ಲೋಕಸಭಾ ಚುನಾವಣೆ ಗೆಲ್ಲೋದು ಯಾರು? ಬಾಬಾ ರಾಮದೇವ್ ಗೂ ಅನುಮಾನ!
Recommended Video

ಲೋಕಸಭಾ ಚುನಾವಣೆ 2019ರ ಬಗ್ಗೆ ಯೋಗ ಗುರು ಬಾಬಾ ರಾಮದೇವ್ ಹೇಳಿದ್ದು ಹೀಗೆ | Oneindia Kannada
ಮಧುರೈ, ಡಿಸೆಂಬರ್ 26: ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವವರು ಯಾರು?
ಇಷ್ಟು ದಿನ ಎನ್ ಡಿಎ ಯೇ ಮತ್ತೆ ಅಧಿಕಾರಕ್ಕೆ ಬರುವುದು ಎನ್ನುತ್ತಿದ್ದ ಎನ್ ಡಿಎ ಬೆಂಬಲಿಗರು ಕೆಲವರಲ್ಲೂ ಇದೀಗ ಅನುಮಾನ ಆರಂಭವಾಗಿದೆ. ಯೋಗಗುರು ಬಾಬಾ ರಾಮದೇವ್ ಅವರೂ '2019 ರ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂದು ಊಹಿಸುವುದು ಕಷ್ಟ' ಎಂದಿದ್ದಾರೆ. ಈ ಮೂಲಕ ಬಿಜೆಪಿಗೆ ಈ ಚುನಾವಣೆ ಸುಲಭವಿಲ್ಲ ಎಂಬ ಸಂದೇಶ ನೀಡಿದ್ದಾರೆ.

ತಮಿಳುನಾಡಿನ ಮಧುರೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯದ ಬಗ್ಗೆ ಗಮನ ನೀಡುತ್ತಿಲ್ಲ. ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ನಾನು ಬೆಂಬಲಿಸುವುದಿಲ್ಲ ಎಂದು ಅವರು ಹೇಳಿದರು.
"ನಮಗೆ ರಾಜಕೀಯ ಅಥವಾ ಧಾರ್ಮಿಕ ಉದ್ದೇಶದ ದೇಶ ಬೇಕಿಲ್ಲ. ನಮಗೆ ಬೇಕಿರುವುದು ಅಧ್ಯಾತ್ಮಿಕ ದೇಶ ಮತ್ತು ಅಧ್ಯಾತ್ಮಿಕ ಜಗತ್ತು. ಯೋಗ ಮತ್ತು ವೈದಿಕ ಆಚರಣೆಗಳಿಂದ ನಾವು ದೈವಿಕ, ಸಮೃದ್ಧಿಯ, ಆಧ್ಯಾತ್ಮಿಕ ಭಾರತವನ್ನು ನಿರ್ಮಿಸುತ್ತಿದ್ದೇವೆ" ಎಂದು ಅವರು ಹೇಳಿದರು.












Click it and Unblock the Notifications