ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಸತ್ತಿದ್ದು ಬಹುಅಂಗ ವೈಫಲ್ಯದಿಂದ : ಡಾ. ಬೇಲ್

ಜಯಲಲಿತಾ ಸಾವಿಗೆ ಸಂಬಂಧಿಸಿದಂತೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದವು. ಕೆಲವರು ಅದು ಕೊಲೆ, ಇದರ ಹಿಂದೆ ಹಲವರ ಸಂಚಿದೆ ಎಂದು ದೂರಿದ್ದರು. ಇದಕ್ಕೆ ಉತ್ತರ ನೀಡಿರುವ ಡಾ. ಬೇಲ್ ಎಲ್ಲ ಊಹಾಪೋಹಗಳನ್ನು ದೂರ ಮಾಡಿದ್ದಾರೆ.

By Prasad
|
Google Oneindia Kannada News

ಚೆನ್ನೈ, ಫೆಬ್ರವರಿ 06 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಜೆ. ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿ ಸತ್ತಿದ್ದು ಹೇಗೆ? ಅವರ ಸಾವಿನ ಹಿಂದೆ ಯಾರದಾದರೂ ಸಂಚಿತ್ತಾ? ಅವರು ಸಹಜವಾಗಿ ಸಾವನ್ನಪ್ಪಿದರಾ? ಅವರನ್ನು ಕೊಲೆ ಮಾಡಲಾಯಿತಾ?

ಜಯಲಲಿತಾ ಅವರು ಸಾವಿಗೀಡಾಗಿ ಎರಡು ತಿಂಗಳು ಕಳೆದಿವೆ. ಈ ಪ್ರಶ್ನೆಗಳಿಗೆ ಇನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ, ಈ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ ಅವರಿಗೆ ಚಿಕಿತ್ಸೆ ನೀಡಿದ ಡಾ. ರಿಚರ್ಡ್ ಬೇಲ್ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ಜಯಲಲಿತಾ ಅವರ ಸಾವು ಕುರಿತಂತೆ ಹರಿದಾಡುತ್ತಿದ್ದ ಎಲ್ಲ ಊಹಾಪೋಹಗಳನ್ನು ಡಾ. ರಿಚರ್ಡ್ ಬೇಲ್ ತಳ್ಳಿಹಾಕಿದ್ದಾರೆ. [ಶಶಿಕಲಾ ಹಣೆಬರಹ ನಿರ್ಧರಿಸಲಿರುವ ಸುಪ್ರೀಂ ತೀರ್ಪು!]

Dr.Richard Beale talks about Jayalalithaa's death in Chennai

ಡಾ. ರಿಚರ್ಡ್ ಬೇಲ್ ಅವರ ಮಾತಿನ ಸಾರಾಂಶ ಇಲ್ಲಿದೆ.

* ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ ಸೇರಿದಾಗ ಅವರು ಸ್ಪಂದಿಸುತ್ತಿರಲಿಲ್ಲ. ನಂತರ ಆರೋಗ್ಯ ಸುಧಾರಿಸಿದಂತೆ ಮಾತುಗಳಿಗೆ ಸ್ಪಂದಿಸಲು ಆರಂಭಿಸಿದರು.

* ಅವರಿಗೆ ಚಿಕಿತ್ಸೆ ಕೊಡುವ ಮುನ್ನ ಅವರೊಂದಿಗೆ ಮಾತನಾಡಿದ್ದೆ. ಪತ್ರಗಳಿಗೆ ಸಹಿ ಕೂಡ ಹಾಕಿಸಿಕೊಳ್ಳಲಾಗಿತ್ತು. ಅವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗಿತ್ತು.

* ನಂತರ ಸೋಂಕು ತಗುಲಿದ್ದು ಆರೋಗ್ಯ ಹದಗೆಡಲು ಶುರುವಾಯಿತು. ಆದರೆ, ಜಯಲಲಿತಾ ಅವರು ಆರೋಗ್ಯ ದಿಢೀರನೆ ಕುಸಿಯುತ್ತದೆಂದು ನಿರೀಕ್ಷಿಸಿರಲಿಲ್ಲ.

* ಸೆಪ್ಸಿಸ್ (Sepsis is a life-threatening condition that arises when the body's response to infection injures its own tissues and organs.) ನಿಂದಾಗಿ ಅವರ ಅಂಗಾಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲು ಆರಂಭಿಸಿದವು.

* ಐಸಿಯುನಲ್ಲಾಗಲಿ, ವಾರ್ಡುಗಳಲ್ಲಾಗಲಿ ಸಿಟಿಟಿವಿ ಇರುವುದಿಲ್ಲ. ಇದ್ದರೂ ಅವುಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುವುದಿಲ್ಲ.

* ವಾಡಿಕೆಯಂತೆ ರೋಗಿಗಳ ಫೋಟೋ ತೆಗೆಯುವುದಾಗಲಿ ಮತ್ತು ಖಾಸಗಿ ವಿಷಯಗಳನ್ನು ಪ್ರಕಟ ಮಾಡುವುದಕ್ಕಾಗಲಿ ಅವಕಾಶವಿರುವುದಿಲ್ಲ. ಇದು ರೋಗಿಗಳ ಖಾಸಗಿತನದ ಮೇಲೆ ಸವಾರಿ ಮಾಡಿದಂತೆ.

* ಜಯಲಲಿತಾ ಅವರು ಅಂತಿಮವಾಗಿ ಸತ್ತಿದ್ದು ಬಹುಅಂಗ ವೈಫಲ್ಯದಿಂದ. ಅಂತಿಮವಾಗಿ ಹೃದಯಾಘಾತವಾಗಿ ಅವರು ಸಾವಿಗೀಡಾದರು.

English summary
Dr.Richard Beale, who treated Dr Jayalalithaa at Apollo hospital in Chennai speaks about the incidents which lead to the death of former CM of Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X