ವಿವಿ ಮಿನರಲ್ಸ್‌ಗೆ ಐಟಿ ಶಾಕ್: ನೂರಕ್ಕೂ ಹೆಚ್ಚು ಕಚೇರಿಗಳ ಮೇಲೆ ದಾಳಿ

ಚೆನ್ನೈ, ಅಕ್ಟೋಬರ್ 25: ಅಪರೂಪದ ಭೂಖನಿಜಗಳು ಮತ್ತು ಗಾರ್ನೆಟ್‌ಗಳ ದೇಶದ ಅತಿ ದೊಡ್ಡ ರಫ್ತುದಾರ ಕಂಪೆನಿಗಳಲ್ಲಿ ಒಂದಾದ ವಿವಿ ಮಿನರಲ್ಸ್‌ಗೆ ಸೇರಿದ ನೂರಕ್ಕೂ ಅಧಿಕ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಗುರುವಾರ ದಾಳಿ ನಡೆಸಿದೆ.

ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿನ ವಿವಿ ಮಿನರಲ್ಸ್‌ನ ನೂರಾರು ಕಚೇರಿಗಳಲ್ಲದೆ, ಇನ್ನೂ ನಾಲ್ಕು ಇತರೆ ಸಂಸ್ಥೆಗಳ ಮೇಲೆಯೂ ಐಟಿ ದಾಳಿ ನಡೆದಿದೆ.

ತಮಿಳುನಾಡಿನ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿರುವ 18 ಶಾಸಕರ ಅನರ್ಹತೆ ಪ್ರಕರಣದ ತೀರ್ಪಿನ ನಿರೀಕ್ಷೆಯಲ್ಲಿರುವಾಗಲೇ ಆದಾಯ ತೆರಿಗೆ ಅಧಿಕಾರಿಗಳ ಈ ದಾಳಿ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ವಿವಿ ಮಿನರಲ್ಸ್‌ನ ಮುಖ್ಯಸ್ಥ ಮತ್ತು ಉದ್ಯಮಿ ವೈಕುಂಠರಾಜನ್ ಅವರ ಚೆನ್ನೈ ನಿವಾಸದ ಮೇಲೆಯೂ ಪರಿಶೀಲನೆ ನಡೆಸಲಾಗಿದೆ.

ತಮಿಳುನಾಡಿನ ಕೊಯಮತ್ತೂರು, ತಿರುನೆಲ್ವೇಲಿ, ಕರೈಕಲ್, ತೂತುಕುಡಿ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣ ಮತ್ತು ಶ್ರೀಕಾಕುಳಂಗಳಲ್ಲಿ ಸುಮಾರು 400 ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ಈ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿವಿಧ ವಲಯಗಳಿಗೆ ಹೂಡಿಕೆ

ವಿವಿಧ ವಲಯಗಳಿಗೆ ಹೂಡಿಕೆ

ಮರಳು ಗಣಿಗಾರಿಕೆ ನಡೆಸಿ ರಹಸ್ಯವಾಗಿ ರಫ್ತು ಮಾಡುವ ಮೂಲಕ ಅಕ್ರಮವಾಗಿ ಲಾಭ ಗಳಿಸುತ್ತಿದ್ದ ನಾಲ್ಕು ಕಂಪೆನಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ಹಣವನ್ನು ಜವಳಿ ಉದ್ಯಮ, ಸಕ್ಕರೆ ಕಾರ್ಖಾನೆ, ಹೋಟೆಲ್, ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಗಡಿಯಾಚೆಗಿನ ವ್ಯವಹಾರಗಳಿಗೆ ಬಳಸಲಾಗುತ್ತಿತ್ತು ಎನ್ನಲಾಗಿದೆ.

ವೈಕುಂಠರಾಜನ್ ಅವರ ಒಡೆತನದ ತಮಿಳು ವಾಹಿನಿ ನ್ಯೂಸ್ 7ಅನ್ನು ಕೂಡ ಪರಿಶೀಲನೆಗೆ ಒಳಪಡಿಸಲಾಗಿದೆ.

Array

ಹಣಕಾಸು ಇಲಾಖೆ ಆದೇಶ

ಕೇಂದ್ರ ಹಣಕಾಸು ಸಚಿವಾಲಯದ ವಿತ್ತೀಯ ಗುಪ್ತಚರ ಘಟಕದ ಆದೇಶದ ಮೇರೆಗೆ ಈ ದಾಳಿಗಳನ್ನು ನಡೆಸಲಾಗಿದೆ. ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಮರ್ಪಕವಾಗಿ ಸಲ್ಲಿಸದ ಮತ್ತು ಕಂಪೆನಿಯು ಅಕ್ರಮ ಹಣ ಸಂಪಾದನೆ ಮಾಡಿರುವ ಆರೋಪಗಳ ಆಧಾರದಲ್ಲಿ ಈ ದಾಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಗಣಿಗಾರಿಕೆ ಆರೋಪ

ಅಕ್ರಮ ಗಣಿಗಾರಿಕೆ ಆರೋಪ

ವಿವಿ ಮಿನರಲ್ಸ್ ಸಾಕಷ್ಟು ವಿವಾದಕ್ಕೆ ಒಳಗಾದ ಕಂಪೆನಿ. ನದಿ ಪಾತ್ರಗಳಿಂದ ಮರಳು ಗಣಿಗಾರಿಕೆ ಮಾಡುವುದನ್ನು 2013ರಲ್ಲಿ ಮದ್ರಾಸ್ ಹೈಕೋರ್ಟ್ ನಿಷೇಧಿಸಿದ್ದರೂ, ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿತ್ತು ಎಂದು ಆರೋಪಿಸಲಾಗಿದೆ. 2017ರ ಏಪ್ರಿಲ್‌ನಲ್ಲಿ ಮದ್ರಾಸ್ ಹೈಕೋರ್ಟ್ ಮುಂದೆ ಸಲ್ಲಿಸಲಾದ ವರದಿಯಲ್ಲಿ, ವಿವಿ ಮಿನರಲ್ಸ್ ಯಾವುದೇ ಸಮರ್ಪಕ ದಾಖಲೆ ಪತ್ರಗಳಿಲ್ಲದೆ ಖನಿಜಗಳ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ಮಾಡುತ್ತಿದೆ ಎಂದು ಆರೋಪಿಸಲಾಗಿತ್ತು.

ತನ್ನ ಪರ ಎಂದು ವಾದಿಸಿದ್ದ ಕಂಪೆನಿ

ತಮಿಳುನಾಡು ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತು ಐಎಎಸ್ ಅಧಿಕಾರಿ ಗಗನದೀಪ್ ಸಿಂಗ್ ಬೇಡಿ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲಾಗಿತ್ತು. ಕೋರ್ಟ್ ಎದುರು ವಿವಿ ಮಿನರಲ್ಸ್, ಆ ವರದಿಯು ತನ್ನ ಪರವಾಗಿಯೇ ಇದೆ. ತನ್ನ ಮೇಲೆ ಯಾವುದೇ ಆರೋಪಗಳಿಲ್ಲ ಎಂದು ವಾದಿಸಿತ್ತು.

ಕಳೆದ ವರ್ಷವೂ ದಾಳಿ

ಕಳೆದ ವರ್ಷದ ಮಾರ್ಚ್‌ನಲ್ಲಿ ತೂತುಕುಡಿ ಜಿಲ್ಲಾಡಳಿತವು ವಿವಿ ಮಿನರಲ್ಸ್‌ನ ಉಗ್ರಾಣಗಳ ಮೇಲೆ ದಾಳಿಗಳನ್ನು ನಡೆಸಲು ತಂಡಗಳನ್ನು ರಚಿಸಿತ್ತು. ಕಂಪೆನಿಗೆ ಸೇರಿದ ಸ್ಥಳಗಳಲ್ಲಿ ಬೀಚ್ ಸ್ಯಾಂಡ್‌ಅನ್ನು ಸಂಗ್ರಹಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಈ ತಂಡಗಳು ತಪಾಸಣೆ ನಡೆಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+