ಗ್ಲಾಮರ್ ನಟಿ ನಮಿತಾ ಈಗ ಜಯಲಲಿತಾ ಪರ ಪ್ರಚಾರಕಿ!

Posted By:
Subscribe to Oneindia Kannada

ಚೆನ್ನೈ, ಏಪ್ರಿಲ್ 25: 'ಒಂದೇ ರೀತಿಯ ಪಾತ್ರಗಳು ಸಿಗುತ್ತಿದೆ ನನಗೆ ಬೋರ್ ಎನಿಸುತ್ತಿದೆ. ಹೀಗಾಗಿ ಹೊಸ ವೃತ್ತಿ ಕಡೆ ಗಮನ ಹರಿಸುತ್ತಿದ್ದೇನೆ' ಎಂದು ದಕ್ಷಿಣ ಭಾರತದ ಹಾಟ್ ತಾರೆ ನಮಿತಾ ಹೇಳಿ ಎರಡು ವರ್ಷಗಳೇ ಕಳೆದಿವೆ. ಈಗ ಕೊನೆಗೂ ಹೊಸ ವೃತ್ತಿಯನ್ನು ಆಕೆ ಕಂಡುಕೊಂಡಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ 2016ರಲ್ಲಿ ಸ್ಟಾರ್ ಪ್ರಚಾರಕಿಯಾಗಿ ಸೀರೆಯುಟ್ಟು ಪ್ರಚಾರಕ್ಕಿಳಿಯಲಿದ್ದಾರೆ.[ಜಯಾ ಪಕ್ಷದಿಂದ ನಟ ಶರತ್ ಕುಮಾರ್ ಗೆ ಟಿಕೆಟ್]

ಹೌದು, ನಮಿತಾ ಅಧಿಕೃತವಾಗಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆಡಳಿತಾರೂಧ ಎಐಎಡಿಎಂಕೆ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಜಯಲಲಿತಾ ಅವರು ನಮಿತಾ ಅವರನ್ನು ರಾಜಕೀಯವೆಂಬ ಹೊಸ ಗ್ಲಾಮರ್ ಲೋಕಕ್ಕೆ ಬರಮಾಡಿಕೊಂಡಿದ್ದಾರೆ.

ಹಾಗೆ ನೋಡಿದರೆ ನಮಿತಾ ಅವರು ರಾಜಕೀಯ ಸೇರುವ ಸುದ್ದಿ ಎರಡು ಮೂರು ವರ್ಷಗಳಿಂದ ಗಿರಕಿ ಹೊಡೆಯುತ್ತಲೇ ಇತ್ತು. ಕೈಲಿ ಸಿನಿಮಾ ಇಲ್ಲ, ರಾಜಕೀಯಕ್ಕೆ ಸೇರದೆ ಏನು ಮಾಡುತ್ತಾರೆ ಬಿಡಿ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ, ಸೂಕ್ತ ಕಾಲಕ್ಕೆ ಕಾಯುತ್ತಿದ್ದ ನಮಿತಾ ಅವರಿಗೆ 'ಅಮ್ಮ' ಪಕ್ಷದಿಂದ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿದೆ.[ಸಮೀಕ್ಷೆ: ತಮಿಳುನಾಡಿನಲ್ಲಿ ಮತ್ತೆ 'ಅಮ್ಮ' ದರ್ಬಾರ್]

ನಮಿತಾ ರಾಜಕೀಯ ಎಂಟ್ರಿ ಏಕೆ? ಅಭಿಮಾನಿಗಳಿಗೆ ನಮಿತಾ ಹೇಳಿದ್ದೇನು? ನಿಜಕ್ಕೂ ನಮಿತಾ ರಾಜಕೀಯ ಸೇರಲು ಅರ್ಹರೇ? ಮುಂದೆ ಓದಿ...

ಎಐಎಡಿಎಂಕೆ, ಜಯಾ ಬಗ್ಗೆ ಒಲವು ಏಕೆ?

ಎಐಎಡಿಎಂಕೆ, ಜಯಾ ಬಗ್ಗೆ ಒಲವು ಏಕೆ?

ಹಿಂದೊಮ್ಮೆ ಸಿನಿಮಾ ಶೂಟಿಂಗ್ ಬೋರ್ ಎನಿಸಿ ತನ್ನ ಆಪ್ತ ಸಹಾಯಕಿ ಜೊತೆಗೂಡಿ ತಮಿಳುನಾಡಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಸ್ಥೂಲ ಸುಂದರಿ ನಮಿತಾಳಿಗೆ ಎಲ್ಲೆಡೆ 'ಅಮ್ಮ'ನ ದರ್ಶನವಾಗಿದೆ. ಭಕ್ತಿ ಭಾವದಿಂದ ಅಮ್ಮನ ಬಗ್ಗೆ ಕೇಳಿ ತಿಳಿದುಕೊಂಡ ನಮಿತಾ ಮನದಲ್ಲಿ ರಾಜಕೀಯದಲ್ಲಿ ಬೆಳೆ ಬಿತ್ತುವ ಬಗ್ಗೆ ಆಸಕ್ತಿ ಬೆಳೆದಿದೆ. ಜಯಲಲಿತಾ ಅವರ ಕಾರ್ಯ ವೈಖರಿ ಬಗ್ಗೆ ನಾನು ಇಂಪ್ರೆಸ್ ಅಗಿದ್ದೇನೆ, ಜನಾನುರಾಗಿಯಾಗಿ ಅವರು ಮಾಡಿದ ಕಾರ್ಯಗಳು ಅನುಕರಣೀಯ ಎಂದಿದ್ದಾರೆ. [ಚುನಾವಣೆ: 41 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ]

ನಮಿತಾ ರಾಜಕಾರಣಿಯಾಗಲು ಅರ್ಹರೇ?

ನಮಿತಾ ರಾಜಕಾರಣಿಯಾಗಲು ಅರ್ಹರೇ?

ನಮಿತಾ ಬಿಎ ಲಿಟರೇಚರ್ ‌ನಲ್ಲಿ ಪದವಿ ಪಡೆದಿದ್ದಾರೆ. ಇಂಗ್ಲಿಷ್, ತಮಿಳು, ಹಿಂದಿ, ಗುಜರಾತಿಯಲ್ಲಿ ಮಾತನಾಡುವ ಚಾಕಚಕ್ಯತೆ ಇದೆ. ಸೂಕ್ಷ್ಮ ಮನಸ್ಸಿನ ನಮಿತಾ ವ್ಯವಹಾರ ಚತುರೆ. ಜನರ ಸಮಸ್ಯೆಗೆ ಸದಾಕಾಲ ಸ್ಪಂದಿಸುವ ಗುಣ ಆಕೆಗೆ ಮೊದಲಿನಿಂದಲೂ ಇದೆ. ರಾಜಕಾರಣಿಯಾಗಲು ಇಷ್ಟು ಅರ್ಹತೆ ಸಾಕು ಎನ್ನುತ್ತಾರೆ ಅಕೆ ಅಭಿಮಾನಿಗಳು

ಸೂರತ್ ಮೂಲದ ನಮಿತಾ ಪೂರ್ವಾಪರ

ಸೂರತ್ ಮೂಲದ ನಮಿತಾ ಪೂರ್ವಾಪರ

ಬಟ್ಟೆ ವ್ಯಾಪಾರಿಯೊಬ್ಬಳ ಮಗಳಾದ ಉತ್ತರದ ಬೆಡಗಿ 1998ರಲ್ಲಿ ನಮಿತಾರಿಗೆ ಮಿಸ್ ಸೂರತ್ ಪಟ್ಟ ಒಲಿಯಿತು. 2001ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಮಿತಾ ಕೇವಲ ಭಾರತದಲ್ಲಷ್ಟೆ ಅಲ್ಲ ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗವಿದೆ. ಕನ್ನಡ ಚಿತ್ರರಂಗಕ್ಕೆ ನಮಿತಾ ಎಂಟ್ರಿ ಕೊಟ್ಟಿದ್ದು 2006ರಲ್ಲಿ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಚಿತ್ರದ ಮೂಲಕ. ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. ತಮ್ಮ ಚೊಚ್ಚಲ ಚಿತ್ರದಲ್ಲೆ ನಮಿತಾ ಕನ್ನಡ ಪ್ರೇಕ್ಷಕರ ಹೃದಯ ಕದ್ದರು.

ತಮಿಳುನಾಡಿನಲ್ಲಿ ನಮಿತಾಗೆ ಅಪಾರ ಬೆಂಬಲವಿದೆ

ತಮಿಳುನಾಡಿನಲ್ಲಿ ನಮಿತಾಗೆ ಅಪಾರ ಬೆಂಬಲವಿದೆ

ತಮಿಳುನಾಡಿನಲ್ಲಿ ನಮಿತಾಗೆ ಅಪಾರ ಅಭಿಮಾನಿ ಬಳಗವಿದೆ. ಆದರೆ, ಅದೆಲ್ಲವೂ 2011ಕ್ಕೂ ಮುಂಚಿನ ಮಾತಾಯಿತು. ಈಗ ಜಯಲಲಿತಾ ಅವರ ಜನಪ್ರಿಯ ಯೋಜನೆಗಳ ಪ್ರಚಾರ ಮಾಡುವ ಮೂಲಕ ನಮಿತಾ ಜನರ ಗಮನ ಸೆಳೆಯಬೇಕಿದೆ. ರಾಜಕೀಯ ಸೇರಿ ಜನರಿಗೆ ಏನಾದರೂ ಒಳ್ಳೆದು ಮಾಡುವ ಹಂಬಲವಿದೆ. ಅಭಿಮಾನಿಗಳು ನನಗೆ ಕೊಟ್ಟಿರುವ ಪ್ರೀತಿಗೆ ನಾನು ಪ್ರತಿಯಾಗಿ ಏನಾದರೂ ಕೊಡಬೇಕು ಎನಿಸಿದೆ ಎಂದು ನಮಿತಾ ಹೇಳಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actress Namitha officially joined AIADMK in Trichy in , What Next?. Glam lass Namitha has been out of the news for a while. She finally decided to opt for alternative career options and one profession that is tailor-made for public figures is politics. She will appear as Star campaigner in Assembly Election 2016.
Please Wait while comments are loading...