ಚೆನ್ನೈನ ಗೋದಾಮಿನಲ್ಲಿ ಭಾರಿ ಅಗ್ನಿ ಅನಾಹುತ

ಚೆನ್ನೈ, ಫೆಬ್ರವರಿ 29: ಚೆನ್ನೈನ ಮಾಧಾವರಂ ಪ್ರದೇಶದಲ್ಲಿನ ತೈಲ ಗೋದಾಮಿನಲ್ಲಿ ಶನಿವಾರ ಸಂಜೆ ಭಾರಿ ಅಗ್ನಿ ದುರಂತ ಸಂಭವಿಸಿದೆ.

ಕನಿಷ್ಠ 26 ಅಗ್ನಿ ಶಾಮಕ ವಾಹನಗಳು, 500ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಮಿಳುನಾಡು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಹೆಚ್ಚುವರಿ ನಿರ್ದೇಶಕ ಶೈಲೇಂದ್ರ ಬಾಬು ತಿಳಿಸಿದ್ದಾರೆ.

Massive Fire Breaks At Oil Warehouse In Chennai Madhavaram

ವೈದ್ಯಕೀಯ ಉದ್ದೇಶಕ್ಕೆ ಬಳಕೆಯಾಗುವ ರಾಸಾಯನಿಕ ಆಧಾರಿತ ಸಾಮಗ್ರಿಗಳನ್ನು ಇರಿಸಿದ್ದ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಇದರಿಂದಾಗಿ ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿದೆ. ಪ್ರದೇಶದ ಸುತ್ತಮಜತ್ತಲೂ ದಟ್ಟವಾದ ಹೊಗೆ ಆವರಿಸಿದ್ದು, ಮುಗಿಲೆತ್ತರಕ್ಕೆ ಜ್ವಾಲೆಗಳು ಚಿಮ್ಮುತ್ತಿವೆ.

ಬೆಂಕಿ ಆಕಸ್ಮಿಕದಿಂದ ಇದುವರೆಗೂ ಯಾವುದೇ ಸಾವು ನೋವು ವರದಿಯಾಗಿಲ್ಲ. ಶೀಘ್ರದಲ್ಲಿಯೇ ಬೆಂಕಿಯನ್ನು ನಿಯಂತ್ರಣಕ್ಕೆ ತರುವುದಾಗಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+