ವಿದ್ಯಾರ್ಥಿನಿಯ ಎದುರಿಗೇ ಹಸ್ತಮೈಥುನ ಮಾಡಿದ ಸ್ವಚ್ಛತಾ ಸಿಬ್ಬಂದಿ!
ಚೆನ್ನೈ, ನವೆಂಬರ್ 23 : ಎಸ್ಆರ್‌ಎಂ ವಿಶ್ವವಿದ್ಯಾಲಯದ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಲಿಫ್ಟ್ ನಲ್ಲಿ ಸ್ವಚ್ಛತಾ ಸಿಬ್ಬಂದಿಯೊಬ್ಬ ವಿದ್ಯಾರ್ಥಿನಿಯೆದುರಿಗೇ ಹಸ್ತಮೈಥುನ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಿದ ಅಸಹ್ಯಕರ ಘಟನೆ ಗುರುವಾರ ನಡೆದಿದೆ.
ಈ ಘಟನೆಯಿಂದ ಕ್ರೋಧಿತರಾಗಿರುವ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ಶುರುವಾಗುತ್ತಲೇ ಈ ಕೃತ್ಯ ನಡೆಸಿದ ವ್ಯಕ್ತಿ ಕ್ಯಾಂಪಸ್ಸಿನಿಂದ ಪರಾರಿಯಾಗಿದ್ದು, ಆತನ ಹುಡುಕಾಟ ನಡೆಸಲಾಗುತ್ತಿದೆ.
ವಿದ್ಯಾರ್ಥಿನಿಯರ ಹಾಸ್ಟೆಲ್ ಒಳಗೆ ಆತ ಹೇಗೆ ನುಗ್ಗಿ ಇಂಥ ಕ್ರಿಯೆ ನಡೆಸಿರುವುದರಿಂದ ವಿಶ್ವವಿದ್ಯಾಲಯದ ಆಡಳಿತ ಭದ್ರತೆಯ ಪರಿಶೀಲನೆ ನಡೆಸಿದ್ದು, ಇದು ದುರಾದೃಷ್ಟಕರ ಘಟನೆಯಾಗಿದ್ದು, ಇಂಥ ಘಟನೆ ಮತ್ತೆ ನಡೆಯದಂತೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ. ಆದರೆ ಆಡಳಿತವರ್ಗದ ಸಮಜಾಯಿಷಿಯಿಂದ ವಿದ್ಯಾರ್ಥಿಗಳು ಸಂತುಷ್ಟರಾಗಿಲ್ಲ.

ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರಕಾರ, ಎರಡನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ, ಕಸ ತೆಗೆದುಕೊಂಡು ಹೋಗಲು ಬಂದಿದ್ದ ವ್ಯಕ್ತಿ ಆಕೆಯ ಎದುರಿಗೇ ಹಸ್ತಮೈಥುನ ಮಾಡಿಕೊಂಡು ಅಸಹ್ಯಕರವಾಗಿ ವರ್ತಿಸಿದ್ದಾನೆ. ಆಕೆ ಪರಾರಿಯಾಗಲು ಯತ್ನಿಸಿದಾಗ ಆಕೆಯನ್ನು ಅಡ್ಡಗಟ್ಟಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಕೂಡಲೆ ಆ ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಆ ಘಟನೆಯ ವಿವರ ನೀಡಿದ್ದಾಳೆ.
I hope this gets picked up by every media outlet, and let people know how utterly incompetent the authorities are at #SRM #SRMUniversity @ChennaiTimesTOI @IndiaMeToo pic.twitter.com/PHNnouRFW5
— raggabomb (@BigBongTragedy) November 22, 2018
ಸಿಸಿಟಿವಿಯಲ್ಲಿ ಪರಿಶೀಲಿಸಲಾಗಿ, ಆ ವಿದ್ಯಾರ್ಥಿನಿ ಆ ವ್ಯಕ್ತಿಯನ್ನು ಗುರುತಿಸಿದ್ದಾಳೆ. ಆದರೆ, ಈ ಘಟನೆಯ ಬಗ್ಗೆ ಯಾರಿಗೂ ತಿಳಿಸದೆ ಬಾಯಿಮುಚ್ಚಿಕೊಂಡಿರಬೇಕೆಂದು ಆಕೆಗೆ ಆಡಳಿತವರ್ಗ ಹೇಳಿದೆ. ಈ ವಿಷಯವನ್ನು ಹಾಸ್ಟೆಲ್ ವಾರ್ಡನ್ ಗೆ ತಿಳಿಸಿದಾಗ, ಸಿಸಿಟಿವಿ ಫುಟೇಜನ್ನು ನೋಡಲು ಎರಡು ಗಂಟೆ ತಡ ಮಾಡಿದ್ದಾರೆ ಮತ್ತು ಈ ವಿಷಯವನ್ನು ನೀನೊಬ್ಬಳೇ ಏಕಾಂಗಿಯಾಗಿ ಹೋಗಿ ತಿಳಿಸೆಂದು ವಾರ್ಡನ್ ಹೇಳಿದ್ದಾರೆ. ಇಷ್ಟೆಲ್ಲ ನಡೆದರೂ ಆಡಳಿತವರ್ಗ ಪೊಲೀಸರಿಗೆ ತಿಳಿಸದೆ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದು ವಿದ್ಯಾರ್ಥಿನಿಯರು ದೂರುತ್ತಿದ್ದಾರೆ.
This happened in broad daylight in #SRM today. The office of the Director of Student Affairs is a fucking joke. pic.twitter.com/MOpuFsthbI
— raggabomb (@BigBongTragedy) November 22, 2018
ಈ ಘಟನೆಯ ಹಿನ್ನೆಲೆಯಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ತಾಕಲಾಟ ಮತ್ತೆ ಭುಗಿಲೇಳುವಂತೆ ಮಾಡಿದೆ. ಇದನ್ನು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಗೆ ತಿಳಿಸಿದಾಗ, ಇದಕ್ಕೆಲ್ಲ ನೀವೇ ಕಾರಣ, ನೀವು ಇಲ್ಲಿ ಸಿಗರೇಟು ಸೇದುತ್ತೀರಿ, ಕುಡಿಯುತ್ತೀರಿ, ನೀವು ಉತ್ತರ ಭಾರತೀಯರು ಆಗಿದ್ದರಿಂದಲೇ ಹೀಗೆಲ್ಲ ಆಗಿದ್ದು ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ದೂರಲಾಗಿದೆ. ಉದ್ರಿಕ್ತ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಗುಂಪು ಗೇಟನ್ನು ಮುರಿದು ವಿಶ್ವವಿದ್ಯಾಲಯದೊಳಗೆ ನುಗ್ಗಲು ಯತ್ನಿಸಿದೆ.












Click it and Unblock the Notifications