ಹಳಿತಪ್ಪಿದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲು

ಚೆನ್ನೈ, ಜೂ. 17 : ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಚೆನ್ನೈನಲ್ಲಿ ಹಳಿ ತಪ್ಪಿವೆ. ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಡಬೇಕಿದ್ದ ರೈಲುಗಳ ಸಂಚಾರ ವಿಳಂಬವಾಗಿದೆ.

ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಸುಮಾರು 2 ಕಿ.ಮೀ.ದೂರದಲ್ಲಿರುವ ಬೇಸಿನ್ ಬ್ರಿಡ್ಜ್ ಬಳಿ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ರೈಲಿನ 3 ಬೋಗಿಗಳು ಬುಧವಾರ ಬೆಳಗ್ಗೆ ಹಳಿ ತಪ್ಪಿವೆ. ರೈಲ್ವೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದು, ಬೋಗಿಯನ್ನು ಹಳಿಯ ಮೇಲಿಡುವ ಕಾರ್ಯಾಚರಣೆ ಆರಂಭಿಸಿದ್ದಾರೆ. [ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು]

rail

ರೈಲಿನ ಕೊನೆಯ ಮೂರು ಬೋಗಿಗಳು ಚಿಕ್ಕ ತಿರುವಿನ ಬಳಿ ಹಳಿ ತಪ್ಪಿವೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಯಾವುದೇ ಪ್ರಾಯಾಣಿಕರು ಗಾಯಗೊಂಡಿಲ್ಲ. ಆದರೆ, ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣದಿಂದ ಹೊರಡಬೇಕಿದ್ದ ಎಲ್ಲಾ ರೈಲುಗಳ ಸಂಚಾರದಲ್ಲಿ ವಿಳಂಬವಾಗಿದೆ. [ಮೈಸೂರು-ಚೆನ್ನೈ ನಡುವೆ ಸೆಮಿ ಸ್ಪೀಡ್ ರೈಲು ಸಂಚಾರ]

ಬುಧವಾರ ಮುಂಜಾಣೆ 4.30ರ ಸುಮಾರಿಗೆ ಈ ಅಪಘಾತ ನಡೆದಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮೊದಲ ಮತ್ತು ಎರಡನೇ ದರ್ಜೆಯ ಎಸಿ ಕೋಚ್‌ಗಳು ಹಳಿ ತಪ್ಪಿವೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. [ರೈಲ್ವೆ ಪ್ರಯಾಣ ದರ ತುಸು ದುಬಾರಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+