ಸಿಎಎ ವಿರುದ್ಧ ಪ್ರತಿಭಟಿಸಿದ ವಿದ್ಯಾರ್ಥಿಯನ್ನು ದೇಶದಿಂದಲೇ ಹೊರಹಾಕಿದರು!

ಚೆನ್ನೈ, ಡಿಸೆಂಬರ್ 24: ಪ್ರತಿಭಟನೆ ಪ್ರಜಾಪ್ರಭುತ್ವದ ಚಾಟಿಗೋಲು ಎಂಬ ಮಾತುಗಳು ತೀರಾ ಇತ್ತೀಚಿನವರೆಗೂ ಇದ್ದವು. ಆದರೆ ಇತ್ತೀಚೆಗೆ ಪ್ರತಿಭಟನೆ ಮಾಡುವುದನ್ನು 'ದೇಶದ್ರೋಹ' ಎಂಬಂತೆ ಬಿಂಬಿಸಲಾಗುತ್ತಿದೆ.

ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದೇಶಿ ವಿದ್ಯಾರ್ಥಿಯೊಬ್ಬನನ್ನು ಭಾರತ ಬಿಟ್ಟೇ ಹೊರಗೆ ಅಟ್ಟಿದ ಘಟನೆ ನಡೆದಿದೆ.

ಜರ್ಮನಿಯಿಂದ 'ಶಿಕ್ಷಣ ವಿನಿಮಯ' ಕಾರ್ಯಕ್ರಮದ ಅಡಿ ಭಾರತಕ್ಕೆ ಬಂದು ಚೆನ್ನೈನ ಐಐಟಿ ಮದ್ರಾಸ್‌ ನಲ್ಲಿ ಭೌತಶಾಸ್ತ್ರ ಅಧ್ಯಯನ ಮಾಡುತ್ತಿದ್ದ ಜರ್ಮನಿಯ ವಿದ್ಯಾರ್ಥಿಯೊಬ್ಬನನ್ನು ರಾತ್ರೋರಾತ್ರಿ ಭಾರತದಿಂದ ಹೊರಕ್ಕೆ ಕಳುಹಿಸಲಾಗಿದೆ. ಆತ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ.

German Student Sent Out From India For Protesting Against CAA

ವಿದ್ಯಾರ್ಥಿ ಜಾಕೋಬ್ ಲಿಂದೆಂತಾಲ್ ಕೆಲವು ದಿನಗಳ ಹಿಂದಷ್ಟೆ ಕಾಲೇಜಿನ ಕಡೆಯಿಂದ ಕ್ರೀಡಾಕೂಟದಲ್ಲಿ ಭಾಗವಹಿಸಲೆಂದು ಬೆಂಗಳೂರಿಗೆ ಬಂದಿದ್ದರು. ಇಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರು ಪೋಸ್ಟರ್ ಹಿಡಿದು ನಿಂತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇಷ್ಟೆ ಸಾಕಾಯ್ತು ಅವರನ್ನು ಜರ್ಮನಿಗೆ ವಾಪಸ್ ಕಳುಹಿಸಲು.

ಜಾಕೋಬ್ ಪ್ರತಿಭಟನೆ ಮಾಡಿದ ವಿಷಯ ಗೊತ್ತಾದ ಕೂಡಲೇ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ ಜಾಕೋಬ್‌ ಗೆ ಮೇಲ್ ಹೋಗಿದೆ. ನಂತರ ಅವರು ಕೂಡಲೇ ಚೆನ್ನೈ ಗೆ ತೆರಳಿದಾಗ, ಅಲ್ಲಿನ ಅಧಿಕಾರಿಯೊಬ್ಬರು ಈ ಕೂಡಲೇ ಜರ್ಮನಿಗೆ ಹಿಂದಿರುಗುವಂತೆ 'ಮೌಖಿಕ ಆದೇಶ' ನೀಡಿದ್ದಾರೆ.

ಮೌಖಿಕ ಆದೇಶ ನೀಡುವ ಮೊದಲು, ಜಾಕೋಬ್‌ ಗೆ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಅಧಿಕಾರಿಗಳು ಸಿಎಎ ಬಗ್ಗೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಅಷ್ಟೆ ಅಲ್ಲದೆ, ಮಾರ್ಕ್ಸಿಸ್ಟ್‌ ಗ್ರೂಪ್ ಮತ್ತು ಐಐಟಿ ಯಲ್ಲಿನ 'ಚಿಂತನಾ ಬಾರ್' ಸಂಘಟನೆಯ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದ್ದಾರೆ.

German Student Sent Out From India For Protesting Against CAA

'ಸಿಎಎ ಪ್ರತಿಭಟನೆಗೆ ಹೋಗಬಾರದಿತ್ತು, ಕಾಯ್ದೆಯ ಬಗ್ಗೆ ನಿನಗೆ ಮಾಹಿತಿ ಇಲ್ಲ' ಎಂಬ ಸಲಹೆಯನ್ನೂ ಅಧಿಕಾರಿಗಳು ಜಾಕೋಬ್‌ ಗೆ ನೀಡಿದ್ದಾರೆ. ಆದರೆ ಆ ಸಮಯದಲ್ಲಿ ಜಾಕೋಬ್ 'ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ, ಹಾಗಾಗಿ ಪ್ರತಿಭಟಿಸಿದೆ' ಎಂದು ದಿಟ್ಟ ಉತ್ತರ ನೀಡಿದ್ದಾರೆ.

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದು ವೀಸಾ ನಿಯಮದ ಉಲ್ಲಂಘನೆ ಆಗಿದೆ, ಕೂಡಲೇ ದೇಶವನ್ನು ತೊರೆದು ಹೋಗಬೇಕು ಎಂದು ಅಧಿಕಾರಿಗಳು ಜೋಕೋಬ್‌ ಗೆ ಹೇಳಿದ್ದಾರೆ. ಜಾಕೋಬ್ ಸೋಮವಾರ ರಾತ್ರಿ ಜರ್ಮನಿಗೆ ತೆರಳಿದ್ದಾರೆ. ಹೋಗುವ ಮುನ್ನಾ ಇಲ್ಲಿ ನಡೆದಿದ್ದೆಲ್ಲವನ್ನೂ ಸುದ್ದಿಗಾರರಿಗೆ ತಿಳಿಸಿಯೇ ಹೋಗಿದ್ದಾರೆ.

ಬೆಂಗಳೂರಲ್ಲಿ ಪ್ರತಿಭಟನೆ ಮಾಡಿದ್ದ ಜಾಕೋಬ್ ಭಿತ್ತಿಪತ್ರವೊಂದನ್ನು ಹಿಡಿದಿದ್ದರು. ಅದರಲ್ಲಿ 'ನಾವು ಇದನ್ನು ಅನುಭವಿಸಿದ್ದೇನೆ, 1935-1944 ರ ಅವಧಿಯಲ್ಲಿ' ಎಂದು ಬರೆದಿತ್ತು. ಹಿಟ್ಲರ್‌ನು ಜರ್ಮನಿಯನ್ನು ಆಳಿದ್ದ 1935 ರಿಂದ 1945 ರ ವರೆಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+