ಲೈಂಗಿಕ ಕಿರುಕುಳ : ಕ್ಯಾಪ್ಟನ್ ಟಿವಿ ಸಂಪಾದಕ ಬಂಧನ

ಕ್ಯಾಪ್ಟನ್ ಟಿವಿ ಕಂಪನಿಯ ಮಾಜಿ ಉದ್ಯೋಗಿ ನೀಡಿದ ದೂರಿನ ಅನ್ವಯ ಭಾನುವಾರ ಬೆಳಗ್ಗೆ ಕ್ಯಾಪ್ಟನ್ ಟಿವಿ ಸಂಪಾದಕರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಸಂಪಾದಕರ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದು, ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸುವ ಸಾಧ್ಯತೆ ಇದೆ. [ತೆಹೆಲ್ಕಾ ಸಂಪಾದಕರ ಬಂಧನ]
ಸಂಪಾದಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಕಂಪೆನಿಯ ಮಾಜಿ ಉದ್ಯೋಗಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಚೆನ್ನೈ ಪೊಲೀಸರು ಕ್ಯಾಪ್ಟನ್ ಟಿವಿಯ ಸಂಪಾದಕರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಸಂಪಾದಕರ ಮೇಲೆ ಯುವತಿ ಮಾಡಿರುವ ದೂರನ್ನು ಕಂಪೆನಿಯ ಉದ್ಯೋಗಿಗಳು ತಳ್ಳಿ ಹಾಕಿದ್ದಾರೆ.
ಯುವತಿಯನ್ನು ಕೆಲವು ದಿನಗಳ ಹಿಂದೆ ಕಂಪೆನಿ ಕೆಲಸದಿಂದ ತೆಗೆದು ಹಾಕಿತ್ತು. ಇದಕ್ಕೆ ಪ್ರತಿಕಾರವಾಗಿ ಇಂತಹ ಸುಳ್ಳು ಆಪಾದನೆ ಮಾಡಿದ್ದಾರೆಂದು ಕ್ಯಾಪ್ಟನ್ ಕಂಪನಿಯ ಉದ್ಯೋಗಿಗಳು ಯುವತಿ ಮೇಲೆ ಆರೋಪ ಮಾಡಿದ್ದಾರೆ. ವಿಚಾರಣೆ ನಂತರ ಆರೋಪದ ಸತ್ಯಾಸತ್ಯತೆ ಹೊರಬೀಳಲಿದೆ.
ಕೆಲವು ದಿನಗಳ ಹಿಂದೆ ತೆಹಲ್ಕಾ ಪತ್ರಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಗೋವಾ ಪೊಲೀಸರು ಬಂಧಿಸಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.












Click it and Unblock the Notifications