ಶರವಣ ಸ್ಟೋರ್ಸ್‌ನ 74 ಮಳಿಗೆಗಳ ಮೇಲೆ ಐಟಿ ದಾಳಿ

ಚೆನ್ನೈ, ಜನವರಿ 29: ತಮಿಳುನಾಡಿನ ಪ್ರಸಿದ್ಧ ವ್ಯಾಪಾರ ಅಂಗಡಿ ಶರವಣ ಸ್ಟೋರ್ಸ್‌ನ 74 ಮಳಿಗೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.

ಚೆನ್ನೈ ಮತ್ತು ಕೊಯಮತ್ತೂರಿನಲ್ಲಿರುವ ಶರವಣ ಸ್ಟೋರ್ಸ್‌ನ 74 ಮಳಿಗೆಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ.

ರಿಯಾಲಿಟಿ ವ್ಯವಹಾರ ಮತ್ತು ಶರವಣ ಸ್ಟೋರ್ಸ್ ನಡೆಸುತ್ತಿರುವ ಜಿ ಸ್ಕ್ವೇರ್/ಲೋಟಸ್ ಸಮೂಹಕ್ಕೆ ಸಂಬಂಧಿಸಿದ ಸ್ಥಳಗಳಲ್ಲಿ ದಾಖಲೆಗಳ ಶೋಧ ಕಾರ್ಯಾಚರಣೆ ನಡೆಸಲಾಗಿದೆ. 74 ಸ್ಥಳಗಳ ಪೈಕಿ ಎರಡು ಮಾತ್ರ ಕೊಯಮತ್ತೂರಿನಲ್ಲಿದ್ದು, ಉಳಿದ ಎಲ್ಲ ಮಳಿಗೆಗಳೂ ಚೆನ್ನೈನಲ್ಲಿವೆ ಎಂದು ಐಟಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

income tax raids 74 branches of saravana stores in chennai coimbatore

ಸಮೂಹದ ಎರಡು ರಿಯಾಲ್ಟಿ ಕಂಪೆನಿಗಳು ಮತ್ತು ಶರವಣ ಸ್ಟೋರ್ಸ್ ಸಂಸ್ಥಾಪಕ ಯೋಗರತ್ನಂ ಅವರ ಮಗ ಪೊಂಡುರೈ ಅವರ ನಿವಾಸದ ಮೇಲೆಯೂ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ತೆರಿಗೆ ವಂಚನೆ ಮತ್ತು ದಾಖಲೆಗಳಿಲ್ಲದ ಹಣ ಹೊಂದಿರುವ ಬಗ್ಗೆ ಮಾಹಿತಿ ಬಂದಿದೆ. ಅವರ ಆದಾಯ ಮತ್ತು ತೆರಿಗೆ ಪಾವತಿಯ ದಾಖಲೆಗಳನ್ನು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+