ಅಮ್ಮಾ ಇಡ್ಲಿಗೆ ಸವಾಲ್, ನಮೋ ಫಿಶ್ ಸ್ಟಾಲ್ ಆರಂಭ!
ಚೆನ್ನೈ, ಫೆ.25-ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರಿನಲ್ಲಿ/ಮುಂದಾಳತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ನಿರ್ಧರಿಸಿದ ಬಿಜೆಪಿಗೆ ವಿರೋಧ ಪಕ್ಷವಾದ ಕಾಂಗ್ರೆಸ್ 'ನಮೋ ಟೀ' ಕಾನ್ಸೆಪ್ಟನ್ನು ಬೆಳ್ಳಿ ತಟ್ಟೆಯಲ್ಲಿಟ್ಟು ಚುನಾವಣಾ ಗಿಫ್ಟ್ ಆಗಿ ನೀಡಿತು. ಅದು ಯಶಸ್ವಿಯಾಗಿದ್ದೇ ತಡ ಬಿಜೆಪಿ ಅನಾಯಾಸವಾಗಿ ಇನ್ನೂ ಅನೇಕ ಸಾಧ್ಯತೆಗಳನ್ನು ಕಂಡುಕೊಂಡಿದೆ.
ಮೋದಿ ಹೆಸರಿನಲ್ಲಿ ಮೀನು ಮಾರಾಟಕ್ಕಿಳಿದ ಬಿಜೆಪಿ:

ಅಮ್ಮಾ ಇಡ್ಲಿಗೆ ಸವಾಲ್!:
'ದೇಶದ ಮೀನುಗಾರರನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮ ಜಾರಿಗೊಳಿಸಲಾಗಿದೆ' ಎಂದು ಚೆನ್ನೈ ಬಿಜೆಪಿ ಘಟಕದ ಮುಖಂಡ ತಮಿಳಿಸೈ ಸುಂದರಾಜನ್ ತಿಳಿಸಿದ್ದಾರೆ. ತಮಿಳುನಾಡಿನಲ್ಲಿ 10 ಲಕ್ಷ ಮಂದಿ ಮೀನುಗಾರರಿದ್ದು, ಆರು ಲೋಕಸಭಾ ಕ್ಷೇತ್ರಗಳಲ್ಲಿ ಪ್ರಧಾನವಾಗಿ ಕಂಡುಬರುತ್ತಾರೆ. ( ಫೆ 1ರಿಂದ ಮೋದಿ ಚಹಾ ಸಂವಾದ; ಉದ್ಯಮ ಫುಲ್ ಖುಷ್ )
'ಕೇವಲ ಮೀನುಗಾರರ ಮತ ಬೇಟೆಗಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ಬದಲಿಗೆ ಸಮಾಜದಲ್ಲಿ ಮೀನುಗಾರರು ತುಳಿತಕ್ಕೊಳಗಾಗಿದ್ದಾರೆ. ಸರಕಾರದ ಸಾಕಷ್ಟು ಯೋಜನೆಗಳು ಬೆಸ್ತರನ್ನು ತಲುಪುವುದೇ ಇಲ್ಲ. ನಮ್ಮ 'ನಮೋ ಫಿಶ್ ಸ್ಟಾಲ್' ಮುಖಾಂತರ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದೇ ಕಾರ್ಯಕ್ರಮದ ಉದ್ದೇಶವಾಗಿದೆ' ಎಂದು ಸುಂದರಾಜನ್ ಹೇಳಿದ್ದಾರೆ.
( ಕಾಲೇಜ್ ಕ್ಯಾಂಪಸ್ಸುಗಳಲ್ಲಿ ಇನ್ಮುಂದೆ ಮೋದಿ ಕೆಫೆ )
ಈ ಮಧ್ಯೆ, 'ನಮೋ ಫಿಶ್ ಸ್ಟಾಲ್' ಜನರನ್ನು ತನ್ನತ್ತ ಸೆಳೆಯಲು ಕಡಿಮೆ ದರಕ್ಕೆ ಮೀನು ಮಾರಾಟ ಮಾಡಿದ್ದಾರೆ. ಇದರಿಂದ ಜನ ಹೆಚ್ಚಾಗಿ ಅಲ್ಲಿಯೇ ಮೀನು ಖರೀದಿಗೆ ಹೋದರೆ ನಮ್ಮ ಗತಿಯೇನು ಎಂದು ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ( ಮೋದಿ ಜಾಹೀರಾತು: ಪೇಚಿಗೀಡಾದ ಕಾಂಗ್ರೆಸ್ಸಿಂದ ವಾಪಸ್? )












Click it and Unblock the Notifications