳುನಾಡಿನ ವಿರುದನಗರ ಜಿಲ್ಲೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಾಲಾಜಿ, ನಮ್ಮ ನಾಯಕಿ ಜಯಲಲಿತಾ ನಿಧನವಾದ ನಂತರ ಮೋದಿಯೇ ನಮಗೆ ತಂದೆಯ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದಾರೆಂದು ಹೇಳಿದ್ದಾರೆ.

   ಲೋಕಸಭಾ ಚುನಾವಣೆ ಹೊತ್ತಲ್ಲಿ ರಂಗೇರಲಿದೆ ತಮಿಳುನಾಡು ರಾಜಕೀಯ!

   ಅಮ್ಮ (ಜಯಲಲಿತಾ) ನಿಧನದ ನಂತರ ಅವರೇ (ಮೋದಿ) ನಮಗೆಲ್ಲಾ ಡ್ಯಾಡಿ ಎಂದಿರುವ ಸಚಿವ ಬಾಲಾಜಿ, ಎಐಎಡಿಎಂಕೆ ಪಕ್ಷಕ್ಕೆ ಒಬ್ಬರೇ ತಂದೆ, ಅದು ಮೋದಿ ಎಂದು ಸಚಿವರು ಸಭೆಯಲ್ಲಿ ಒತ್ತಿಒತ್ತಿ ಹೇಳಿದ್ದಾರೆ.

   ಪ್ರಧಾನಿ ಮೋದಿ ಬರೀ ತಮಿಳುನಾಡಿಗೆ ಮಾತ್ರ ತಂದೆಯಲ್ಲ, ಇಡೀ ದೇಶಕ್ಕೆ ಅವರೇ ತಂದೆ. ಹಾಗಾಗಿ, ನಾವು ತಮಿಳುನಾಡಿನಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

   2014ರ ಲೋಕಸಭಾ ಚುನಾವಣೆಯ ವೇಳೆ ಒಂದು ವಾಕ್ಯ ಬಹಳ ಜನಪ್ರಿಯತೆಯನ್ನು ಪಡೆದಿತ್ತು. 'ತಮಿಳುನಾಡಿನ ಮಹಿಳೆಯೋ ಅಥವಾ ಗುಜರಾತಿನ ಮೋದಿಯೋ' ಎನ್ನುವ ಹೇಳಿಕೆಯನ್ನು ಎಐಎಡಿಎಂಕೆ ಮುಖಂಡರು, ಕಾರ್ಯಕರ್ತರು ಕೂಗಿ, ಮೋದಿಗೆ ತಿರುಗಿ ನಿಂತಿದ್ದರು.

   ಲೋಕಸಭೆ ಚುನಾವಣೆ: ತಮಿಳುನಾಡಿನಲ್ಲಿ ಬಿಜೆಪಿಗೆ ಐದು ಕ್ಷೇತ್ರ ಬಿಟ್ಟುಕೊಟ್ಟ ಎಐಎಡಿಎಂಕೆ

   ನನ್ನ ಸಾರಥ್ಯದಲ್ಲಿ ತಮಿಳುನಾಡು ರಾಜ್ಯ ಮೋದಿ ಆಡಳಿತದ ಗುಜರಾತ್ ಗಿಂತಲೂ ಹೆಚ್ಚಿನ ಅಭಿವೃದ್ದಿ ಕಾಣಲಿದೆ. ಮೋದಿಗಿಂತಲೂ ಉತ್ತಮ ಆಡಳಿತವನ್ನು ನಾನು ನೀಡುತ್ತೇನೆಂದು ದಿ. ಜಯಲಲಿತಾ ಚುನಾವಣಾ ಸಭೆಯಲ್ಲಿ ಹೇಳಿದ್ದರು.

   English summary
   None other than Prime Minister Narendra Modi is the “Daddy” of the ruling All India Anna Dravida Munnetra Kazhagam (AIADMK), Tamil Nadu dairy development minister KT Rajenthira Balaji said on Friday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X