ಅರವತ್ತಾರರ ಜಯಲಲಿತಾಗೆ ಮಾರಕವಾದ 6 ಸಂಖ್ಯೆ

ಚೆನ್ನೈ, ಸೆ. 27 : ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೇವಲ 1 ರು. ಸಂಬಳ ಪಡೆಯುತ್ತಿದ್ದರೂ ಕೋಟಿಗಟ್ಟಲೆ ಅಕ್ರಮ ಆಸ್ತಿ ಗಳಿಸಿದ ಆರೋಪ ಸಾಬೀತಾಗಿ, ಜೈಲುಕಂಬಿ ಎಣಿಸಲು ಸಿದ್ಧವಾಗಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಕ್ಕೆ 6 ಸಂಖ್ಯೆ ಮಾರಕವಾಗಿ ಪರಿಣಮಿಸಿದೆ.

ಇದು ವಿಚಿತ್ರ ಎಂದು ಕಾಣಿಸಬಹುದು. ಆದರೆ, ಕಾಕತಾಳಿಯವಾಗಿ ಆರು ಸಂಖ್ಯೆ ಜಯಲಲಿತಾ ಅವರನ್ನು ಅಕ್ಷರಶಃ ಜೈಲಿಗಟ್ಟಿದೆ. ಹಿಂದಿನಂತೆ ಪುಟಿದೇಳದಿದ್ದರೆ, ಅವರ ರಾಜಕೀಯ ಜೀವನ ಇಲ್ಲಿಗೆ ಹೆಚ್ಚೂಕಡಿಮೆ ಮುಕ್ತಾಯವಾದಂತೆ. ಈ ಸಂಖ್ಯೆಯ ಚಮತ್ಕಾರ ಯಾವ ಸಂಖ್ಯಾಶಾಸ್ತ್ರಜ್ಞನೂ ಹೇಳಿಲ್ಲ, ಜ್ಯೋತಿಷಿಯೂ ಹೇಳಿಲ್ಲ. ಸುಮ್ಮನೆ ಒಮ್ಮೆ ಈ ಸಂಖ್ಯೆಗಳ ಮೇಲೆ ಕಣ್ಣಾಡಿಸಿ.

Number 6 becomes fatal for Jayalalithaa

ಮೊದಲ ಬಾರಿಗೆ ಜಯಲಲಿತಾ ಮುಖ್ಯಮಂತ್ರಿಯಾದಾಗ 66 ಕೋಟಿ 66 ಲಕ್ಷ ರು. ಸಂಪತ್ತನ್ನು ಅಕ್ರಮವಾಗಿ ಗಳಿಸಿದ ಆರೋಪ ಹೊರಿಸಿ 1996ರಲ್ಲಿ ಅವರ ಮೇಲೆ ಕೇಸು ಹಾಕಲಾಗಿತ್ತು.. ಮೂರು ಬಾರಿ ಮುಖ್ಯಮಂತ್ರಿಯಾಗಿರುವ ಅವರು 2016ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ 4ನೇ ಬಾರಿಗೆ ಮತ್ತೆ ಮುಖ್ಯಮಂತ್ರಿಯಾಗುವ ಹವಣಿಕೆಯಲ್ಲಿದ್ದರು. ಅಂದ ಹಾಗೆ, ಜಯಲಲಿತಾ ಅವರ ವಯಸ್ಸು ಕೂಡ 66.

ಮತ್ತೊಂದು ವಿಷಯವೆಂದರೆ, ಅವರು ಅಪರಾಧಿ ಎಂದು ಸಾಬೀತಾಗಿರುವುದರಿಂದ ಇನ್ನು 6 ವರ್ಷಗಳ ಕಾಲ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಅಲ್ಲದೆ, ವಾರದ ಆರನೇ ದಿನ (ಶನಿವಾರ) ಈ ಐತಿಹಾಸಿಕ ತೀರ್ಪು ಪ್ರಕಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+