ತಮಿಳುನಾಡಿನಲ್ಲಿ ಬೃಹತ್ ಐಟಿ ದಾಳಿ, 160 ಕೋಟಿ ರು ವಶ

ಚೆನ್ನೈ, ಜುಲೈ 17: ಮೆಸರ್ಸ್ ಎಸ್ ಪಿಕೆ ಹಾಗೂ ಕಂಪನಿ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯವರು ಇಲ್ಲಿ ತನಕ ಸುಮಾರು 160 ಕೋಟಿ ರು ನಗದು ಹಾಗೂ 100 ಕೆಜಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ತಮಿಳುನಾಡಿನ ವಿವಿಧೆಡೆ ದಾಳಿ ಮುಂದುವರೆದಿದೆ.

ಸರ್ಕಾರದಿಂದ ಗುತ್ತಿಗೆ ಪಡೆದು ಹೆದ್ದಾರಿ ರಸ್ತೆ ನಿರ್ಮಾಣ ಮಾಡುವ ಸಂಸ್ಥೆ ಎಸ್ ಪಿಕೆ ಹಾಗೂ ಸಮೂಹ ಸಂಸ್ತೆಗಳ ಕಚೇರಿ, ಸಿಬ್ಬಂದಿಗಳ ಮನೆ ಮೇಲೆ ದಾಳಿ ನಡೆಸಲಾಗಿದೆ.

'ಲೆಕ್ಕಕ್ಕೆ ಸಿಗದ 160 ಕೋಟಿ ರು ಗೂ ಅಧಿಕ ನಗದು ವಶಪಡಿಸಿಕೊಳ್ಳಲಾಗಿದೆ. 100 ಕೆಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದ್ದು, ಇನ್ನೂ ಮೌಲ್ಯ ತಿಳಿದು ಬಂದಿಲ್ಲ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Income Tax Officials Recover Rs. 100 Crore, 90 Kg Bullion In Tamil Nadu

ಒಟ್ಟಾರೆ 22 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಚೆನ್ನೈನಲ್ಲಿ 17, ಅರುಪುಕೊಟ್ಟೈ(ವಿರುಧನಗರ್ ಜಿಲ್ಲೆ), ಕಟ್ಪಾಡಿ(ವೆಲ್ಲೂರು) ಹಾಗೂ ಇತೆರೆಡೆಗಳಲ್ಲಿ ದಾಳಿ ನಡೆದಿದೆ.

ಅಪಾರ ಪ್ರಮಾಣದ ನಗದನ್ನು ಟ್ರಾವೆಲ್ ಬ್ಯಾಗಿನಲ್ಲಿ ಹಾಕಿ, ಪಾರ್ಕಿಂಗ್ ಮಾಡಿದ ಕಾರುಗಳಲ್ಲಿ ತುಂಬಿಸಿಡಲಾಗಿತ್ತು. ಜತೆಗೆ ಅನೇಕ ಚಿನ್ನದ ಬಿಸ್ಕತ್ತುಗಳು ಸಿಕ್ಕಿವೆ. ದಾಳಿಯ ಬಗ್ಗೆ ಮುಂಚಿತವಾಗಿ ಸುಳಿವು ಸಿಕ್ಕಿ, ನಗದು,ಚಿನ್ನಾಭರಣಗಳನ್ನು ಬೇರೆಡೆಗೆ ಸಾಗಿಸುವ ಯೋಜನೆ ಹಾಕಿಕೊಟ್ಟಂತೆ ತೋರುತ್ತದೆ ಎಂದು ಅಧಿಕಾರಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+