ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ: 4 ದಿನಗಳಲ್ಲಿ 4ನೇ ಘಟನೆ- ಜನರಲ್ಲಿ ಆತಂಕ

ಚೆನ್ನೈ ಮಾರ್ಚ್ 30: ಇತ್ತೀಚೆಗೆ ವಿದ್ಯುತ್ ಚಾಲಿತ ವಾಹನಗಳು ಬೆಂಕಿಗೆ ಆಹುತಿಯಾಗುತ್ತಿರುವ ಘಟನೆಗಳು ಮರುಕಳಿಸುತ್ತಿದ್ದು ಜನರಲ್ಲಿ ವಾಹನಗಳ ಬಗ್ಗೆ ಆತಂಕ ಹೆಚ್ಚಾಗಿದೆ. ಓಲಾ ಮತ್ತು ಓಕಿನಾವಾ ಆಟೋಟೆಕ್‌ನ ಎಲೆಕ್ಟ್ರಿಕ್ ವಾಹನಗಳು (ಇವಿಗಳು) ಬೆಂಕಿಗೆ ಆಹುತಿಯಾದ ಪ್ರಕರಣಗಳು ಹಿಂದೆ ಬೆಳಕಿಗೆ ಬಂದಿದ್ದವು. ಇಂದು ತಮಿಳುನಾಡು ರಾಜಧಾನಿ ಚೆನ್ನೈನಿಂದ ಅಂತಹುದೇ ಘಟನೆ ವರದಿಯಾಗಿದೆ. ಈ ಬಾರಿ ಹೈದರಾಬಾದ್ ಸ್ಟಾರ್ಟ್ಅಪ್ ಪ್ಯೂರ್ ಇವಿ ತಯಾರಿಸಿದ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾಗಿದ್ದು, ಇವಿಗಳ ಸುರಕ್ಷತೆಯ ಬಗ್ಗೆ ಕಳವಳ ಮೂಡಿಸಿದೆ.

ಉತ್ತರ ಚೆನ್ನೈನ ಜನವಸತಿ ಪ್ರದೇಶವಾದ ಮಂಜಂಪಕ್ಕಂನ ಮಾಥುರ್ ಟೋಲ್ ಪ್ಲಾಜಾ ಬಳಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಸ್ಕೂಟರ್‌ನಿಂದ ಹೊಗೆ ಬರುವುದು ಕಂಡುಬಂದಿದೆ. 26 ಸೆಕೆಂಡ್‌ಗಳ ವೀಡಿಯೊದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿರುವ ಕೆಂಪು ಬಣ್ಣದ ವಿದ್ಯುತ್ ಚಾಲಿತ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಾಲ್ಕು ದಿನಗಳಲ್ಲಿ ಇದು ನಾಲ್ಕನೇ ಘಟನೆಯಾಗಿದೆ.

ಮಾರ್ಚ್ 28 ರಂದು ಪುಣೆಯಲ್ಲಿ ಓಲಾ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿತ್ತು. ಘಟನೆ ನಡೆದಾಗ ರಸ್ತೆಬದಿಯಲ್ಲಿ ಇವಿ ನಿಲ್ಲಿಸಲಾಗಿತ್ತು. ಅರ್ಧ-ನಿಮಿಷದ ವೀಡಿಯೊದಲ್ಲಿ ಮಿಡ್‌ನೈಟ್ ಬ್ಲೂ ಬಣ್ಣದ Ola S1 ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಾಹನದಲ್ಲಿ ಮೊದಲು ಸ್ವಲ್ಪ ಹೊಗೆ ಕಾಣಿಸಿಕೊಂಡಿದೆ. ನಂತರ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Electric Scooter from Pure EV Catches Fire In Chennai, 4th Incident reported In 4 Days

Ola S1 Pro ಕಳೆದ ವರ್ಷ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತು. ಓಲಾ ಎಲೆಕ್ಟ್ರಿಕ್ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದೆ ಮತ್ತು ಸಮಸ್ಯೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಮುಂದಿನ ದಿನಗಳಲ್ಲಿ ತನಿಖೆ ಮುಗಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಕಂಪನಿ ಭರವಸೆ ನೀಡಿದೆ.

Electric Scooter from Pure EV Catches Fire In Chennai, 4th Incident reported In 4 Days

ಓಲಾ ಸ್ಕೂಟರ್‌ನ ಘಟನೆಯ ನಂತರ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದ್ದು, ಎಲೆಕ್ಟ್ರಿಕ್ ವಾಹನಗಳು ಅಥವಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾದ ಲಿಥಿಯಂ-ಐಯಾನ್ ಬ್ಯಾಟರಿಗಳು ಸರಿಯಾಗಿ ತಯಾರಿಸದಿದ್ದರೆ ಅಥವಾ ಹಾನಿಗೊಳಗಾಗಿದ್ದರೆ ಬ್ಯಾಟರಿಗೆ ಬೆಂಕಿ ಹತ್ತಬಹುದು ಎಂದು ಹೇಳಿದೆ. ಹೀಗಾಗಿ ಇದನ್ನು ಸರಿಯಾಗಿ ವಿನ್ಯಾಸಗೊಳಿಸಲಾಗಿಲ್ಲ ಎಂದು ಹೇಳಲಾಗಿದೆ.

Electric Scooter from Pure EV Catches Fire In Chennai, 4th Incident reported In 4 Days

ಓಲಾ ಕಂಪನಿಯ ಅಧಿಕಾರಿಗಳು ಕಂಪನಿಯು ತನ್ನ ಬ್ಯಾಟರಿ ಸೆಲ್‌ಗಳನ್ನು ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳುತ್ತದೆ. ಆದರೆ ಇವುಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+