• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಿರುಗಿ ಬಿದ್ದ ಪನ್ನೀರ್, ತ.ನಾಡು ರಾಜಕೀಯದ 8 ಸಾಧ್ಯತೆ

By ವಿಕಾಸ್ ನಂಜಪ್ಪ
|

ಚೆನ್ನೈ, ಫೆಬ್ರವರಿ 8: ಮುಂದಿನ ದಿನಗಳು ತಮಿಳುನಾಡಿನಲ್ಲಿ ಹೇಗಿರಲಿವೆ ಎಂಬುದು ಬಹಳ ಆಸಕ್ತಿಕರವಾಗಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಿರುದ್ಧ ಒ.ಪನ್ನೀರ್ ಸೆಲ್ವಂ ಬಂಡಾಯದ ಬಾವುಟ ಹಾರಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆಗಳಿವೆ.

ಮಂಗಳವಾರ ರಾತ್ರಿ ಪನ್ನೀರ್ ಸೆಲ್ವಂ ಹೊಸ ಕಿಡಿಯೊಂದನ್ನು ಹೊತ್ತಿಸಿದ್ದಾರೆ. ತನ್ನ ಪಕ್ಷದವರಿಂದಲೇ ಅವಮಾನ ಆಗಿದ್ದರಿಂದ ಒತ್ತಡದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದಿದ್ದಾರೆ. ಪಕ್ಷ ಬಯಸುವುದಾದರೆ ತಮ್ಮ ರಾಜೀನಾಮೆ ನಿರ್ಧಾರ ಹಿಂಪಡೆಯುವ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವುದಾಗಿ ಕೂಡ ಹೇಳಿದ್ದಾರೆ.[ಪನ್ನೀರ್ ಗೆ ಇದ್ದಕ್ಕಿದ್ದಂತೆ ಏನಾಯಿತು? ಯಾಕೆ ಹೀಗೆ ಆಡ್ತಿದ್ದಾರೆ?]

ಒಂದು ವೇಳೆ ಪನ್ನೀರ್ ಸೆಲ್ವಂ ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದರೆ ಏನಾಗಬಹುದು? ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಹೇರಬಹುದಾ? ಇಂಥ 'ರೆ' ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮುಂದಿನ ಸಾಧ್ಯಾಸಾಧ್ಯತೆಗಳನ್ನು ಈ ವರದಿಯಲ್ಲಿ ವಿವರಿಸಲಾಗಿದೆ. ತಮಿಳುನಾಡಿನ ರಾಜಕೀಯದಲ್ಲಿ ಮುಂದೇನಾಗಬಹುದು- ಎಂಟು ಅಂಶಗಳ ವಿವರಣೆ ಇಲ್ಲಿದೆ.

ಒಂದು ವೇಳೆ ಪನ್ನೀರ್ ಸೆಲ್ವಂ ತಮ್ಮ ರಾಜೀನಾಮೆಯನ್ನು ಹಿಂಪಡೆದರೆ?

ಒಂದು ವೇಳೆ ಪನ್ನೀರ್ ಸೆಲ್ವಂ ತಮ್ಮ ರಾಜೀನಾಮೆಯನ್ನು ಹಿಂಪಡೆದರೆ?

ಹೌದು, ಅವರು ಹಿಂಪಡೆಯಬಹುದು. ಒತ್ತಡದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ರಾಜ್ಯಪಾಲರಿಗೆ ಹೇಳಬಹುದು. ಈ ವಿಚಾರವನ್ನು ರಾಜ್ಯಪಾಲರು ಒಪ್ಪಿದರೆ ಮತ್ತು ಪನ್ನೀರ್ ಸೆಲ್ವಂ ಅಗತ್ಯ ಸಂಖ್ಯೆ ಸದಸ್ಯರ ಬಲ ತನಗಿದೆ ಎಂದು ಸಾಬೀತು ಪಡಿಸಿದರೆ, ಅವರು ರಾಜೀನಾಮೆ ಹಿಂಪಡೆಯುವ ನಿರ್ಧಾರವನ್ನು ಒಪ್ಪಬಹುದು.

ಎಷ್ಟು ಶಾಸಕರ ಬೆಂಬಲ ಒಪಿಎಸ್ ಗೆ ಬೇಕಾಗುತ್ತದೆ.

ಎಷ್ಟು ಶಾಸಕರ ಬೆಂಬಲ ಒಪಿಎಸ್ ಗೆ ಬೇಕಾಗುತ್ತದೆ.

ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು 117 ಶಾಸಕರ ಬೆಂಬಲ ಬೇಕಾಗುತ್ತದೆ.

ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬಹುದೇ?

ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬಹುದೇ?

ಈ ಸನ್ನಿವೇಶದಲ್ಲಿ ರಾಜ್ಯಪಾಲರು ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಿದರೆ ಒಪಿಎಸ್ ಮುಂದುವರಿಯಬಹುದು. ಈ ಸಮಸ್ಯೆಗೆ ಯಾವುದೇ ಪರಿಹಾರ ಸಿಗದಿದ್ದರೆ, ಶಶಿಕಲಾ ನಟರಾಜನ್ ತನಗೆ ಶಾಸಕರ ಬೆಂಬಲ ಇದೆ ಎಂದು ಪಟ್ಟು ಹಿಡಿದರೆ ಆಗ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬೀಳುವ ಪರಿಸ್ಥಿತಿ ಎದುರಾಗುತ್ತದೆ. ಅಂಥ ಪರಿಸ್ಥಿತಿಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಹೇರುವಂತೆ ಸಲಹೆ ಮಾಡಬಹುದು.

ರಾಜ್ಯಪಾಲರ ಆಯ್ಕೆಯಂತೆ ಮುಖ್ಯಮಂತ್ರಿಯನ್ನು ನೇಮಕ ಮಾಡಬಹುದಾ?

ರಾಜ್ಯಪಾಲರ ಆಯ್ಕೆಯಂತೆ ಮುಖ್ಯಮಂತ್ರಿಯನ್ನು ನೇಮಕ ಮಾಡಬಹುದಾ?

ರಾಜ್ಯಪಾಲರಿಗೆ ಯಾರು ಬಹುಮತ ಸಾಬೀತು ಮಾಡಬಲ್ಲರು ಎಂದು ಅನಿಸುತ್ತದೋ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಬಹುದು. ಒಂದು ವೇಳೆ ಸಂಘರ್ಷ ಇದೆಯೆಂದರೆ ಒಪಿಎಸ್ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶ ನೀಡಬಹುದು. ಅಂಥ ಸಂದರ್ಭದಲ್ಲಿ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದನ್ನು ಕಾದು ನೋಡಿ, ನಿರ್ಧಾರ ಕೈಗೊಳ್ಳಬೇಕು.

ಪನ್ನೀರ್ ಸೆಲ್ವಂ ಅವರನ್ನು ಡಿಎಂಕೆ ಬೆಂಬಲಿಸಬಹುದಾ?

ಪನ್ನೀರ್ ಸೆಲ್ವಂ ಅವರನ್ನು ಡಿಎಂಕೆ ಬೆಂಬಲಿಸಬಹುದಾ?

ಹೌದು. ಮುಂದಿನ ಚುನಾವಣೆವರೆಗೆ ಒಪಿಎಸ್ ನ ಬೆಂಬಲಿಸಬಹುದು. ಆದರೆ ರಾಜಕೀಯವಾಗಿ ಡಿಎಂಕೆ ಅದು ಸಾಧ್ಯವಾಗಲಾರದು. ಏಕೆಂದರೆ ಚುನಾವಣೆಗೆ ಇನ್ನೂ ನಾಲ್ಕು ವರ್ಷಗಳಿವೆ.

ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯಬಹುದಾ?

ಶಶಿಕಲಾ ನಟರಾಜನ್ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿಯಬಹುದಾ?

ಹೌದು. ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಕೆಯನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಕಾನೂನಾತ್ಮಕವಾಗಿ ಹಾಗೂ ಸಾಂವಿಧಾನಿಕವಾಗಿ ಆಕೆ ಮುಖ್ಯಮಂತ್ರಿಯಾಗುವುದಕ್ಕೆ ಅವಕಾಶ ಏನೂ ತಪ್ಪಿಲ್ಲ. ಒಂದು ವೇಳೆ ಪಕ್ಷದೊಳಗಿನ ಸಂಘರ್ಷ ಮುಂದುವರಿದರೆ ರಾಜ್ಯಪಾಲರು ಆಕೆ ಮುಖ್ಯಮಂತ್ರಿ ಆಗುವುದನ್ನು ತಡೆಯಬಹುದು.

ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿದರೆ ಏನಾಗುತ್ತದೆ?

ಪನ್ನೀರ್ ಸೆಲ್ವಂ ಅವರನ್ನು ಪಕ್ಷದಿಂದಲೇ ಉಚ್ಚಾಟನೆ ಮಾಡಿದರೆ ಏನಾಗುತ್ತದೆ?

ಶಶಿಕಲಾ ಅವರಿಗೆ ಒಪಿಎಸ್ ನ ಪಕ್ಷದಿಂದ ಹೊರಗೆ ಹಾಕುವ ಹಕ್ಕಿದೆ. ಆದರೆ ಅದರಿಂದ ತಕ್ಷಣವೇ ಪನ್ನೀರ್ ಸೆಲ್ವಂ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ದೂರ ಮಾಡಿದಂತೆ ಆಗುವುದಿಲ್ಲ. ರಾಜ್ಯಪಾಲರು ಒಪಿಎಸ್ ನೇ ಸಿಎಂ ಆಗಿ ಮುಂದುವರಿಯುವಂತೆ ಹೇಳಬಹುದು.

ಪಕ್ಷಾಂತರ ಕಾನೂನು ಜಾರಿಗೆ ಬರುಬಹುದಾ?

ಪಕ್ಷಾಂತರ ಕಾನೂನು ಜಾರಿಗೆ ಬರುಬಹುದಾ?

ಎಐಎಡಿಎಂಕೆಗೆ 135 ಸದಸ್ಯರಿದ್ದಾರೆ. ಈ ಕಾನೂನಿನ ಅನ್ವಯ ಮೂರನೇ ಎರಡರಷ್ಟು ಸದಸ್ಯರು ಇನ್ನೊಂದು ಪಕ್ಷದ ಜತೆ ಸೇರಬೇಕು. ಇಂಥ ಯಾವುದೇ ನಡೆಗೆ ಪಕ್ಷದ 90 ಸದಸ್ಯರು ಅಗತ್ಯ.

English summary
O Panneer Selvam dropped a bomb shell late Tuesday night when he said that he was humiliated by his party men which forced him to tender his resignation as the Chief Minister of Tamil Nadu. What if OPS decides to withdraw his resignation? Let us explore the various options and possibilities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X