ಮೋದಿ ಬಿಟ್ಟ ಬಾಣಕ್ಕೆ ತಮಿಳುನಾಡಿನ ರಾಜಕಾರಣದಲ್ಲಿ ಬಿದ್ದ ಹಕ್ಕಿಗಳೆಷ್ಟು!
Recommended Video

ರಾಜಕಾರಣದ ಮಗ್ಗುಲು ಹೇಗೆಲ್ಲ ಬದಲಾಗುತ್ತವೆ ಅನ್ನೋದಿಕ್ಕೆ ಪ್ರಧಾನಿ ಮೋದಿಯ ಚೆನ್ನೈ ಭೇಟಿ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇನ್ನೇನು ನಾಳೆ ಬೆಳಗಾದರೆ ಡಿಎಂಕೆ ರಸ್ತೆಗಿಳಿದು ಅಪನಗದೀಕರಣದ ವಿರುದ್ಧ ಹೋರಾಟ ನಡೆಸಬೇಕಿತ್ತು. ಆದರೆ ಈಗ ಪ್ರತಿಭಟನೆಯಿಂದ ಹಿಂದೆ ಸರಿದಿದೆ.
ಚೆನ್ನೈನಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರನ್ನು ಭೇಟಿ ಮಾಡಿದ ಮೋದಿ ನಡೆ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅದೂ 2ಜಿ ಹಗರಣದ ತೀರ್ಪಿನ ದಿನಾಂಕ ಕೋರ್ಟ್ ನಿಂದ ಪ್ರಕಟವಾಗಲು ಒಂದು ದಿನ ಬಾಕಿ ಇರುವಂತೆ ಆದ ಈ ಭೇಟಿ ಕುತೂಹಲಕ್ಕೆ ಕಾರಣವಾಗಿತ್ತು.
ಆದರೆ, ಕೋರ್ಟ್ ತೀರ್ಪಿನ ದಿನಾಂಕ ಪ್ರಕಟ ಆಗುವುದಕ್ಕೂ, ಮೋದಿ ಭೇಟಿಗೂ ಕಾಕತಾಳೀಯ ಸಂಬಂಧವೇ ಇರಬಹುದು. ರಾಜಕಾರಣದ ದೃಷ್ಟಿಯಿಂದ ಮಹತ್ವ ಪಡೆದದ್ದಂತೂ ದಿಟ. ಇದು ಕೇವಲ ಔಪಚಾರಿಕ ಭೇಟಿ. ಇಲ್ಲಿ ರಾಜಕೀಯ ಏನೂ ಇಲ್ಲ ಎಂಬ ಮಾತು ಕೇಳಿಬರುತ್ತಿದೆಯಾದರೂ ಇಬ್ಬರು ಪಳಗಿದ ರಾಜಕಾರಣಿಗಳ ಭೇಟಿಯೇ ಹಲವು ವಿಷಯವನ್ನು ಅರ್ಥ ಮಾಡಿಸುತ್ತದೆ.
ತಮಿಳುನಾಡಿನ ರಾಜಕೀಯ ಹೈಡ್ರಾಮಾಗಳು ದೆಹಲಿಯಿಂದ ಅದೆಷ್ಟೋ ಸಾವಿರ ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರಬಹುದು. ಆದರೆ ಅದನ್ನು ಕಿರು ಬೆರಳ ಇಶಾರೆಯಲ್ಲಿ ಆಡಿಸುತ್ತಿರುವುದು ಯಾರು ಎಂಬುದನ್ನು ತಿಳಿಯುವುದಕ್ಕೆ ತಲೆಗೆ ತೀರಾ ಕೆಲಸ ಕೊಡುವ ಅಗತ್ಯವಿಲ್ಲ. ಇಲ್ಲದಿದ್ದರೆ ತಮಿಳುನಾಡಿನ ರೈತರು ದೆಹಲಿಯಲ್ಲಿ ಪ್ರತಿಭಟನೆ ಕೈಗೊಂಡಾಗ ಕೊತಕೊತ ಕುದಿಯುತ್ತಿದ್ದ ಎಂ.ಕೆ.ಸ್ಟಾಲಿನ್ ತಣ್ಣಗಾಗಿದ್ದು ಸುಮ್ಮನಂತೂ ಅಲ್ಲ.

ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಿರಿ ಎಂದ ಪ್ರಧಾನಿ
ದೆಹಲಿಯಲ್ಲಿರುವ ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯಿರಿ ಎಂದು ಸ್ವತಃ ಪ್ರಧಾನಿ ಮೋದಿ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರಿಗೆ ಆಹ್ವಾನ ನೀಡಿದ್ದು ತೀರಾ ಅನಿರೀಕ್ಷಿತವಾಗಿತ್ತು. ಇನ್ನು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಮೋದಿ ಅವರ ಭೇಟಿ ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಕಾಂಗ್ರೆಸ್ ನ ಬಹುಕಾಲದ ದೋಸ್ತಿ ಡಿಎಂಕೆ
ಅಪನಗದೀಕರಣದ ವಾರ್ಷಿಕೋತ್ಸವದ ವೇಳೆ ಡಿಎಂಕೆ ಪ್ರತಿಭಟನೆ ನಡೆಸಲು ಎಲ್ಲ ಸಿದ್ಧತೆ ನಡೆಸಿತ್ತು. ಆದರೆ ಮೋದಿ ಭೇಟಿ ನಂತರ ಡಿಎಂಕೆ ಪ್ರತಿಭಟನೆಯನ್ನು ಕೈ ಬಿಟ್ಟಿದೆ. ಇದೇ ವೇಳೆ ಎಐಎಡಿಎಂಕೆ ಸಚಿವರಲ್ಲಿ ಆತಂಕ ಸೃಷ್ಟಿಸಿದ್ದು, ಕಾಂಗ್ರೆಸ್ ನ ಬಹುಕಾಲದ ದೋಸ್ತಿ ಡಿಎಂಕೆ ತನ್ನ ಒಲವನ್ನು ಬಿಜೆಪಿ ಕಡೆಗೆ ತೋರಿದರೆ ಹೇಗೆ ಎಂಬ ಗುಮಾನಿಯೂ ಶುರುವಾಗಿದೆ.

ಡಿಎಂಕೆ ಮುಖಂಡರು ಅಚ್ಚರಿಯಲ್ಲಿ
ಜಯಲಲಿತಾ ಅವರು ಇರುವವರೆಗೂ ಪ್ರಧಾನಿ ಮೋದಿ ಸ್ನೇಹ 'ಅಮ್ಮ'ನೊಂದಿಗೆ ಚೆನ್ನಾಗಿತ್ತು. ಪ್ರಧಾನಿ ಆದ ನಂತರ ಜಯಾ ಅವರನ್ನು ಭೇಟಿ ಮಾಡಿದ್ದ ಮೋದಿ, ಇದೇ ಮೊದಲ ಬಾರಿ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದು, ಅದರಲ್ಲೂ ತಮ್ಮ ಮನೆಗೆ ಕರುಣಾರನ್ನು ಆಹ್ವಾನ ಮಾಡಿದ್ದು ಡಿಎಂಕೆ ಮುಖಂಡರನ್ನೂ ಅಚ್ಚರಿಗೆ ಕೆಡವಿದೆ.

ಕನಿಮೊಳಿ, ಸ್ಟಾಲಿನ್ ಭೇಟಿ
ಮೋದಿ ಅವರು ಸ್ಟಾಲಿನ್ ಹಾಗೂ ಕನಿಮೊಳಿ ಇಬ್ಬರನ್ನೂ ಭೇಟಿ ಮಾಡಿದ್ದಾರೆ. ಈ ವೇಳೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಖಾತೆ ರಾಜ್ಯ ಸಚಿವ ಪೊನ್ ರಾಧಾಕೃಷ್ಣನ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷೆ ತಮಿಳಿಸೈ ಸೌಂದರ್ ರಾಜನ್ ಹಾಜರಿದ್ದರು. ಕರುಣಾನಿಧಿ ಅವರ ಕುಟುಂಬದ ಇತರ ಸದಸ್ಯರೂ ಇದ್ದರು.

ಆಕ್ರೋಶ ತಮಣಿ ಮಾಡುವ ಯತ್ನ
ತಮಿಳುನಾಡು ರಾಜಕಾರಣದಲ್ಲಿ ಬಿಜೆಪಿಯ ಛಾಪು ಮೂಡಿಸಲು ರೂಪಿಸುತ್ತಿರುವ ತಂತ್ರಗಾರಿಕೆಯಂತೆ ಕಾಣುವ ಈ ನಡೆಯು ಒಂದು ಕಡೆ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರನ್ನು ಭೇಟಿ ಮಾಡಿ, ಎಐಎಡಿಎಂಕೆಯಲ್ಲಿ ತಲ್ಲಣ ಹುಟ್ಟಿಸುತ್ತಿದ್ದರೆ, ಇನ್ನೊಂದು ಕಡೆ ತಮಿಳುನಾಡಿನಲ್ಲಿ ಬಿಜೆಪಿ ವಿರುದ್ಧ ಎದ್ದಿರುವ ಆಕ್ರೋಶ ತಮಣಿ ಮಾಡುವ ಪ್ರಯತ್ನದಂತೆಯೂ ಕಾಣುತ್ತಿದೆ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications