ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಸಜೀವ ಗುಂಡುಗಳು ಪತ್ತೆ
ಕೊಯಮತ್ತೂರು, ಸೆಪ್ಟೆಂಬರ್ 26: ಇಲ್ಲಿನ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಸಜೀವ ಗುಂಡುಗಳು ಪತ್ತೆಯಾಗಿವೆ.
ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಶೌಚಾಲಯದಲ್ಲಿ ನಾಲ್ಕು ಸಜೀವ ಗುಂಡುಗಳು, ಎರಡು ಬಳಸಿರುವ ಬುಲೆಟ್‌ಗಳು ಸಿಕ್ಕಿವೆ. ಪುರುಷರ ಶೌಚಾಲಯದಲ್ಲಿ ಗುಂಡುಗಳು ಸಿಕ್ಕಿವೆ, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಪೀಲಮೇಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪುರುಷರ ಶೌಚಾಲಯವನ್ನು ಶುಚಿ ಮಾಡಲು ತೆರಳಿದ್ದಾಗ, ಕೆಲಸವರಿಗೆ ಈ ಗುಂಡುಗಳು ದೊರೆತಿವೆ.ವೆಸ್ಟರ್ನ್ ಟಾಯ್ಲೆಟ್ ಕಮೋಡ್‌ನಲ್ಲಿ ಗುಂಡುಗಳು ಪತ್ತೆಯಾಗಿದ್ದವು. ಕಂಡ ಬಳಿಕವೇ ಉನ್ನತ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಅದನ್ನು ಪೊಲೀಸರಿಗೆ ನೀಡಲಾಯಿತು.

7.62 ಎಂಎಂ ಬುಲೆಟ್, ಎರಡು 9 ಎಂಎಂ ಬುಲೆಟ್, ಒಂದು .380 ಎಂಎಂ ಬುಲೆಟ್ ಎಂದು ದೂರಿನಲ್ಲಿ ದಾಖಲಿಸಲಾಗಿದೆ. ಹಾಗೆಯೇ ಬಳಸಿರುವ ಎರಡು ಬುಲೆಟ್‌ಗಳು ಕೂಡ ಅದರಲ್ಲಿತ್ತು.
ಏರ್‌ಪೋರ್ಟ್‌ನಲ್ಲಿ ಸೆಕ್ಯುರಿಟಿ ಚೆಕ್‌ಗೆ ಹೋಗುವ ಮುನ್ನ ಗುಂಡುಗಳನ್ನು ಶೌಚಾಲಯದಲ್ಲಿ ಹಾಕಿರಬಹುದು ಎಂದು ಅಂದಾಜಿಸಲಾಗಿದೆ. ಸಿಸಿಟಿವಿ ಕ್ಯಾಮರಾ ಫೂಟೇಜ್‌ಗಳನ್ನು ಚೆಕ್ ಮಾಡುತ್ತಿದ್ದು, ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ಆರಂಭಗೊಂಡಿದೆ.












Click it and Unblock the Notifications