ತಮಿಳುನಾಡು: ಮತದಾರನ ಮನೆಯಲ್ಲಿ ಬಟ್ಟೆ ತೊಳೆದ ಎಐಎಡಿಎಂಕೆ ಅಭ್ಯರ್ಥಿ!

ಚೆನ್ನೈ, ಮಾರ್ಚ್ 23: ಮತದಾರರ ಮನ ಗೆಲ್ಲುವುದಕ್ಕೆ ಚುನಾವಣೆ ಹೊಸ್ತಿಲಿನಲ್ಲಿ ಅಭ್ಯರ್ಥಿಗಳು ಮಾಡುವ ಸರ್ಕಸ್ ಒಂದೊಂದಲ್ಲ. ಮಕ್ಕಳಿಗೆ ಸ್ನಾನ ಮಾಡಿಸುವುದು, ಪಾತ್ರೆ ತೊಳೆಯುವುದು, ಬಟ್ಟೆ ಒಗೆಯುವುದು ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ತಮಿಳುನಾಡಿನ ನಾಗಪಟ್ಟಣಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂಥದ್ದೇ ಒಂದು ಘಟನೆ ನಡೆದಿದೆ. ಅಖಿಲ ಭಾರತ ಅಮ್ಮ ದ್ರಾವಿಡ ಮುನ್ನೇತ್ರ ಕಳಗಂ(ಎಐಎಡಿಎಂಕೆ) ಪಕ್ಷದ ಅಭ್ಯರ್ಥಿ ತಂಗಾ ಕತಿರಾವಣನ್ ಅವರು ಬಟ್ಟೆ ತೊಳೆಯುವುದರ ಮೂಲಕ ಸುದ್ದಿ ಆಗಿದ್ದಾರೆ.

AIADMK Candidate Promised To Voters For Give Clothes Washing Machine After Winning Election

ಮತಯಾಚನೆ ಮತ್ತು ಪ್ರಚಾರದ ಸಂದರ್ಭದಲ್ಲಿ ಮನೆ ಎದುರಿಗೆ ಬಟ್ಟೆಗಳನ್ನು ತೊಳೆದ ಎಐಎಡಿಎಂಕೆ ಅಭ್ಯರ್ಥಿಯು ಈ ಬಾರಿ ತಾವು ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ವಾಶಿಂಗ್ ಮಷಿನ್ ಅನ್ನು ಉಚಿತವಾಗಿ ನೀಡುತ್ತೇನೆ ಎಂದು ಘೋಷಿಸಿದರು.

ಒಂದು ಹಂತದಲ್ಲಿ ತಮಿಳುನಾಡು ಚುನಾವಣೆ:

ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+