ಟಿವಿ ನೋಡುತ್ತಾ ಮೈಮರೆತ ಹೆತ್ತವರು: ಟಬ್‌ನಲ್ಲಿ ಮುಳುಗಿ ಮಗು ಸಾವು
ಚೆನ್ನೈ, ಅಕ್ಟೋಬರ್ 29: ಹೆತ್ತವರು ಟಿವಿ ನೋಡುವುದರಲ್ಲಿ ಮಗ್ನರಾಗಿರುವಾಗ ಆಟವಾಡುತ್ತಿದ್ದ ಮಗು ಟಬ್‌ನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಚೆನ್ನೈನಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿರುವ ಮಗು ರಕ್ಷಣಾ ಕಾರ್ಯವನ್ನು ಟಿವಿಯಲ್ಲಿ ನೋಡುತ್ತಿರುವಾಗ ಮಗುವಿನ ಬಗ್ಗೆ ಗಮನ ಕೊಟ್ಟಿರಲಿಲ್ಲ. ಆಟವಾಡುತ್ತಾ ನೀರಿದ್ದ ಟಬ್ ಬಳಿ ತೆರಳಿ ಟಬ್ ಒಳಗೆ ಮುಳುಗಿ ಮೃತಪಟ್ಟಿದೆ.
ರೇವತಿ ಸಂಜನಾ(2) ಸೋಮವಾರ ರಾತ್ರಿ ಪೋಷಕರ ಜೊತೆಗೆ ಆಟವಾಡುತ್ತಿತ್ತು. ಪೋಷಕರು ಟಿವಿ ನೋಡುವುದರಲ್ಲಿ ಮಗ್ನರಾಗಿದ್ದರು. ಬಳಿಕ ಮಗಳು ತಮ್ಮ ಜೊತೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಹುಡುಕಾಡಿದಾಗ ಬಕೆಟ್‌ನಲ್ಲಿ ಬಿದ್ದಿದ್ದಳು. ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರೊಳಗೆ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.

ಬೋರ್‌ವೆಲ್ ನಲ್ಲಿ ಬಿದಿದ್ದ ಬಾಲಕ ಮತ್ತೆ ಹೆತ್ತವರ ಮಡಿಲು ಸೇರಲೇ ಇಲ್ಲ, ಸತತ ನಾಲ್ಕು ದಿನಗಳ ಜೀವನ್ಮರಣ ನಡುವೆ ಹೋರಾಡುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ.
ಸುಜಿತ್(2) ಬೋರ್‌ವೆಲ್‌ಗೆ ಬಿದ್ದಿದ್ದು, ಕಳೆದ ನಾಲ್ಕು ದಿನಗಳಿಂದ ನಿರಂತರ ಕಾರ್ಯಾಚರಣೆ ನಡೆಯುತ್ತಿತ್ತು ಕೊನೆಗೂ ಬಾಲಕ ಬದುಕಿ ಬರಲೇ ಇಲ್ಲ.
ತಮಿಳುನಾಡಿನ ತಿರುಚ್ಚಿ ನಡಕಟ್ಟುಪಟ್ಟಿ ಸಮೀಪ ಬೋರ್‌ವೆಲ್‌ಗೆ ಶುಕ್ರವಾರ ಸಂಜೆ ಸುಜಿತ್ ಆಯಾತಪ್ಪಿ ಬಿದ್ದಿದ್ದನು. ಸುಮಾರು 600 ಅಡಿ ಆಳದ ಬೋರ್‌ವೆಲ್‌ನಲ್ಲಿ ಬಿದ್ದ ಸುಜಿತ್ 100 ಅಡಿ ಆಳದಲ್ಲಿ ಸಿಲುಕಿದ್ದನು.












Click it and Unblock the Notifications